More

    ಇಂಗ್ಲೆಂಡ್‌ಗೆ ಸುಲಭ ತುತ್ತಾದ ಆಸ್ಟ್ರೇಲಿಯಾ, ಮಾರ್ಗನ್ ಪಡೆಗೆ ಹ್ಯಾಟ್ರಿಕ್ ಜಯ

    ದುಬೈ: ಮಧ್ಯಮ ವೇಗದ ಬೌಲರ್ ಕ್ರಿಸ್ ಜೋರ್ಡಾನ್ (17ಕ್ಕೆ 3) ಮಾರಕ ದಾಳಿ ಹಾಗೂ ಆರಂಭಿಕ ಜೋಸ್ ಬಟ್ಲರ್ (71*ರನ್, 32 ಎಸೆತ, 5 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿತು. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಇವೊಯಿನ್ ಮಾರ್ಗನ್ ಪಡೆ ಮೊದಲ ಗುಂಪಿನಿಂದ ಸೆಮಿಫೈನಲ್ ಹಂತವನ್ನು ಬಹುತೇಕ ಖಚಿತಪಡಿಸಿಕೊಂಡಿತು. ಮತ್ತೊಂದೆಡೆ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಆಸೀಸ್ ತಂಡ ಆಘಾತಕ್ಕೊಳಗಾಯಿತು.

    ಟಾಸ್ ಜಯಿಸಿದ ಟಾಸ್ ಜಯಿಸಿದ ಆಂಗ್ಲರ ನಾಯಕ ಇವೊಯಿನ್ ಮಾರ್ಗನ್ ಆಸೀಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ, 20 ಓವರ್‌ಗಳಲ್ಲಿ 125 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಈ ಅಲ್ಪಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ 11.4 ಓವರ್‌ಗಳಲ್ಲಿ 2 ವಿಕೆಟ್‌ಗೆ 126 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 125 (ಆರನ್ ಫಿಂಚ್ 44, ಅಶ್ಟನ್ ಅಗರ್ 20, ಮ್ಯಾಥ್ಯೂ ವೇಡ್ 18, ಕ್ರಿಸ್ ವೋಕ್ಸ್ 23ಕ್ಕೆ 2, ಕ್ರೀಸ್ ಜೋರ್ಡಾನ್ 17ಕ್ಕೆ 3, ತೈಮಲ್ ಮಿಲ್ಸ್ 45ಕ್ಕೆ 2, ಆದಿಲ್ ರಶೀದ್ 19ಕ್ಕೆ 1, ಲಿಯಾಮ್ ಲಿವಿಂಗ್‌ಸ್ಟೋನ್ 15ಕ್ಕೆ 1). ಇಂಗ್ಲೆಂಡ್: 11.4 ಓವರ್‌ಗಳಲ್ಲಿ 8 ವಿಕೆಟ್‌ಗೆ 126 (ಜೇಸನ್ ರಾಯ್ 22, ಜೋಸ್ ಬಟ್ಲರ್ 71*, ಜಾನಿ ಬೇರ್‌ಸ್ಟೋ 16*, ಆಡಂ ಜಂಪಾ 12ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts