More

    ರಾಜಕೀಯ ವ್ಯವಸಾಯ ಇದ್ದಂತೆ, ಉತ್ತಮ ಬೆಳೆಗೆ ಕಾಯಬೇಕು ಅಷ್ಟೇ: ಡಿ.ಕೆ.ಶಿವಕುಮಾರ್​

    ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸೋಮವಾರ ಕನಕಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಕೇರಮ್ಮ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಮುಖಂಡರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್​ ನಂತರ ಬೃಹತ್​ ಬೈಕ್​ ರ್‍ಯಾಲಿ ಹಾಗೂ ರೋಡ್​ಶೋ ನಡೆಸಿದರು. ಈ ವೇಳೆ ಅಪಾರ ಜನಸ್ತೋಮದ ನಡುವೆ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

    ರಾಜಕಾರಣ ವ್ಯವಸಾಯ ಇದ್ದಂತೆ

    ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಡಿಕೆಶಿ ರಾಜಕಾರಣ ಅನ್ನೋದು ವ್ಯವಸಾಯ ಇದ್ದಂತೆ ವ್ಯವಸಾಯದಲ್ಲಿ ಹೇಗೆ ಬಿತ್ತನೆ ಹಾಕಿ, ನೀರು ಹಾಕಿ, ಪೋಷಣೆ ಮಾಡಿ ಬೆಳೆ ತಗೀತ್ತಾರೋ ಹಾಗೇ ಬೆಳೆ ಕಟಾವು ಮಾಡುವ ಸಮಯ ಚುನಾವಣೆಯಲ್ಲಿ ಬಂದಿದೆ.

    DKS Nomination

    ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಎಂಟಿಬಿ ನಾಗರಾಜ್ | 1510 ಕೋಟಿ ರೂ. ಆಸ್ತಿ ಘೋಷಣೆ; ಕಳೆದ ಬಾರಿಗಿಂತ 495 ಕೋಟಿ ರೂ. ಆಸ್ತಿ ಹೆಚ್ಚಳ

    ನಾನು 35 ವರ್ಷಗಳ ಕಾಲ ವ್ಯವಸಾಯದಂದತೆ ರಾಜಕಾರಣದಲ್ಲಿ ನೂರಾರು ನಾಯಕರನ್ನು ಬೆಳೆಸಿದ್ದೇನೆ. ಕನಕಪುರದಲ್ಲಿ ಅವ್ರೇ ನನ್ನ ಚುನಾವಣೆ ಯನ್ನು ಮಾಡುತ್ತಾರೆ ಎಂದು ತಿಳಿಸಿದ್ಧಾರೆ.

    ಅಂತಿಮವಾಗಿ ಒಳ್ಳೆಯ ಬೆಳೆ, ಬೆಳೆಗೆ ಉತ್ತಮವಾದ ಬೆಲೆಯನ್ನು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಜನರು ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts