More

    ಎಲ್ಲರನ್ನೂ ಒಗ್ಗೂಡಿಸಲು ಸ್ಪರ್ಧೆ ಆಯೋಜನೆ: ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿಕೆ

    ಮಂಡ್ಯ: ಮಕ್ಕಳಲ್ಲಿರುವ ಸೃಜನಾತ್ಮಕ ಕಲೆಯನ್ನು ಪ್ರದರ್ಶಿಸಲು ವೇದಿಕೆ ಹಾಗೂ ಕುಟುಂಬದ ಎಲ್ಲ ಸದಸ್ಯರನ್ನೂ ಒಗ್ಗೂಡಿಸಲು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ತಿಳಿಸಿದರು.
    ನಗರದ ಗಾಂಧಿಭವನದಲ್ಲಿ ಕಲಾತಪಸ್ವಿ ಟ್ರಸ್ಟ್ ಮತ್ತು ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ವತಿಯಿಂದ ದೇವಮ್ಮ ಚಿಕ್ಕಮರೀಗೌಡ ಸ್ಮರಣಾರ್ಥ ಆಯೋಜಿಸಿದ್ದ 6ನೇ ವರ್ಷದ ರಾಜ್ಯ ಮಟ್ಟದ ಚಿತ್ರಕಲಾ ಮತ್ತು ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
    ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳೊಂದಿಗೆ ಇಡೀ ಕುಟುಂಬವೂ ಸಹ ಆಗಮಿಸಿ ತಮ್ಮ ಮಕ್ಕಳು ಯಾವ ರೀತಿ ಚಿತ್ರ ಬರೆಯುತ್ತಾರೆ ಎಂಬುದನ್ನು ವೀಕ್ಷಿಸುವುದರ ಜತೆಗೆ ಖುಷಿ ವ್ಯಕ್ತಪಡಿಸುತ್ತಾರೆ. ಇದು ಇಡೀ ಕುಟುಂಬದ ಬೆಸುಗೆ ಕಾರ್ಯಕ್ರಮವಾಗಿ ಹೊರ ಹೊಮ್ಮುತ್ತದೆ ಎಂದು ಹೇಳಿದರು.
    ಚಿತ್ರಕಲೆ ಮತ್ತು ವೇಷ ಭೂಷಣ ಸ್ಪರ್ಧೆಯ ಮೂಲಕ ಮಕ್ಕಳಿಗೆ ಸ್ವಾತಂತ್ರ್ಯ ಸೇನಾನಿಗಳು, ಗಣ್ಯರು, ಪ್ರಧಾನಿ, ರಾಷ್ಟ್ರಪತಿಗಳು ಹಾಗೂ ಮಹನೀಯರ ಪರಿಚಯವಾಗುತ್ತದೆ. ಸ್ಪರ್ಧೆಯಲ್ಲಿ ಎಲ್ಲರಿಗೂ ಬಹುಮಾನ ಕೊಡಲಾಗದಿದ್ದರೂ, ಮುಂದಿನ ದಿನಗಳಲ್ಲಿ ಬಹುಮಾನ ಪಡೆಯುವಂತೆ ಪ್ರೇರೇಪಿಸುವ ಕಾರ್ಯವೂ ಆಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಹೇಳಿದರು.
    ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ. ಮಾದೇಶ್, ನಂದೀಶ್, ಲೋಹಿತ್‌ಕುಮಾರ್, ಕಟ್ಟೆಗೌಡ, ಅನಿಲ್‌ಕುಮಾರ್ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts