More

    ಅಂಚೆ ಮತ ಚಲಾಯಿಸುವಾಗ ಗೌಪ್ಯತೆಯಿರಲಿ: ಸಾಮಾನ್ಯ ವೀಕ್ಷಕ ತನ್ಮಯ್ ಚಕ್ರಭರ್ತಿ ಸೂಚನೆ

    ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಮೇ 3, 4 ಹಾಗೂ 5 ರಂದು ಮಾಡಲಾಗಿದೆ. ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತದಾರರು ಮತ ಚಲಾಯಿಸುವ ಪ್ರಕ್ರಿಯೆ ನಡೆಸುವಾಗ ಗೌಪ್ಯತೆಗೆ ಆದ್ಯತೆ ನೀಡಬೇಕು ಎಂದು ಮಂಡ್ಯ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ತನ್ಮಯ್ ಚಕ್ರಭರ್ತಿ ಸೂಚನೆ ನೀಡಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂಚೆ ಮತದಾನ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮನೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುವುದರಿಂದ ಹಲವು ಬೆಳಕಿಲ್ಲ, ಸಹಾಯಕರು ಬೇಕೆನ್ನುವುದು ಸೇರಿದಂತೆ ಹಲವು ಸಮಸ್ಯೆ ಇರುತ್ತದೆ. ಆದರೆ ಇವುಗಳಿಗೆ ವಿಚಲಿತರಾಗದೇ ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಪಾಲಿಸಿ. ಮತದಾನದ ಗೌಪ್ಯತೆ ಕಾಪಾಡಬೇಕು. ತಮ್ಮೊಂದಿಗೆ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದರು.
    ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 2630 ಮತದಾರರು ಹಾಗೂ 778 ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಮತದಾನಕ್ಕಾಗಿ 59 ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಇಬ್ಬರೂ ಪೋಲಿಂಗ್ ಅಧಿಕಾರಿ, ಒಬ್ಬರೂ ಮೈಕ್ರೋ ವೀಕ್ಷಕ, ಒಬ್ಬರೂ ಪೊಲೀಸ್ ಹಾಗೂ ವಿಡಿಯೋಗ್ರಾಫರ್ ಇರುತ್ತಾರೆ. ಮತದಾನ ಪ್ರಕ್ರಿಯೆ ಬೆಳಗ್ಗೆ 9 ರಿಂದ 5 ಗಂಟೆವರೆಗೆ ನಡೆಯಲಿದೆ. ಪ್ರತಿದಿನ ಪ್ರಕ್ರಿಯೆ ಮುಗಿದ ನಂತರ ವಿಡಿಯೋಗ್ರಾಫರ್‌ಗಳಿಂದ ಅನ್‌ಎಡಿಟೆಡ್ ವಿಡಿಯೋವನ್ನು ಚುನಾವಣಾಧಿಕಾರಿಗೆ ತಲುಪಿಸಬೇಕು. ಮನೆಯಲ್ಲೇ ಮತದಾನ ಮಾಡಲು ಅನುಮತಿ ನೀಡಿರುವ ಮತದಾರರು ಸಿಬ್ಬಂದಿ ಬಂದ ಸಂದರ್ಭದಲ್ಲಿ ಮತದಾನ ಮಾಡಬೇಕು. ಮೇ.10ರಂದು ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಚುನಾವಣಾಧಿಕಾರಿ ಎಸ್.ಎಚ್.ಕೀರ್ತನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts