More

    ವಿಮಾನ ಪ್ರಯಾಣಿಕರ ವರದಿ ಇಂದು

    ಮಂಗಳೂರು: ಜಿಲ್ಲೆಗೆ ಸೋಮವಾರ ದುಬೈನಿಂದ ಆಗಮಿಸಿರುವ ಎರಡನೇ ವಿಮಾನದಲ್ಲಿ 178 ಮಂದಿ ಬಂದಿಳಿದಿದ್ದು, ಅವರಲ್ಲಿ 110 ಮಂದಿಯನ್ನು ದ.ಕ ಜಿಲ್ಲಾಡಳಿತ ನಿಗದಿ ಪಡಿಸಿರುವ ಸ್ಥಳಗಳಲ್ಲಿ ನಿಗಾವಣೆಯಲ್ಲಿ ಇರಿಸಲಾಗಿದೆ.

    24 ಮಂದಿ ಸರ್ಕಾರದ ಉಚಿತ ಕ್ವಾರಂಟೈನ್ ಕೇಂದ್ರದ ವ್ಯವಸ್ಥೆಯನ್ನು ಕೋರಿಕೊಂಡಿದ್ದು, ಅವರನ್ನು ಹಾಸ್ಟೆಲ್‌ಗಳಲ್ಲಿ ಇರಿಸಲಾಗಿದೆ. ಉಳಿದವರನ್ನು ಅವರ ಇಚ್ಛಾನುಸಾರ ಜಿಲ್ಲಾಡಳಿತ ಗುರುತಿಸಿದ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಇರಿಸಲಾಗಿದೆ. 48 ಮಂದಿ ಉಡುಪಿಗೆ ಹಾಗೂ 20 ಮಂದಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
    ಮಂಗಳೂರಿನಲ್ಲಿ ನಿಗಾವಣೆಯಲ್ಲಿರುವವರ ಸ್ಯಾಂಪಲ್ ಸಂಗ್ರಹ ಮಂಗಳವಾರ ನಡೆದಿದ್ದು, ಬುಧವಾರ ಸಂಜೆ ವರದಿ ಸಿಗಲಿದೆ. ಮೇ 12ರಂದು ಬಂದಿದ್ದ ವಿಮಾನ ಪ್ರಯಾಣಿಕರಲ್ಲಿ 15 ಮಂದಿಗೆ ಕರೊನಾ ಪಾಸಿಟಿವ್ ಆಗಿತ್ತು.

    ಪಾಸಿಟಿವ್ ಇಲ್ಲ: ಮಂಗಳವಾರ ಒಟ್ಟು 230 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ, 18 ಮಂದಿ ಎನ್‌ಐಟಿಕೆ, 14 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ. 267 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಸ್ವೀಕೃತಗೊಂಡ ಎಲ್ಲ 97ರ ವರದಿ ನೆಗೆಟಿವ್ ಆಗಿವೆ. ಇನ್ನೂ 299ರ ವರದಿ ಬರಲು ಬಾಕಿ ಇದೆ.

    ಬಾರೆಬೈಲ್ ಸೀಲ್‌ಡೌನ್
    ಮೇ 18ರಂದು 55 ವರ್ಷ ಪ್ರಾಯದ ಮಹಿಳೆಗೆ(ಪಿ-1234) ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಆಕೆ ವಾಸಿಸುತ್ತಿದ್ದ ಯೆಯ್ಯಡಿ ಬಾರೆಬೈಲ್ ಪ್ರದೇಶವನ್ನು ಮಂಗಳವಾರ ಕಂಟೇನ್ಮೆಂಟ್ ವಲಯವಾಗಿ ಘೋಷಿಸಿ ಸೀಲ್‌ಡೌನ್ ಮಾಡಲಾಗಿದೆ. ಮಂಗಳೂರು ಮಹಾನಗರಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್-1 ಅವರನ್ನು ಘಟನಾ ಕಮಾಂಡರ್ ಆಗಿ ನಿಯೋಜಿಸಿದೆ.

    ಪೂರ್ವದಲ್ಲಿ ಖಾಲಿ ಮನೆ, ಪಶ್ಚಿಮಕ್ಕೆ ಯಮುನಾ ಮನೆ, ಉತ್ತರದಲ್ಲಿ ಗುಡ್ಡ ಹಾಗೂ ದಕ್ಷಿಣದಲ್ಲಿ ಲಲಿತಾ ಮನೆ ಕಂಟೇನ್ಮೆಂಟ್ ವಲಯದ ಗಡಿಯಾಗಿರುತ್ತದೆ. ಒಟ್ಟು 14 ವಾಸದ ಮನೆ ಇದ್ದು ಜನಸಂಖ್ಯೆ 48 ಆಗಿರುತ್ತದೆ. 5 ಕಿ.ಮೀ ಬಫರ್ ವಲಯವಾಗಿದ್ದು ಪೂರ್ವದಲ್ಲಿ ಪಡೀಲ್, ಪಶ್ಚಿಮಕ್ಕೆ ಎನ್‌ಎಂಪಿಟಿ, ಉತ್ತರಕ್ಕೆ ಮರಕಡ, ದಕ್ಷಿಣಕ್ಕೆ ರಥಬೀದಿ ಗಡಿಯಾಗಿರುತ್ತದೆ.

    32 ಸೋಂಕಿತರಿಗೆ ವೆನ್ಲಾಕ್‌ನಲ್ಲಿ ಚಿಕಿತ್ಸೆ
    ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 32 ಕರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ನಡೆದ ಸಭೆಗೆ ವಿವರಣೆ ನೀಡಿದ ಅವರು, ರೋಗಿಗಳು ತಮ್ಮ ತಮ್ಮ ಕುಟುಂಬದೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾರೆ. ರೋಗಿಯ ಕೌನ್ಸೆಲರ್‌ಗಳು ಕುಟುಂಬದವರಿಗೆ ರೋಗಿಗೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡುತ್ತಿದ್ದಾರೆ ಎಂದರು.

    ಕಾಸರಗೋಡಲ್ಲಿಲ್ಲ ಹೊಸ ಕೇಸ್
    ಕಾಸರಗೋಡು: ಮಂಗಳವಾರ ಕೋವಿಡ್-19 ವೈರಸ್‌ನ ಹೊಸ ಪ್ರಕರಣ ಕಾಸರಗೋಡಿನಲ್ಲಿ ದಾಖಲಾಗಿಲ್ಲ. ಕೇರಳದಲ್ಲಿ 12 ಮಂದಿಯಲ್ಲಿ ಕಾಣಿಸಿಕೊಂಡಿದೆ. ಕಣ್ಣೂರು ಜಿಲ್ಲೆಯಲ್ಲಿ 5, ಮಲಪ್ಪುರಂನಲ್ಲಿ 3, ಪತ್ತನಂತಿಟ್ಟ, ಆಲಪ್ಪುಳ, ತೃಶ್ಯೂರ್, ಪಾಲಕ್ಕಾಡ್‌ನಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಇವರಲ್ಲಿ ನಾಲ್ಕು ಮಂದಿ ವಿದೇಶದಿಂದ, 6 ಮಂದಿ ಮಹಾರಾಷ್ಟ್ರದಿಂದ ಮತ್ತು ತಮಿಳುನಾಡು ಹಾಗೂ ಗುಜರಾತ್‌ನಿಂದ ತಲಾ ಒಬ್ಬರು ಒಳಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts