More

    ಹಿಜ್ಬುಲ್​ ಉಗ್ರನ ಸೆರೆ- ಮಸೀದಿಗೆ ಧಕ್ಕೆ ಮಾಡದೇ ಎಂಟು ಮಂದಿ ಹತ್ಯೆ

    ಜಮ್ಮು: ಒಂದೆಡೆ ಚೀನಾದೊಡನೆ ಭಾರತೀಯ ಯೋಧರು ಘರ್ಷಣೆ ಮಾಡುವ ಪರಿಸ್ಥಿತಿ ಇದ್ದರೆ, ಅದೇ ಇನ್ನೊಂದೆಡೆ ಪಾಕಿಸ್ತಾನದ ಉಗ್ರರ ಜತೆ ಸೆಣೆಸಾಟ ನಡೆಸಬೇಕಿದೆ.

    ಕಳೆದ ಕೆಲವು ದಿನಗಳಿಂದ ಉಗ್ರರ ಜತೆ, ಭಾರತೀಯ ಯೋಧರು ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಈ ನಡುವೆ ನಿನ್ನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಬಳಿ ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯನೊಬ್ಬನನ್ನು ಬಂಧಿಸಿದ್ದಾರೆ. ಈತನ ಹೆಸರು ಇಮ್ರಾನ್ ನಬಿ.

    ಅನಂತ್​ನಾಗ್ ಬಳಿ ಜಂಗ್ಲಾತ್ ಮಂಡಿ ಬಳಿ ನಬಿಯನ್ನು ಬಂಧಿಸಲಾಗಿದ್ದು, ಆತನಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಈತ ಇದೆ ಮೇ 10ರಂದು ಮನೆಯಿಂದ ಓಡಿ ಬಂದಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿಕೊಂಡಿದ್ದ ಎಂದು ಭಾರತೀಯ ಸೇನೆ ಹೇಳಿದೆ. ಮೂಲತಃ ಕುಲ್ಗಾಮ್ ನಿವಾಸಿಯಾದ ಈತ ಮನೆ ಬಿಟ್ಟು ಬಂದು ಉಗ್ರ ಸಂಘಟನೆಗೆ ಸೇರಿದ್ದು ಏಕೆ? ಉಗ್ರರ ಜತೆ ಸಂಪರ್ಕಕ್ಕೆ ಬಂದಿದ್ದು ಹೇಗೆ ಎಂಬಿತ್ಯಾದಿಯಾಗಿ ವಿಚಾರಣೆ ನಡೆಸಲಾಗುತ್ತಿದೆ.

    ಇದನ್ನೂ ಓದಿ: ಇಬ್ಬರು ಮೇಜರ್​,​ 10 ಯೋಧರ ಬಿಡುಗಡೆ ಮಾಡಿದ ಚೀನಾ?

    ಈ ನಡುವೆಯೇ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಯೋಧರು ನಿನ್ನೆ ಎಂಟು ಮಂದಿ ಉಗ್ರರನ್ನು ಹೊಡೆದುರುಳಿಸಿದ್ದಾರೆ.

    ಪ್ಯಾಂಪೋರ್’ನ ಮೀಜ್ ಎಂಬ ಪ್ರದೇಶದಲ್ಲಿ ಇರುವ ಮಸೀದಿಯೊಂದರಲ್ಲಿ ಈ ಉಗ್ರರು ಅಡಗಿ ಕುಳಿತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಯೋಧರು, ಮಸೀದಿ ಸುತ್ತುವರೆದು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಸೀದಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗಿದೆ ಎಂಬ ವರದಿ ಬಂದಿದೆ.

    ಇದರಂತೆ ಅಡಗು ಕುಳಿತು ದಾಳಿ ನಡೆಸುತ್ತಿದ್ದ ಐವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಸ್ಥಳದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. (ಏಜೆನ್ಸೀಸ್​)

    ಕರೊನಾ​: ಹಿಂದಿನ ದಾಖಲೆ ಮೀರಿದ ಭಾರತ- ಶೇ.50 ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts