More

    ಗ್ರಾಹಕರಿಗೆ ಕರೆಂಟ್ ಶಾಕ್; ಪ್ರತಿ ಯೂನಿಟ್ ದರದಲ್ಲಿ ಹೆಚ್ಚಳ!

    ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿರುವ ಹೊತ್ತಿನಲ್ಲೇ, ರಾಜ್ಯದ ಜನರಿಗೆ ವಿದ್ಯುತ್​ ನಿಯಂತ್ರಣ ಆಯೋಗ (KERC) ಹಿಂದಿನ ವರ್ಷಗಳಿಗಿಂತ ಅತಿ ಕಡಿಮೆ ದರ ಏರಿಕೆ ಮಾಡಿದೆ. ಸರಾಸರಿ ವಿದ್ಯುತ್ ದರವನ್ನು ಯೂನಿಟ್ ಗೆ ಕೇವಲ 35 ಪೈಸೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.

    ನಗರದಲ್ಲಿ ಸೋಮವಾರ ಕೆಇಆರ್​​ಸಿ ಆಯೋಗದ ನಿಯೋಜಿತ ಅಧ್ಯಕ್ಷ ಹಾಗೂ ಸದಸ್ಯರಾದ ಎಚ್.ಎನ್.ಮಂಜುನಾಥ್, 2022-23ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಕಟಿಸಿ, ಅದರಂತೆ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು ಸರಾಸರಿ 35 ಪೈಸೆ ಏರಿಕೆ (ಶೇ.4.33) ಮಾಡಿರುವುದನ್ನು ಪ್ರಕಟಿಸಿದ್ದಾರೆ.

    ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಅಥವಾ ಅದರ ನಂತರ ಮೊದಲ ಮೀಟರ್ ಓದುವ ದಿನಾಂಕದಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್​​ಸಿ) ತಿಳಿಸಿದೆ.

    ರಾಜ್ಯದಲ್ಲಿರುವ ಐದು ಎಸ್ಕಾಂಗಳು 11,320 ಕೋಟಿ ರೂ.ಗಳ ಕಂದಾಯ ಕೊರತೆಗೆ ಪ್ರತಿ ಯೂನಿಟ್ ಗೆ ಸರಾಸರಿ 1.85 ಪೈಸೆ ಅಂದರೆ ಶೇ.23.83 ರಷ್ಟು ಹೆಚ್ಚಳ ಮಾಡುವಂತೆ ಕೋರಿದ್ದವು. ಈ ಬಗ್ಗೆ ಸವಿಸ್ತರವಾಗಿ ವಿಚಾರಣೆ ಮಾಡಿದ ಕೆಇಆರ್ ಸಿ ಆಯೋಗ, ಆರ್ಥಿಕ ವರ್ಷ 2022-23ಕ್ಕೆ ಅನ್ವಯವಾಗುವಂತೆ ಈ ಪರಿಷ್ಕೃತ ದರವನ್ನು ಜಾರಿ ಮಾಡಿದೆ.

    ಪಾರ್ಕ್​ನಲ್ಲಿ ವಾಕಿಂಗ್ ಮಾಡೋ ಮಹಿಳೆಯರೇ ಎಚ್ಚರ.. ಇಲ್ದಿದ್ರೆ ನಿಮಗೂ ಇದೇ ಗತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts