ಟಿ20 ವಿಶ್ವಕಪ್‌ಗೆ ಹೊಸ ನಿಯಮಗಳನ್ನು ಅಳವಡಿಸಿದ ಐಸಿಸಿ

ನವದೆಹಲಿ: ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿರುವ 7ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಗೆ ಐಸಿಸಿ ಕೆಲ ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ (ಡಿಆರ್‌ಎಸ್) ಜಾರಿಗೆ ತರಲು ಐಸಿಸಿ ನಿರ್ಧರಿಸಿದೆ. 2016ರಲ್ಲಿ ನಡೆದ ಕೊನೆಯ ಪುರುಷರ ಟಿ20 ವಿಶ್ವಕಪ್‌ನಲ್ಲಿ ಡಿಆರ್‌ಎಸ್ ಇರಲಿಲ್ಲ. ಪ್ರತಿ ಇನಿಂಗ್ಸ್‌ನಲ್ಲಿ ತಂಡವೊಂದಕ್ಕೆ ತಲಾ 2 ಡಿಆರ್‌ಎಸ್ ನೀಡಲಾಗುತ್ತದೆ. ಇತರ ಐಸಿಸಿ ಟೂರ್ನಿಗಳಾದ ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗಳಲ್ಲಿ ಈಗಾಗಲೆ ಡಿಆರ್‌ಎಸ್ ಬಳಕೆಯಾಗಿದೆ.

ಕನಿಷ್ಠ 10 ಓವರ್ ಪಂದ್ಯ
ಮಳೆ ಅಥವಾ ಪ್ರತಿಕೂಲ ಹವಾಮಾನದಿಂದ ವಿಳಂಬಗೊಳ್ಳುವ ಪ್ರತಿ ಲೀಗ್ ಪಂದ್ಯದಲ್ಲಿ ಫಲಿತಾಂಶ ನಿರ್ಧಾರಕ್ಕೆ ಕನಿಷ್ಠ 5 ಓವರ್ ಆಟ ಅಗತ್ಯವಾಗಿದೆ. 2ನೇ ಸರದಿಯಲ್ಲಿ ಬ್ಯಾಟಿಂಗ್ ಮಾಡುವ ತಂಡವೂ ಕನಿಷ್ಠ 5 ಓವರ್ ಆಡಿದ್ದರಷ್ಟೇ ಡಕ್ವರ್ತ್-ಲೂಯಿಸ್-ಸ್ಟರ್ನ್ (ಡಿಎಲ್‌ಎಸ್) ನಿಯಮದನ್ವಯ ಲಿತಾಂಶ ನಿರ್ಧರಿಸಲಾಗುತ್ತದೆ. ಆದರೆ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಡಿಎಲ್‌ಎಸ್ ಅನ್ವಯ ಫಲಿತಾಂಶ ನಿರ್ಧಾರಕ್ಕೆ ಪ್ರತಿ ತಂಡ ಕನಿಷ್ಠ 10 ಓವರ್ ಆಟವಾಡುವುದು ಅಗತ್ಯ ಎಂದು ಐಸಿಸಿ ತಿಳಿಸಿದೆ.

ಕರೊನಾ ಭೀತಿ ನಿರ್ವಹಣೆಗೆ ಸಮಿತಿ
ಟಿ20 ವಿಶ್ವಕಪ್ ವೇಳೆ ತಂಡಗಳಲ್ಲಿ ಕರೊನಾ ಪ್ರಕರಣ ದಾಖಲಾದರೆ ಆಗ ಆ ತಂಡಗಳ ಪಂದ್ಯದ ಭವಿಷ್ಯವನ್ನು ಐಸಿಸಿ ನೇಮಿಸುವ, ವೈದ್ಯಕೀಯ ತಜ್ಞರನ್ನು ಒಳಗೊಂಡ ಸಮಿತಿ ನಿರ್ಧರಿಸಲಿದೆ. ದ್ವಿಪಕ್ಷೀಯ ಸರಣಿಗಳಂತೆ ಕರೊನಾ ಬಾಧಿತ ಅಥವಾ ಎದುರಾಳಿ ತಂಡಗಳು ಆ ಪಂದ್ಯಗಳ ಭವಿಷ್ಯ ನಿರ್ಧರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಐಸಿಸಿ ಸಿಇಒ ಜ್ೆ ಅಲ್ಲಾರ್ಡೈಸ್ ಸ್ಪಷ್ಟಪಡಿಸಿದ್ದಾರೆ.

ಟೈಮ್‌ಔಟ್ ಮಾದರಿ ಡ್ರಿಂಕ್ಸ್ ಬ್ರೇಕ್
ಐಪಿಎಲ್‌ನಲ್ಲಿರುವ ಸ್ಟ್ರಾಟಜಿಕ್ ಟೈಮ್‌ಔಟ್ ಮಾದರಿಯಲ್ಲಿ ಪ್ರತಿ ಇನಿಂಗ್ಸ್‌ನ ನಡುವೆ 2 ನಿಮಿಷ, 30 ಸೆಕೆಂಡ್‌ಗಳ ಡ್ರಿಂಕ್ಸ್ ಬ್ರೇಕ್ ನೀಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ. ಇದರಿಂದ ನೇರಪ್ರಸಾರ ವಾಹಿನಿ ಹೆಚ್ಚುವರಿ ಜಾಹೀರಾತು ಆದಾಯ ಗಳಿಕೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.

ಕ್ರಿಕೆಟ್ ತಂಡಗಳು ಸತತ 2 ಟೂರ್ನಿ ಆಡುವಾಗ ಹಾಕಿ ತಂಡಗಳಿಗೆ ಯಾಕೆ ಸಾಧ್ಯವಿಲ್ಲ? ಕ್ರೀಡಾ ಸಚಿವ ಗರಂ

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…