More

    ಕರೊನಾ ನಂತರವೂ ಕ್ರೀಡಾಪಟುಗಳ ಆತಂಕ ದೂರವಾಗದು

    ನವದೆಹಲಿ: ಕೋವಿಡ್-19 ಮಹಾಮಾರಿ ಜಾಗತಿಕ ಕ್ರೀಡಾಲೋಕವನ್ನೇ ಸ್ತಬ್ಧಗೊಳಿಸಿದೆ. ಇದರ ಭೀತಿಯಿಂದಾಗಿ ಭಾರತದಲ್ಲಿ ಲಾಕ್‌ಡೌನ್ ನಾಲ್ಕನೇ ಹಂತಕ್ಕೆ ಮುಂದುವರಿದಿದೆ. ಈ ವರ್ಷ ನಿಗದಿಯಾಗಿದ್ದ ಬಹುತೇಕ ಪ್ರತಿಷ್ಠಿತ ಕ್ರೀಡಾಕೂಟಗಳು ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದ್ದರೆ, ಕೆಲವೊಂದು ರದ್ದುಗೊಂಡಿವೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್-19 ಮುಕ್ತಾಯದ ಬಳಿಕವೂ ಕ್ರೀಡಾ ಚಟುವಟಿಕೆ ಆರಂಭಗೊಳ್ಳುವುದು ಅನುಮಾನವೇ ಆಗಿದೆ. ಇದಕ್ಕೆ ಧ್ವನಿಗೂಡಿಸಿರುವ ‘ದಿ ವಾಲ್’ ಖ್ಯಾತಿ ರಾಹುಲ್ ದ್ರಾವಿಡ್, ಇಂಥ ವಿಷಯದಲ್ಲಿ ಜನರಲ್ಲಿ ಹಿಂಜರಿಕೆ ಇದ್ದೇ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ನನ್ನ ಬಯೋಪಿಕ್‌ನಲ್ಲೇ ನಾನೇ ನಟಿಸುವೆ ಎಂದ ಕೊಹ್ಲಿ!

    ಯಾವುದೇ ಕ್ರೀಡಾಪಟುಗಳು ವೃತ್ತಿಜೀವನವನ್ನು ಪುನರಾರಂಭ ಮಾಡಬೇಕೆಂದರೆ ಮತ್ತೆ ಮತ್ತೆ ಯೋಚಿಸುವಂಥ ಪರಿಸ್ಥಿತಿ ಬಂದಿದೆ. ವೈಯಕ್ತಿಕವಾಗಿ ಇದು ದೊಡ್ಡ ಸಮಸ್ಯೆಯಾಗುವುದಿಲ್ಲ ಎನಿಸಿದರೂ ಸಮುದಾಯದ ದೃಷ್ಟಿಯಿಂದ ಏನೂ ಹೇಳಲಾಗುವುದಿಲ್ಲ ಎನ್ನುತ್ತಾರೆ ರಾಹುಲ್ ದ್ರಾವಿಡ್. ಒಲಿಂಪಿಕ್ ಚಾಂಪಿಯನ್ ಶೂಟರ್ ಅಭಿನವ್ ಬಿಂದ್ರಾ, ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಜತೆಗೆ ೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ದ್ರಾವಿಡ್, ಪ್ರಮುಖ ಟೂರ್ನಿಗಳಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ ಫಿಟ್ನೆಸ್, ಅಗತ್ಯ ಸಿದ್ಧತೆ ಬೇಕಾಗುತ್ತದೆ. ಇದರ ಜತೆಗೆ ಆತ್ಮವಿಶ್ವಾಸವೂ ಮುಖ್ಯ ಎಂದು ಹೇಳಿದರು. ಲಾಕ್‌ಡೌನ್‌ನಿಂದ ದೇಹ ಸಂಪೂರ್ಣ ವಿಶ್ರಾಂತಿಯಲ್ಲಿದೆ. ಇಂಥ ವಿಶ್ರಾಂತಿ ಯಾವುದೇ ಕ್ರೀಡಾಪಟುವಿಗೆ ಮತ್ತೆ ಸಿಗುವುದಿಲ್ಲ. ಆದರೆ, ಮತ್ತೆ ಕ್ರೀಡಾ ಜೀವನಕ್ಕೆ ಮರಳಬೇಕು. ಇದು ಕೂಡ ಪ್ರತಿಯೊಬ್ಬ ಕ್ರೀಡಾಪಟುವಿಗೆ ದೊಡ್ಡ ಸವಾಲು ಎಂದಿದ್ದಾರೆ. ದ್ರಾವಿಡ್ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಇದನ್ನೂ ಓದಿ:ಪಾಕ್ ನಾಯಕನಿಗೆ ಇಂಗ್ಲಿಷ್ ಕಲಿಯುವಂತೆ ಸಲಹೆ

    ಕರೊನಾ ನಂತರವೂ ಕ್ರೀಡಾಪಟುಗಳ ಆತಂಕ ದೂರವಾಗದು

    ಕರೊನಾ ವೈರಸ್ ಭೀತಿಯಿಂದಾಗಿ 13ನೇ ಆವೃತ್ತಿಯ ಐಪಿಎಲ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದ್ದರೆ, ಯುರೋಕಪ್, ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ನಿಗದಿಯಾಗಿವೆ. ಉಳಿದಂತೆ, ಎಲ್ಲಾ ಕ್ರೀಡಾ ಚಟುವಟಿಕೆಗಳು ಕಳೆದ ಎರಡು ತಿಂಗಳಿಂದ ಸ್ತಬ್ಧಗೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts