ಯಲಬುರ್ಗಾ: ಎನ್‌ಸಿಸಿ ತರಬೇತಿಯಿಂದ ಮಕ್ಕಳಲ್ಲಿ ದೇಶಪ್ರೇಮ, ಶಿಸ್ತು, ಸಮಯ ಪ್ರಜ್ಞೆ ಮತ್ತು ಸಂಘಟನಾ ಶಕ್ತಿ ಬೆಳೆಯುತ್ತದೆ ಎಂದು ಪ್ರಾಚಾರ್ಯೆ ನಾಗಲಕ್ಷ್ಮೀ ಮಿಸ್ಕಿನ್ ಹೇಳಿದರು.
ತಾಲೂಕಿನ ಬೇವೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ಎನ್‌ಸಿಸಿ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಪಠ್ಯದ ಜತೆಗೆ ದೇಶಪ್ರೇಮ, ಸೇವಾ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಎನ್‌ಸಿಸಿ ಘಟಕದ ಲಾಭ ಪಡೆಯಬೇಕು ಎಂದರು.
ಇದನ್ನೂ ಓದಿ:ಗೋಣಿಕೊಪ್ಪಲಿನಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ವಾರ್ಷಿಕ ತರಬೇತಿ ಶಿಬಿರ
ಎನ್‌ಸಿಸಿ ಘಟಕದ ಮುಖ್ಯಸ್ಥ ಸುಬೇದಾರ್ ಸತೀಶ ಸ್ವಾಮಿ ಮಾತನಾಡಿ, ಎನ್‌ಸಿಸಿಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಕಠಿಣ ಪರಿಶ್ರಮ, ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ನಾಯಕತ್ವದ ಗುಣಗಳನ್ನು ಬೆಳೆಸುವ ಜತೆಗೆ ಮೌಲ್ಯಗಳನ್ನು ತುಂಬುತ್ತದೆ ಎಂದು ಹೇಳಿದರು.
ತರಬೇತುದಾರ ಹವಾಲ್ದಾರ್ ಸದಾಶಿವ ಜಾಧವ್ ಮಾತನಾಡಿದರು. ನಿಲಯ ಪಾಲಕ ಮಂಜುನಾಥ ತಳವಾರ್, ಎನ್‌ಸಿಸಿ ಮಾರ್ಗದರ್ಶಿ ಶಿಕ್ಷಕ ಪ್ರವೀಣ ಗಣಾವರಿ, ಶಿಕ್ಷಕರಾದ ಶ್ರೀಶೈಲ ಬಡಿಗೇರ್, ಅಹ್ಮದ್ ನೂರ್‌ಪಾಷಾ, ಅಹ್ಮದ್ ಜಹೀರ್, ಮಹಾಂತೇಶ ಗುರಿಕಾರ, ಚಂದ್ರಕಲಾ ಸಿರಿಮನಿ, ಗಾಯತ್ರಿ, ನರಸಪ್ಪ ಕುಷ್ಟಗಿ, ಕೇಮಪ್ಪ ದೇವರಮನೆ, ದ್ಯಾಮಣ್ಣ ತುಪ್ಪದ, ಸಹನಾ ಡಂಬಳ ಇದ್ದರು.