More

    ಮುರಾರ್ಜಿ ದೇಸಾಯಿ ಜಯಂತಿ ಮಾ.3ರಂದು ಆಚರಣೆ

    ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಾ.3ರಂದು ಬೆಳಗ್ಗೆ 10ಗಂಟೆಗೆ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ 128ನೇ ಜನ್ಮದಿನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಸತಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಸಂಚಾಲಕ ಚನ್ನಬಸವ ಭಜಂತ್ರಿ ಗಲಗ ಹೇಳಿದರು.

    ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತರ ಶವ ಪತ್ತೆ; ಇದು ಸಾಮೂಹಿಕ Aತ್ಯಚಾರ ಎಂದು ಆರೋಪಿಸಿದ ಕುಟುಂಬಸ್ಥರು

    ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರ ಜನ್ಮದಿನ ನಾಲ್ಕು ವರ್ಷಗಳಿಗೊಮ್ಮೆ ಬರುತ್ತದೆ. ಫೆ.29ರಂದು ಜನ್ಮದಿನವಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ಹಾಗೂ ಕಾರಣಾಂತರದಿಂದ ಮಾ.3ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕಿ ಕರೆಮ್ಮ ಜಿ.ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಾಚಾರ್ಯ ಸೋಮಶೇಖರಗೌಡ ಮಾಪಾ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.

    ಬಿಇಒ ಎಚ್.ಸುಖದೇವ್, ಶಿಕ್ಷಕ ಕೆರೆಲಿಂಗಪ್ಪ ನಾಡಗೌಡ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ರಾಘವೇಂದ್ರ ಕೋಲ್ಕರ್, ಗ್ರಾಪಂ ಅಧ್ಯಕ್ಷೆ ರೇವತಿ ಶಂಕರಗೌಡ ಮಾಪಾ, ಜಾಲಹಳ್ಳಿ ಠಾಣೆ ಪಿಎಸ್‌ಐ ಬಸವರಾಜ ನಾಯಕ, ಭೂದಾನಿ ಭೀಮಣ್ಣ ಹನುಮಂತಪ್ಪ ಕಂಬಾರ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಬೆಳಗ್ಗೆ 10ಕ್ಕೆ ಮುರಾರ್ಜಿ ದೇಸಾಯಿ ಭಾವಚಿತ್ರಕ್ಕೆ ಪೂಜೆ, ಮಾಲಾರ್ಪಣೆ, ಗುರುವಂದನೆ ಕಾರ್ಯಕ್ರಮ, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 1996ರಲ್ಲಿ ಶಾಲೆ ಪ್ರಾರಂಭವಾಗಿದ್ದು, ಹಲವು ಪ್ರತಿಭಾವಂತರು, ಸಾಧಕರನ್ನು ಈ ನಾಡಿಗೆ ಶಾಲೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಹಳೇ ವಿದ್ಯಾರ್ಥಿಗಳಾದ ಶಶಿಧರ್ ಪಾಟೀಲ್ ಗಬ್ಬೂರು, ಉದಯಕುಮಾರ, ಅಕ್ಬರ್ ಗಲಗ, ಮೇಹಾದ್ ಹಸನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts