More

    ಚುನಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ- ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯ

    ಸಿಂಧನೂರು: ತಾಲೂಕಿನ ಮುಕ್ಕುಂದಾ, ಆರ್‌ಎಚ್ ನಂ.1 ಗ್ರಾಪಂಗಳಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ ಹೆಚ್ಚಿದ್ದರೂ ಒತ್ತಡಕ್ಕೆ ಮಣಿದ ಚುನಾವಣಾಧಿಕಾರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಯೋಗದ ಆಯುಕ್ತ ಮತ್ತು ಡಿಸಿಗೆ ಪತ್ರ ಬರೆಯಲಾಗಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

    ಮುಕ್ಕುಂದ ಗ್ರಾಪಂನಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಇಲ್ಲದ ಹಾಗೆ ಸೃಷ್ಟಿಸಲಾಗಿದೆ. ಒಬ್ಬ ಸದಸ್ಯರ ಮತ ರದ್ದುಪಡಿಸಿ, ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಆರ್.ಎಚ್.ನಂ.1 ಗ್ರಾಪಂಯಲ್ಲಿ ಇಬ್ಬರ ಮತಗಳನ್ನು ರದ್ದುಪಡಿಸಿ, ಸಮಬಲ ಸೃಷ್ಟಿಸಲಾಗಿದೆ. ನಂತರ ಒಂದು ಗುಂಪಿಗೆ ಮತಗಳನ್ನು ಹಾಕಿಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಚುನಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡರಾದ ಆರ್.ಬಸನಗೌಡ ತುರ್ವಿಹಾಳ, ಎಂ.ಲಿಂಗಪ್ಪ, ಖಾಜಿಮಲಿಕ್ ವಕೀಲ, ಮಲ್ಲನಗೌಡ ಗುಂಡ, ಶರಣಪ್ಪ ಕಾಸರಡ್ಡಿ ತಿಡಿಗೋಳ, ಅಮರೇಗೌಡ ತಿಡಿಗೋಳ, ಸಿದ್ದನಗೌಡ ಮಾಟೂರು, ಸೋಮಶೇಖರ ಬಸಾಪುರ, ರುದ್ರಗೌಡ ಬಜೇಗೌಡ್ರ, ಖಾಜಿ ಮಲ್ಲಿಕ್ ವಕೀಲ, ವೈ.ಅನಿಲಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts