More

    ಗಳಿಕೆ ರಜೆ ನಗದಿಕರಣ ರದ್ದತಿಯಿಂದ ವಿನಾಯಿತಿ ಕೊಡಿ

    ಹರಿಹರ: ಡಿಎ ಮತ್ತು ಗಳಿಕೆ ರಜಾ ನಗದೀಕರಣ ರದ್ದತಿ ಆದೇಶದಿಂದ ಆರೋಗ್ಯ ಇಲಾಖೆ ನೌಕರರಿಗೆ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿ, ಸಿಇಒ, ಡಿಎಚ್‌ಎ ಮೂಲಕ ಮುಖ್ಯಮಂತ್ರಿಗೆ ಜಿಲ್ಲಾ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘ ಮನವಿ ಸಲ್ಲಿಸಿದೆ.

    ಕೋವಿಡ್-19 ಸಂಬಂಧ ಸರ್ಕಾರಿ ನೌಕರರಿಗೆ 2021ರವರೆಗೆ ಡಿಎ ಮತ್ತು ಗಳಿಕೆ ರಜೆ ನದಗೀಕರಣ ರದ್ದು ಮಾಡಿದೆ. ಆದರೆ, ಇಲಾಖೆ ನೌಕರರು 2 ತಿಂಗಳಿಂದ ರಜೆ ರಹಿತ ಹಗಲು ರಾತ್ರಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಹೆಚ್ಚಿನ ಕಾರ್ಯದೊತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ವಿಶೇಷ ವೇತನ ನೀಡಬೇಕು. ಅದರ ಬದಲು ಆರ್ಥಿಕ ನಷ್ಟ ಉಂಟು ಮಾಡಿರುವುದು ಬರಸಿಡಿಲು ಬಡಿದಂತಾಗಿದೆ.

    ಡಿಎ ಮತ್ತು ಗಳಿಕೆ ರಜೆ ನದಗೀಕರಣ ರದ್ದತಿಯಿಂದ ವಿನಾಯಿತಿ ನೀಡಬೇಕು. ವಿಶೇಷ ವೇತನ ನೀಡಬೇಕು. ಆರ್ಥಿಕ ಹೊರೆ ಅಲ್ಲದ ಆರೋಗ್ಯ ಸಹಾಯಕರ ಪದನಾಮವನ್ನು ಸಮುದಾಯ ಆರೋಗ್ಯ ಅಧಿಕಾರಿ ಎಂದು ಮರು ನಾಮಕರಣ ಮಾಡಬೇಕು.

    ಕೋವಿಡ್-19 ಕಾರ್ಯದಲ್ಲಿ ಒಳ ಮತ್ತು ಹೊರ ಗುತ್ತಿಗೆಯ (ಎನ್‌ಎಚ್‌ಎಂ) ನೌಕರರು ಸಹ ರಜೆ ಪಡೆಯದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೂ ಮಾನವೀಯತೆ ಆಧಾರದಲ್ಲಿ ವಿಶೇಷ ವೇತನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

    ಮನವಿ ಸ್ವೀಕರಿಸಿದ ಎಡಿಸಿ ವೀರಮಲ್ಲಪ್ಪ ಪೂಜಾರ್, ಜಿಪಂ ಉಪಕಾರ್ಯದರ್ಶಿ ಆನಂದ್, ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

    ಸಂಘದ ಜಿಲ್ಲಾಧ್ಯಕ್ಷ ಎಂ.ವಿ.ಹೊರಕೇರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ, ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಗೌರವಾಧ್ಯಕ್ಷೆ ಕೆ. ಗಾಯತ್ರಿದೇವಿ, ಕಾರ್ಯಾಧ್ಯಕ್ಷ ಎ. ಮಹಾಂತೇಶ್, ಪ್ರಧಾನ ಕಾರ್ಯದರ್ಶಿ ಆರ್.ಲೋಕೇಶ್, ಶಶಿ, ಅಂಜಿನಪ್ಪ, ರಹಮಾನ್ ಹಬೀಬ್‌ಉಲ್ಲಾ, ಹಾಲಪ್ಪ, ಯುವರಾಜ್, ರಾಜಾರಾಮ್, ವೆಂಕಟಾಚಲ, ರವಿಕಿರಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts