More

    ಸುಸ್ಥಿತಿಯಲ್ಲಿ ಆತಿಥೇಯ ಇಂಗ್ಲೆಂಡ್​ ತಂಡ

    ಮ್ಯಾಂಚೆಸ್ಟರ್​: ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡು ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿರುವ ಆತಿಥೇಯ ಇಂಗ್ಲೆಂಡ್​ ತಂಡ 3ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಪ್ರಭುತ್ವ ಸಾಧಿಸಿದೆ. ಓಲ್ಡ್​ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 172 ರನ್​ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿರುವ ಇಂಗ್ಲೆಂಡ್​, ಭಾನುವಾರದ ಚಹಾವಿರಾಮದ ವೇಳೆಗೆ ವಿಕೆಟ್​ ನಷ್ಟವಿಲ್ಲದೆ 86 ರನ್​ ಪೇರಿಸಿದ್ದು, ಒಟ್ಟಾರೆ 258 ರನ್​ ಮುನ್ನಡೆಯಲ್ಲಿದೆ. ಆರಂಭಿಕರಾದ ರೋರಿ ಬರ್ನ್ಸ್​ (38ರನ್​, 100 ಎಸೆತ, 4 ಬೌಂಡರಿ) ಹಾಗೂ ಡೊಮಿನಿಕ್​ ಸಿಬ್ಲೆ (40ರನ್​, 95ಎಸೆತ, 5 ಬೌಂಡರಿ) ಕ್ರೀಸ್​ನಲ್ಲಿದ್ದಾರೆ. ಇಂಗ್ಲೆಂಡ್​ ಮೊದಲ ಇನಿಂಗ್ಸ್​ನಲ್ಲಿ 369 ರನ್​ ಕಲೆಹಾಕಿತ್ತು.

    ಮಾರಕವಾದ ಸ್ಟುವರ್ಟ್​ ಬ್ರಾಡ್​
    ಸುಸ್ಥಿತಿಯಲ್ಲಿ ಆತಿಥೇಯ ಇಂಗ್ಲೆಂಡ್​ ತಂಡಇದಕ್ಕೂ ಮೊದಲು 6 ವಿಕೆಟ್​ಗೆ 137 ರನ್​ಗಳಿಂದ ದಿನದಾಟ ಆರಂಭಿಸಿದ ವೆಸ್ಟ್​ ಇಂಡೀಸ್​ ತಂಡ ಅನುಭವಿ ವೇಗದ ಬೌಲರ್​ ಸ್ಟುವರ್ಡ್​ ಬ್ರಾಡ್​ (31ಕ್ಕೆ 6) ಮಾರಕ ದಾಳಿಗೆ ನಲುಗಿದ 65 ಓವರ್​ಗಳಲ್ಲಿ 197 ರನ್​ಗಳಿಗೆ ಸರ್ವಪತನ ಕಂಡಿತು.
    ಮೊದಲ ಇನಿಂಗ್ಸ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ಮೂಲಕ ಗಮನಸೆಳೆದಿದ್ದ ವೇಗಿ ಸ್ಟುವರ್ಟ್​ ಬ್ರಾಡ್​ ಬೌಲಿಂಗ್​ನಲ್ಲೂ ಗಮನಾರ್ಹ ನಿರ್ವಹಣೆ ತೋರಿದರು. 24 ರನ್​ಗಳಿಂದ ನಾಯಕ ಜೇಸನ್​ ಹೋಲ್ಡರ್​ ಹಾಗೂ 10 ರನ್​ಗಳಿಂದ ದಿನದಾಟ ಆರಂಭಿಸಿದ ಶೇನ್​ ಡೋವ್ರಿಚ್​ ಜೋಡಿ 7ನೇ ವಿಕೆಟ್​ಗೆ 68 ರನ್​ ಕಲೆಹಾಕಿ ತಂಡವನ್ನು ಾಲೋಆನ್​ನಿಂದ ಪಾರು ಮಾಡಿತು. ಈ ಜೋಡಿ ನಿರ್ಗಮನದೊಂದಿಗೆ ವಿಂಡೀಸ್​ ತಂಡ ದಿಢೀರ್​ ಕುಸಿತ ಅನುಭವಿತು. ವಿಂಡೀಸ್​ ತಂಡದ ಉಳಿದ ನಾಲ್ಕೂ ವಿಕೆಟ್​ಗಳಿಂದ ಬ್ರಾಡ್​ ಪಾಲಾಗಿದ್ದು ವಿಶೇಷ.

    ಇಂಗ್ಲೆಂಡ್​: 111.5 ಓವರ್​ಗಳಲ್ಲಿ 369 ಮತ್ತು ದ್ವಿತೀಯ ಇನಿಂಗ್ಸ್​ 3ನೇ ದಿನದಾಟದ ಚಹಾ ವಿರಾಮದ ವೇಳೆಗೆ
    32 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 86 (ಬರ್ನ್ಸ್​ 38, ಸಿಬ್ಲೆ 40), ವೆಸ್ಟ್​ ಇಂಡೀಸ್​: 65 ಓವರ್​ಗಳಲ್ಲಿ 197 ( ಹೋಲ್ಡರ್​ 46, ಡೋವ್ರಿಚ್​ 37, ಸ್ಟುವರ್ಟ್​ ಬ್ರಾಡ್​ 31ಕ್ಕೆ 6 ಜೇಮ್ಸ್​ ಆಂಡರ್​ಸನ್​ 28ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts