More

    ಹತ್ತು ಕಲಾವಿದರಿಗೆ ಡಾ.ರಾಜ್ ಕಲಾ ಸೇವಾರತ್ನ ಪ್ರಶಸ್ತಿ

    ಮೈಸೂರು: ಡಾ.ರಾಜ್‌ಕುಮಾರ್ ಕಲಾ ಸೇವಾ ಟ್ರಸ್ಟ್ ವತಿಯಿಂದ ನಗರದ ನಾದಬ್ರಹ್ಮ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಟ ಡಾ.ರಾಜ್‌ಕುಮಾರ್ 96ನೇ ಹುಟ್ಟುಹಬ್ಬದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಹತ್ತು ಕಲಾವಿದರಿಗೆ ಡಾ.ರಾಜ್ ಕಲಾ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಡ್ರಂ ವಾದಕ ಸಿ.ಆರ್.ರಾಘವೇಂದ್ರ ಪ್ರಸಾದ್, ಗಾಯಕರಾದ ಶಾರದಮ್ಮ, ಸರ್ವಮಂಗಳ, ತಬಲಾ ವಾದಕ ಎಂ.ಸಿ.ಜಗದೀಶ್, ರಾ.ಬಿ. ನಾಗರಾಜು, ವೈ. ರಮೇಶ್, ಆರ್. ರವಿ, ರಂಗಭೂಮಿ ಕಲಾವಿದೆ ಮೇರಿ ವಸಂತ, ರಿದಂ ಪ್ಯಾಡ್ ವಾದಕ ಆ್ಯಂಡ್ರೊ, ನೃತ್ಯ ನಿರ್ದೇಶಕ ಮೈಸೂರು ರಾಜು ಪ್ರಶಸ್ತಿ ಸ್ವೀಕರಿಸಿದರು.

    ಉದ್ಯಮಿ ರವಿಗೌಡ ಮಾತನಾಡಿ, ನಟ ಡಾ.ರಾಜ್‌ಕುಮಾರ್ ಚಿತ್ರಗಳನ್ನು ನೋಡಿ ಅದರಿಂದ ಪ್ರಭಾವಿತನಾಗಿ ಸಾಕಷ್ಟು ಕಲಿತಿದ್ದೇನೆ. ಕೆಂಟಂಕಿ ಕರ್ನಲ್ ಪ್ರಶಸ್ತಿ ದಕ್ಷಿಣ ಭಾರತದ ಕೆಲವೇ ಕೆಲವು ಕಲಾವಿದರಿಗೆ ಸಿಗುವ ಪ್ರಶಸ್ತಿ, ಆ ಪ್ರಶಸ್ತಿ ಡಾ.ರಾಜ್‌ರವರಿಗೆ ಸಿಕ್ಕಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

    2028ಕ್ಕೆ ಡಾ.ರಾಜ್‌ಕುಮಾರ್ ಜನ್ಮ ಶತಮಾನೋತ್ಸವ ಸಂಭ್ರಮ ಸಂದರ್ಭದಲ್ಲಿ ಮೈಸೂರಿನಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ಡಾ.ರಾಜ್‌ಕುಮಾರ್‌ರವರ ವೈವಿಧ್ಯಮಯ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಕಲಾಪೋಷಕ ಮೈಸೂರು ಜಯರಾಂ ಅವರಿಗೆ ಶುಭ ಕೋರಿದರು.

    ವೇದಿಕೆಯಲ್ಲಿ ಕಲಾಪೋಷಕ ಮೈಸೂರು ಜಯರಾಂ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts