More

    ಇಂಜಿನಿಯರಿಂಗ್​ ಕೋರ್ಸ್​ಗೆ ಹೆಚ್ಚಾಯ್ತು ಡಿಮ್ಯಾಂಡ್! 58 ಸಾವಿರ ಸೀಟುಗಳಲ್ಲಿ 3,500 ಸೀಟುಗಳಷ್ಟೇ ಬಾಕಿ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಿಇಟಿ ಮೂಲಕ ಹಂಚಿಕೆ ಮಾಡುವ ಇಂಜಿನಿಯರಿಂಗ್​ ಸೀಟುಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸರ್ಕಾರಿ ಇಂಜಿನಿಯರಿಂಗ್​ ಸೀಟುಗಳು ಬಿಕರಿಯಾಗಿವೆ. ಕೇವಲ 3,500 ಸೀಟುಗಳಷ್ಟೇ ಉಳಿದಿವೆ.

    ರಾಜ್ಯದ ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್​ ಕಾಲೇಜುಗಳು ಸೇರಿ ಒಟ್ಟು 58 ಸಾವಿರ ಸೀಟುಗಳು ಕೆಇಎ ಸಿಇಟಿ&2023ರಲ್ಲಿ ಲಭ್ಯವಾಗಿದ್ದವು. ಇದರಲ್ಲಿ 54,500 ಸೀಟುಗಳು ಭರ್ತಿಯಾಗಿದ್ದು, 3,500 ಸೀಟುಗಳಷ್ಟೇ ಬಾಕಿ ಉಳಿದಿವೆ. ಶೇ.75ಕ್ಕೂ ಹೆಚ್ಚಿನ ಸೀಟುಗಳು ಕಂಪ್ಯೂಟರ್​ ಸೈನ್ಸ್​ ಮತ್ತು ಇದಕ್ಕೆ ಸಂಬಂಧಿತ ಕೋರ್ಸ್​ಗಳಾಗಿವೆ.

    ಪ್ರತಿ ವರ್ಷ ಶೇ.50 ಸೀಟುಗಳು ಉಳಿಯುತ್ತಿದ್ದವು. 2021-22ರಲ್ಲಿ 30 ಸಾವಿರ, 2022&23ರಲ್ಲಿ 15 ಸಾವಿರ ಸೀಟುಗಳು ಉಳಿದಿದ್ದವು. ಇದೇ ಮೊದಲ ಬಾರಿಗೆ 3,500 ಸೀಟುಗಳಷ್ಟೇ ಬಾಕಿ ಉಳಿದಿವೆ.

    ಕೋರ್ಸ್​ನಲ್ಲಿ ಬದಲಾವಣೆ

    ಹಿಂದಿನ ವರ್ಷಗಳಲ್ಲಿ ಸಿವಿಲ್​, ಮೆಕಾನಿಕಲ್​ಗೆ ವಿಭಾಗಕ್ಕೆ ಸಂಬಂಧಿಸಿ ಕೋರ್ಸ್​ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಆದರೆ, ಕಳೆದ 3-4 ವರ್ಷಗಳಿಂದ ಕಂಪ್ಯೂಟರ್​ ಸೈನ್ಸ್​ಗೆ ಸಂಬಂಧಿಸಿದ ಕೋರ್ಸ್​ಗಳ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ. ಕಂಪ್ಯೂಟರ್​ ಸೈನ್ಸ್​ ಜತೆಗೆ ರೊಬೊಟಿಕ್​, ಮಷಿನ್​ ಲರ್ನಿಂಗ್​, ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್​ ಸೇರಿ ಇನ್ನಿತರೆ ಕೋರ್ಸ್​ಗಳನ್ನು ಆರಂಭಿಸಲಾಗುತ್ತಿದೆ. ಬದಲಾದ ಕಾಲಟ್ಟದಲ್ಲಿ ಕಾಲೇಜುಗಳಲ್ಲಿ ಕೊರ್ಸ್​ಗಳನ್ನು ಬದಲಾವಣೆ ಮಾಡಲಾಗಿದೆ. ಹೀಗಾಗಿ, ಹೆಚ್ಚಿನ ಸೀಟುಗಳು ಭರ್ತಿಯಾಗುತ್ತಿವೆ ಎನ್ನುತ್ತಾರೆ ಕೆಇಎ ಅಧಿಕಾರಿಗಳು.

    ಕೆಇಎ ವಿವಿಧ 110ಕ್ಕೂ ಹೆಚ್ಚಿನ ಇಂಜಿನಿಯರಿಂಗ್​ ಕೋರ್ಸ್​ಗಳಿಗೆ ಸೀಟು ಹಂಚಿಕೆ ಮಾಡಿದೆ. ಕಮ್ಯೂನಿಕೇಷನ್​ ಆಂಡ್​ ಇಂಜಿನಿಯರಿಂಗ್​ನಲ್ಲಿ 10,207 ಸೀಟುಗಳು ಭರ್ತಿಯಾಗಿವೆ. ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್​& 3,338, ಕೃತಕ ಬುದ್ಧಿಮತ್ತೆ ಮತ್ತು ಮಷಿನ್​ ಲರ್ನಿಂಗ್​- 2,951, ಸಿವಿಲ್​- 2,828, ಮೆಕಾನಿಕಲ್​- 2,631, ಬಿ-ಟೆಕ್​ (ವಿಜ್ಞಾನ ಮತ್ತು ತಂತ್ರಜ್ಞಾನ)ನಲ್ಲಿ 2,322 ಸೀಟುಗಳು ಭರ್ತಿಯಾಗಿವೆ.

    ಕನ್ನಡ ಮಾಧ್ಯಮ ನಿರಾಕರಣೆ

    ಕಳೆದ ಮೂರು ವರ್ಷಗಳ ಹಿಂದೆ ಎನ್​ಇಪಿ ಆಶಯದಂತೆ ಇಂಜಿನಿಯರಿಂಗ್​ನಲ್ಲಿ ಕನ್ನಡ ಮಾಧ್ಯಮವನ್ನು ಪರಿಚಯಿಸಲಾಯಿತು. ಚಿಕ್ಕಬಳ್ಳಾಪುರ, ಮೈಸೂರು, ಬೀದರ್​ನಲ್ಲಿ ತಲಾ ಒಂದು ಕಾಲೇಜುಗಳಿಗೆ 60 ಇನ್​ಟೇಕ್​ಗಳಿದ್ದವು. ಯಾವುದೇ ವಿದ್ಯಾರ್ಥಿಗಳು ಪ್ರವೇಶ ಪಡೆದಿರಲಿಲ್ಲ. ಈ ವರ್ಷ ಕೂಡ ಚಿಕ್ಕಬಳ್ಳಾಪುರದ ಎಸ್​ಜೆಸಿ ಕಾಲೇಜಿನಲ್ಲಿ ಸಿವಿಲ್​ ಇಂಜಿನಿಯರಿಂಗ್​ಗೆ ಪ್ರವೇಶ ಪಡೆದಿದ್ದರು. ಕೊನೆಗೆ ಪ್ರವೇಶವನ್ನು ಹಿಂಪಡೆದುಕೊಂಡಿದ್ದು, ಈ ಮೂಲಕ ಶೂನ್ಯ ದಾಖಲಾತಿಯು ಸತತ 4ನೇ ವರ್ಷಕ್ಕೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts