More

    ಶಿರಕೋಳದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

    ನವಲಗುಂದ: ತಾಲೂಕಿನ ಶಿರಕೋಳ ಗ್ರಾಮದ ಕೆರೆಗೆ ಸಕಾಲದಲ್ಲಿ ನೀರು ಭರ್ತಿಗೊಳಿಸದ ಕಾರಣ, ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ.

    ಮಲಪ್ರಭಾ ಬಲದಂಡೆ ಕಾಲುವೆ ನೀರು ಸ್ಥಗಿತಕ್ಕೆ ಮುನ್ನವೇ ಇಲ್ಲಿನ ಕೆರೆಯನ್ನು ಭರ್ತಿಗೊಳಿಸುವಂತೆ ಶಾಸಕರು ನೀರಾವರಿ ಇಲಾಖೆ, ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಸಕಾಲಕ್ಕೆ ಕೆರೆಗೆ ನೀರು ತುಂಬಿಸಲಿಲ್ಲ. ಹೀಗಾಗಿ, ಕೆರೆಯ ನೀರು ತಳ ಕಂಡು ಖಾಲಿಯಾಗಿದೆ.

    ಕೆರೆ ಸಂಪೂರ್ಣ ಖಾಲಿಯಾಗಿರುವ ಕಾರಣ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸದ್ಯ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪಕ್ಕದ ಬಳ್ಳೂರ, ಹನಸಿ ಗ್ರಾಮ ಅವಲಂಬಿಸುವಂತಾಗಿದೆ. ಶಿರಕೋಳ ಗ್ರಾಮಕ್ಕೆ ಪ್ರತಿವರ್ಷವೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದರೂ, ನೀರಿನ ವಿಷಯದಲ್ಲಿ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿಗಳು ಸರಿಯಾದ ಸಮಯಕ್ಕೆ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ, ಈ ಬಾರಿಯೂ ಕೆರೆಯಲ್ಲಿ ನೀರು ಇಲ್ಲದಂತಾಗಿದೆ. ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿಗಳ ನಿರ್ಲಕ್ಷೃ ಧೋರಣೆಗೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

    ಕುಡಿಯುವ ನೀರಿನ ಕೆರೆ ಖಾಲಿಯಾಗಿದ್ದರೂ, ಕೆರೆಗೆ ನೀರು ತುಂಬಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿಲ್ಲ. ಇದರಿಂದಾಗಿ ನಮ್ಮ ಊರಿನವರು ನೀರಿಗಾಗಿ ಬಳ್ಳೂರ, ಹನಸಿ ಗ್ರಾಮದಿಂದ ಕುಡಿಯುವ ನೀರನ್ನು ತರಬೇಕಾಗಿದೆ. ಬೋರವೆಲ್ ನೀರು ಕುಡಿಯಲು ಯೋಗ್ಯವಿಲ್ಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದ ಜನರು ಸಂಕಷ್ಟ ಎದುರಿಸುವಂತಾಗಿದೆ.
    I ಸೋಮಲಿಂಗಪ್ಪ ಬಳಿಗೇರ, ಶಿರಕೋಳ ಗ್ರಾಮಸ್ಥ

    ಕುಡಿಯುವ ನೀರಿನ ಕೆರೆ ಖಾಲಿಯಾಗಿದ್ದು ನಿಜ. ಈಗಾಗಲೇ ಎರಡು ಬೋರ್‌ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಶಾಸಕರು ಹಾಗೂ ಹಿರಿಯ ಅಧಿಕಾರಿಗಳಿಂದಿಗೆ ಮಾತನಾಡಿ ಶೀಘ್ರವೇ ಸಮಸ್ಯೆ ಪರಿಹರಿಸಲಾಗುವುದು.
    I ಸಂಗಪ್ಪ ಲಂಗೂಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನವಲಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts