More

    ವೆಸ್ಟ್ ಇಂಡೀಸ್ ತಂಡಕ್ಕೆ ಇಂಗ್ಲೆಂಡ್ ವೇಗಿಗಳ ಶಾಕ್

    ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವೇಗಿಗಳ ದಾಳಿಗೆ ನಲುಗಿರುವ ವೆಸ್ಟ್ ಇಂಡೀಸ್ ತಂಡ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಘಾತ ಎದುರಿಸಿದೆ. ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್‌ಸನ್ (13ಕ್ಕೆ 1), ಸ್ಟುವರ್ಟ್ ಬ್ರಾಡ್ (13ಕ್ಕೆ 1) ಹಾಗೂ ಜೋಫ್ರಾ ಆರ್ಚರ್ (16ಕ್ಕೆ 1) ತ್ರಿಮೂರ್ತಿಗಳ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್, ಶನಿವಾರ ದಿನದಾಟದ ಚಹಾ ವಿರಾಮದ ವೇಳೆಗೆ 25 ಓವರ್‌ಗಳಲ್ಲಿ 3 ವಿಕೆಟ್‌ಗೆ 59 ರನ್ ಪೇರಿಸಿದ್ದು, ಇನ್ನು 310 ರನ್ ಹಿನ್ನಡೆಯಲ್ಲಿದೆ. ಬ್ರೂಕ್ಸ್ (5) ಹಾಗೂ ರೋಸ್ಟನ್ ಚೇಸ್ (0) ಕ್ರೀಸ್‌ನಲ್ಲಿದ್ದಾರೆ. ಇದಕ್ಕೂ ಮೊದಲು 4 ವಿಕೆಟ್‌ಗೆ 258 ರನ್‌ಗಳಿಂದ ಶನಿವಾರದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ಭೋಜನ ವಿರಾಮಕ್ಕೂ ಮುನ್ನ 111.5 ಓವರ್‌ಗಳಲ್ಲಿ 369 ರನ್‌ಗಳಿಗೆ ಸರ್ವಪತನ ಕಂಡಿತು.
    91 ರನ್‌ಗಳಿಂದ ಒಲಿವರ್ ಪೋಪ್ ಹಾಗೂ 56 ರನ್‌ಗಳಿಂದ ದಿನದಾಟ ಆರಂಭಿಸಿದ ಜೋಸ್ ಬಟ್ಲರ್ ಜೋಡಿ ನಿರಾಸೆ ಅನುಭವಿಸಿತು. ದಿನದ 3ನೇ ಓವರ್ ಗ್ಯಾಬ್ರಿಯಲ್ ಎಸೆದ ಓವರ್‌ನಲ್ಲಿ ಪೋಪ್ ವೈಯಕ್ತಿಕ 91 ರನ್‌ಗಳಿಸಿದ್ದ ವೇಳೆ ಸ್ಲಿಪ್‌ನಲ್ಲಿದ್ದ ಕಾರ್ನ್‌ವಾಲ್ ಕ್ಯಾಚ್ ಬಿಟ್ಟರು. ಆದರೆ, ಮರು ಓವರ್‌ನ ಮೊದಲ ಎಸೆತದಲ್ಲೇ ಗ್ಯಾಬ್ರಿಯಲ್ ಪೋಪ್ ಅವರನ್ನು ಬೌಲ್ಡ್ ಮಾಡಿದರು. ಸಿಕ್ಕ ಜೀವದಾನ ಲಾಭ ಗಿಟ್ಟಿಸಿಕೊಳ್ಳಲು ವಿಲವಾದ ಪೋಪ್ ಶತಕ ವಂಚಿತರಾದರು. ಈ ಜೋಡಿ ಶುಕ್ರವಾರದ ಮೊತ್ತಕ್ಕೆ ಕೇವಲ 4 ರನ್ ಪೇರಿಸಲಷ್ಟೇ ಶಕ್ತವಾಯಿತು. ಒಟ್ಟಾರೆ, 5ನೇ ವಿಕೆಟ್‌ಗೆ 138 ರನ್ ಕಲೆಹಾಕಿತು.
    ವೆಸ್ಟ್ ಇಂಡೀಸ್ ತಂಡಕ್ಕೆ ಇಂಗ್ಲೆಂಡ್ ವೇಗಿಗಳ ಶಾಕ್ಬಳಿಕ ರೋಚ್ ಮಾರಕ ದಾಳಿಯಿಂದಾಗಿ ಕೇವಲ 18 ರನ್‌ಗಳ ಅಂತರದಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ 280ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಕನಿಷ್ಠ 300ರ ಗಡಿ ದಾಟುವುದು ಅನುಮಾನ ಮೂಡಿಸಿತು. ಬಳಿಕ ಡೊಮಿನಿಕ್ ಬೆಸ್ (18*) ಹಾಗೂ ಸ್ಟುವರ್ಟ್ ಬ್ರಾಡ್ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದರು. ಈ ಜೋಡಿ 9ನೇ ವಿಕೆಟ್ ಉಪಯುಕ್ತ 76 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 350ರ ಗಡಿ ದಾಟಿಸಿತು. ಚೇಸ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಬ್ರಾಡ್ ಬ್ಲಾಕ್‌ವುಡ್‌ಗೆ ಕ್ಯಾಚ್ ನೀಡಿದರೆ, ಆಂಡರ್‌ಸನ್ (11) ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರು.

    ಇಂಗ್ಲೆಂಡ್: 111.5 ಓವರ್‌ಗಳಲ್ಲಿ 369 (ಒಲಿವರ್ ಪೋಪ್ 91, ಜೋಸ್ ಬಟ್ಲರ್ 67, ಸ್ಟುವರ್ಟ್ ಬ್ರಾಡ್ 62, ಡೊಮಿನಿಕ್ ಬೆಸ್ 18*, ಕೇಮರ್ ರೋಚ್ 72ಕ್ಕೆ 4, ಗ್ಯಾಬ್ರಿಯಲ್ 77ಕ್ಕೆ 2, ರೋಸ್ಟನ್ ಚೇಸ್ 36ಕ್ಕೆ2, ಜೇಸನ್ ಹೋಲ್ಡರ್ 83ಕ್ಕೆ 1). ವೆಸ್ಟ್ ಇಂಡೀಸ್: 2ನೇ ದಿನದಾಟದ ಚಹಾ ವಿರಾಮದ ವೇಳೆಗೆ 25 ಓವರ್‌ಗಳಲ್ಲಿ 3 ವಿಕೆಟ್‌ಗೆ 59 (ಕ್ಯಾಂಪ್‌ಬೆಲ್ 32, ಶೈ ಹೋಪ್ 17, ಜೇಮ್ಸ್ ಆಂಡರ್‌ಸನ್ 13ಕ್ಕೆ 1, ಸ್ಟುವರ್ಟ್ ಬ್ರಾಡ್ 13ಕ್ಕೆ 1, ಆರ್ಚರ್ 16ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts