More

    ಬೆಂಗಳೂರು ರತ್ನ: ಪ್ರಕೃತಿ ಚಿಕಿತ್ಸೆ ರೂವಾರಿ ಡಾ.ಆರ್. ಚೇತನ್​ಕುಮಾರ್| ಕೈಗೆಟುಕುವ ದರದಲ್ಲಿ ಜನರಿಗೆ ಟ್ರೀಟ್​ವೆುಂಟ್ ಲಭ್ಯ

    ಕೈಗೆಟುಕುವ ದರದಲ್ಲಿ ಜನರಿಗೆ ಟ್ರೀಟ್​ವೆುಂಟ್ ಲಭ್ಯ | ರಾಸಾಯನಿಕಯುಕ್ತ ಔಷಧಗಳ ಬಳಕೆ ಇಲ್ಲ

    ಭಾರತವನ್ನು ಔಷಧರಹಿತ ಚಿಕಿತ್ಸಕ ರಾಷ್ಟ್ರವನ್ನಾಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪ್ರಯೋಜನ ಪ್ರತಿಯೊಬ್ಬ ನಾಗರಿಕನಿಗೂ ಸಿಗಬೇಕು ಎಂಬ ಮಹದಾಶಯವುಳ್ಳ ಡಾ. ಆರ್. ಚೇತನ್​ಕುಮಾರ್ ಅವರು ಭಾರತೀಯ ಪಾರಂಪರಿಕ ವೈದ್ಯಪದ್ಧತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯ ಸೋಲೂರು ಗ್ರಾಮದ ಬಳಿ 200 ಹಾಸಿಗೆಯ ಎಂಆರ್​ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸ್ಥಾಪಿಸಿ, ತಂದೆ ಎಂ. ರಾಜಶೇಖರಯ್ಯ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತಿದ್ದಾರೆ. ಇಲ್ಲಿ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಲಭ್ಯವಿದೆ. ವೈದ್ಯಕೀಯ ಸೇವೆ ಜತೆಗೆ ಶಿಕ್ಷಣಕ್ಕೂ ಒತ್ತು ನೀಡುವ ಸಲುವಾಗಿ ಇವರು ‘ರಾಜಶೇಖರಯ್ಯ ಆಯುರ್ವೆದ ಕಾಲೇಜು’ ಕೂಡ ಪ್ರಾರಂಭಿಸಿದ್ದಾರೆ. ಪ್ರಕೃತಿ ಚಿಕಿತ್ಸೆ ಸದ್ಬಳಕೆ ಮತ್ತು ಯೋಗದ ಮಹತ್ವ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಬೆಂಗಳೂರಿನ ನಾಗರಬಾವಿ, ಶ್ರೀನಗರ, ಉತ್ತರಹಳ್ಳಿ ರಸ್ತೆಯಲ್ಲಿ ಹೊರರೋಗಿಗಳ ಘಟಕವನ್ನು ಸ್ಥಾಪಿಸಿರುವ ಚೇತನ್​ಕುಮಾರ್, ಈಗ ‘ವಿಜಯವಾಣಿ’ ನೀಡುವ ಬೆಂಗಳೂರು ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಬೆಂಗಳೂರು ರತ್ನ: ಪ್ರಕೃತಿ ಚಿಕಿತ್ಸೆ ರೂವಾರಿ ಡಾ.ಆರ್. ಚೇತನ್​ಕುಮಾರ್| ಕೈಗೆಟುಕುವ ದರದಲ್ಲಿ ಜನರಿಗೆ ಟ್ರೀಟ್​ವೆುಂಟ್ ಲಭ್ಯ

    ‘ಪ್ರಕೃತಿ ಚಿಕಿತ್ಸೆ’ (ನ್ಯಾಚುರೋಪಥಿ) ಕಡೆಗೆ ಹೆಚ್ಚಿನ ಸಂಖ್ಯೆಯ ರೋಗಿಗಳು ಮುಖ ಮಾಡುತ್ತಿರುವುದು ಗಮನಾರ್ಹ. ಇತ್ತೀಚಿನ ದಿನಗಳಲ್ಲಿ ಈ ಪದ್ಧತಿಯ ಚಿಕಿತ್ಸೆ ಸಾಕಷ್ಟು ಮುನ್ನೆಲೆಗೆ ಬಂದಿದೆ. ಜಾಗತಿಕ ಮಟ್ಟದಲ್ಲಿ ವೈಜ್ಞಾನಿಕ ಮತ್ತು ವೈದ್ಯಕೀಯ ಸಮುದಾಯವು ಈ ಚಿಕಿತ್ಸಾ ಕ್ರಮವನ್ನು ಅಂಗೀಕರಿಸಿದೆ. ಸಾಂಪ್ರದಾಯಿಕ ಔಷಧ ಅಥವಾ ಶಸ್ತ್ರಚಿಕಿತ್ಸೆಗೆ ಬದಲಾಗಿ ಪ್ರಕೃತಿ ಚಿಕಿತ್ಸೆಯೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪ್ರಕೃತಿಗೆ ರೋಗ ಗುಣಪಡಿಸುವ ಶಕ್ತಿ ಇದೆ. ಇದರಲ್ಲಿ ಯಾವುದೇ ರಾಸಾಯನಿಕಯುಕ್ತ ಔಷಧ ಬಳಸುವುದಿಲ್ಲ. ಬದಲಾಗಿ ಈ ವಿಶಿಷ್ಟ ಚಿಕಿತ್ಸಾ ವಿಧಾನದಿಂದ ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಜೀವನಶೈಲಿ ಬದಲಾವಣೆಯಿಂದ ದೇಹವನ್ನು ರೋಗಗಳಿಂದ ದೂರ ಇಡಲಾಗುತ್ತದೆ. ಹೀಗಾಗಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಯೋಜನವೂ ಪ್ರತಿಯೊಬ್ಬರಿಗೂ ಸಿಗಬೇಕೆಂಬ ಆಶಯದಿಂದ ಎಂ.ರಾಜಶೇಖರಯ್ಯ ಅವರು, 2016ರಲ್ಲಿ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯ ಸೋಲೂರು ಗ್ರಾಮದ ಬಳಿ 20 ಎಕರೆಯಲ್ಲಿ ಸುಸಜ್ಜಿತ 200 ಹಾಸಿಗೆಗಳ ‘ಎಂಆರ್​ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ’ ಸ್ಥಾಪಿಸಿದ್ದಾರೆ.

    ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವ ಎಂಆರ್​ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಪ್ರಸ್ತುತ ಎಂ.ರಾಜಶೇಖರಯ್ಯ ಪುತ್ರರಾದ ಡಾ.ಆರ್. ಚೇತನ್​ಕುಮಾರ್, ವ್ಯವಸ್ಥಾಪಕ ನಿರ್ದೇಶಕರಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಡಾ.ಆರ್. ಚೇತನ್​ಕುಮಾರ್ 1988ರ ಮೇ 31ರಂದು ಜನಿಸಿದರು. ಬೆಂಗಳೂರಿನ ಎನ್​ಬಿವಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಚಿಕ್ಕಂದಿನಿಂದಲೂ ಇವರು ದುಬಾರಿ ಚಿಕಿತ್ಸಾ ವೆಚ್ಚದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇದನ್ನು ಮನಗಂಡು ಕೆಎಲ್​ಇ ಸೊಸೈಟಿಯಲ್ಲಿ ಪಿಯುಸಿ ಮುಗಿಸಿದ ಬಳಿಕ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.

    ಬೆಂಗಳೂರು ರತ್ನ: ಪ್ರಕೃತಿ ಚಿಕಿತ್ಸೆ ರೂವಾರಿ ಡಾ.ಆರ್. ಚೇತನ್​ಕುಮಾರ್| ಕೈಗೆಟುಕುವ ದರದಲ್ಲಿ ಜನರಿಗೆ ಟ್ರೀಟ್​ವೆುಂಟ್ ಲಭ್ಯ

    ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮೂಲಕ ಆರೋಗ್ಯ ರಕ್ಷಣೆ ಕಾರ್ಯಕ್ರಮವನ್ನು ಜಾರಿಗೊಳಿಸಿರುವ ಚೇತನ್​ಕುಮಾರ್, ರಾಜ್ಯದ ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಬೋಧನೆ ಮಾಡಿದ್ದಾರೆ. ರೋಟರಿ ಕ್ಲಬ್​ನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆರೋಗ್ಯಸಂಬಂಧಿ ವಿಷಯಗಳ ಕುರಿತು ಮಾತನಾಡಿದ್ದಾರೆ. ಆಸ್ಪತ್ರೆ, ನಿವಾಸಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ಪ್ರತಿ ಅಂಶವನ್ನು ಮೇಲ್ವಿಚಾರಣೆ ನಡೆಸಿ ಚಿಕಿತ್ಸೆ ವಿಭಾಗವನ್ನು ಸುಧಾರಿಸಲು ಹಲವು ಕ್ರಮ ಕೈಗೊಂಡಿದ್ದಾರೆ. ನೇಮಕಾತಿ, ತರಬೇತಿ, ಕ್ಲಿನಿಕಲ್ ವಿಭಾಗವನ್ನು ಅಭಿವೃದ್ಧಿಪಡಿಸಿದ್ದಾರೆ. ರಾಜಶೇಖರಯ್ಯ ಸಮೂಹ ವಿದ್ಯಾಸಂಸ್ಥೆಗಳ ಎಂಡಿ ಆಗಿರುವ ಇವರು, ರಾಜಶೇಖರಯ್ಯ ಇಂಟರ್​ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆರಂಭಿಸಿದ್ದಾರೆ. ವೈದ್ಯಕೀಯ ಸೇವೆ ಜತೆಗೆ ಶಿಕ್ಷಣಕ್ಕೂ ಒತ್ತು ನೀಡಿದ್ದಾರೆ. ಭಾರತೀಯ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಹೆಚ್ಚಿಸಲು ಆರೋಗ್ಯ ರಕ್ಷಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಪ್ರಕೃತಿ ಚಿಕಿತ್ಸೆ ಸದ್ಬಳಕೆ ಮತ್ತು ಯೋಗದ ಮಹತ್ವ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಾಗರಬಾವಿ, ಶ್ರೀನಗರ, ಉತ್ತರಹಳ್ಳಿ ರಸ್ತೆಯಲ್ಲಿ ಹೊರರೋಗಿಗಳ ಘಟಕವನ್ನು ಸ್ಥಾಪಿಸಿದ್ದಾರೆ.

    ಪ್ರಕೃತಿ ಚಿಕಿತ್ಸೆಯು ಆರೋಗ್ಯಕರ ಆಹಾರ, ಶುದ್ಧ ನೀರು, ಸೂರ್ಯನ ಬೆಳಕು, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆ ಮಹತ್ವವನ್ನು ಆಧರಿಸಿದೆ. ಪ್ರಕೃತಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಎಲ್ಲ ಬಗೆಯ ರೋಗವನ್ನು ವಾಸಿ ಮಾಡಲಾಗುತ್ತದೆ. ಭವಿಷ್ಯದಲ್ಲಿ ಅನಾರೋಗ್ಯ ಸಂಭವಿಸುವ ಸಾಧ್ಯತೆ ಕಡಿಮೆ. ಕೈಗೆಟುಕುವ ದರದಲ್ಲಿ ರೋಗಿಗಳಿಗೆ ಐಷಾರಾಮಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ನ್ಯಾಚುರೋಪಥಿ ಕ್ಷೇತ್ರವನ್ನು ಉತ್ತೇಜಿಸಲಾಗುತ್ತಿದೆ. ನನ್ನ ಪುತ್ರ ಡಾ. ಚೇತನ್ ಕುಮಾರ್ ಅವರಿಗೆ ‘ಬೆಂಗಳೂರು ರತ್ನ’ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ.

    | ಎಂ. ರಾಜಶೇಖರಯ್ಯ ಎಂಆರ್​ಆರ್ ಸಮೂಹ ಸಂಸ್ಥೆ ಸ್ಥಾಪಕ

    ಹಲವು ಚಿಕಿತ್ಸೆಗಳು ಲಭ್ಯ:

    ವೈದ್ಯಕೀಯ ಸೇವೆಯಿಂದ ಶಿಕ್ಷಣ ಕ್ಷೇತ್ರಕ್ಕೆ ಡಾ. ಆರ್. ಚೇತನ್ ಕುಮಾರ್ ಅವರು ಕಾಲಿಟ್ಟಿದ್ದಾರೆ. ತಂದೆಯ ಮಾರ್ಗದರ್ಶನದಿಂದ, ‘ರಾಜಶೇಖರಯ್ಯ ಆಯುರ್ವೆದ ಚಿಕಿತ್ಸಾ ಕಾಲೇಜು ಹಾಗೂ ಪ್ರಕೃತಿ ಚಿಕಿತ್ಸಾ ಕಾಲೇಜು’ ಆರಂಭಿಸಿದ್ದಾರೆ. ಐದೂವರೆ ವರ್ಷ ಅವಧಿಯ ಕೋರ್ಸ್ ಗಳಿವೆ. ಆಯುರ್ವೆದ ಕಾಲೇಜು 100 ಸೀಟುಗಳನ್ನು ಹಾಗೂ ಪ್ರಕೃತಿ ಚಿಕಿತ್ಸಾ ಕಾಲೇಜು 40 ಸೀಟುಗಳನ್ನು ಒಳಗೊಂಡಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (ದೆಹಲಿ) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾನ್ಯತೆ ಪಡೆದುಕೊಂಡಿದೆ. ಸೀಟು ಪಡೆಯಲು ನೀಟ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ಶೇ.35 ಅಂಕ ಪಡೆದಿರಬೇಕು. ಕಣ್ಣಿನ ತೊಂದರೆ, ಕಿವಿ, ಮೂಗು ಮತ್ತು ಗಂಟಲು, ಅಲರ್ಜಿ, ಅಸ್ತಮಾ, ಉದರ ಸಂಬಂಧಿ ಸಮಸ್ಯೆ, ಹುಳಿತೇಗು, ಅಜೀರ್ಣ, ಗ್ಯಾಸ್ಟ್ರಿಕ್, ಬೆನ್ನು, ಮಂಡಿ, ಕುತ್ತಿಗೆ ನೋವು, ತಲೆ ನೋವು, ಮಧುಮೇಹ, ರಕ್ತದೊತ್ತಡ, ತಲೆಕೂದಲು ಉದುರುವಿಕೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಪಂಚಕರ್ಮ ಚಿಕಿತ್ಸೆ (ವಿರೇಚನ, ವಮನ, ನಸ್ಯ, ಬಸ್ತಿ, ದೊತ್ತಮೋಕ್ಷಣ), ಮರ್ಮ ಚಿಕಿತ್ಸೆ, ಮರ್ದನ/ ಅಭ್ಯಂಗ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಅಕ್ಷಿ ತರ್ಪಣ, ಅಗ್ನಿಕರ್ಮ, ಕ್ಷಾರಕರ್ಮ, ಲೇಪನ, ಸೌಂದರ್ಯ ಚಿಕಿತ್ಸೆ, ಯೋಗ, ಸೂಜಿ ಚಿಕಿತ್ಸೆ ಲಭ್ಯವಿದೆ.

    ಆಸ್ಪತ್ರೆಯ ವೈಶಿಷ್ಟ್ಯ:

    ಚಿಕಿತ್ಸೆಗಾಗಿ ಬರುವ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿಗಳು, ವಿಶೇಷ ಕೊಠಡಿಗಳು, ಕಾಟೇಜ್​ಗಳ ವ್ಯವಸ್ಥೆ ಇದೆ. ಪುರುಷ ಮತ್ತು ಮಹಿಳೆಯರು ತಂಗಲು ಪ್ರತ್ಯೇಕ ಅತ್ಯಾಧುನಿಕ ಕೊಠಡಿಗಳಿವೆ. ಟ್ವಿನ್ ಶೇರಿಂಗ್, ತ್ರೀ ಷೇರಿಂಗ್, ಸೆಮಿ ಡೀಲಕ್ಸ್, ಡೀಲಕ್ಸ್, ವಿಶೇಷ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಸೂಟ್ಸ್ ವ್ಯವಸ್ಥೆ ಇದೆ. ಜಲಚಿಕಿತ್ಸೆ, ಮರ್ದನ, ಮಾಲೀಶು ಚಿಕಿತ್ಸೆ, ಯೋಗ, ಸೂಜಿ, ಫಿಸಿಯೋಥೆರಪಿ, ಆಹಾರ/ ಪಥ್ಯ, ಸುಗಂಧಯುಕ್ತ ಚಿಕಿತ್ಸೆ, ಮಣ್ಣಿನ ಸ್ನಾನ, ಅಕ್ಯುಪಂಕ್ಚರ್, ಮಸಾಜ್, ಕೊಲಾನ್ ಹೈಡ್ರೋಥೆರಪಿ, ಸ್ಟೀಂ ಬಾತ್, ಸೋನಾಬಾತ್, ಉಪವಾಸ ಚಿಕಿತ್ಸೆ, ಯೋಗ ಚಿಕಿತ್ಸೆಗಳನ್ನು ನೀಡುವ ಹಾಗೂ ಆರೋಗ್ಯಕರ ಜೀವನ ಪದ್ಧತಿ ಕಲಿಸಿಕೊಡುವ ಆರೋಗ್ಯಶಿಕ್ಷಣ ಕೇಂದ್ರ ಇದಾಗಿದೆ. ಜನರಲ್ ವಾರ್ಡ್, ಸ್ಪೆಷಲ್ ವಾರ್ಡ್ ಹಾಗೂ ಕಾಟೇಜ್​ಗಳ ಸೌಲಭ್ಯವಿದೆ. ರೋಗಗಳಿಗೆ ತಕ್ಕಂತೆ ಚಿಕಿತ್ಸೆ ಸೌಲಭ್ಯಗಳಿವೆ. ಹಣ್ಣಿನ ರಸ, ಎಳನೀರು, ಹಣ್ಣುಗಳು, ಹಸಿ ತರಕಾರಿ, ಮೊಳಕೆ ಕಾಳು ಸೇರಿ ಪಥ್ಯಾಹಾರ ನೀಡಲಾಗುತ್ತಿದೆ.

    ಹಲವು ರೋಗಗಳಿಗೆ ರಾಮಬಾಣ:

    ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯು ಸುಂದರವಾದ ಪ್ರಾಕೃತಿಕ ಪರಿಸರ, ಅತ್ಯಾಧುನಿಕ ಉಪಕರಣ, ನುರಿತ ಸಿಬ್ಬಂದಿ ವರ್ಗ, ಈಜುಕೊಳ, ಜಿಮ್ ನಡಿಗೆ ಪಥ ಸೇರಿ ಹಲವು ಸೌಲಭ್ಯಗಳಿವೆ. ಆಸ್ಪತ್ರೆಯು ತೆಂಗು, ಮಾವು ತೋಟದ ಮಧ್ಯದಲ್ಲಿ ಕಂಗೊಳಿಸುತ್ತಿದೆ. ಸುಸಜ್ಜಿತ ಪ್ರಯೋಗಾಲಯ, ಒಳಾಂಗಣ ಆಟದಂಗಳ, ಜಿಮ್ ವಿಭಾಗ, ಈಜುಕೊಳ, ಬಯಲು ರಂಗಮಂದಿರ ಹಾಗೂ ಆಹಾರವನ್ನೇ ಔಷಧವಾಗಿ ಬಳಸಲು ಸುಂದರ ಪಥ್ಯ ಕೇಂದ್ರವೂ ಇದೆ. ಒಂದೊಂದು ರೋಗಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವ್ಯವಸ್ಥೆ ಇದೆ. ಬೊಜ್ಜು, ಮಧುಮೇಹ, ರಕ್ತದೊತ್ತಡ, ಪಾರ್ಶ್ವವಾಯು, ತಲೆನೋವು, ಮಲಬದ್ಧತೆ, ಒತ್ತಡ, ತಲೆನೋವು, ನಿದ್ರಾಹೀನತೆ, ಗ್ಯಾಸ್ಟ್ರಿಕ್, ಬಂಜೆತನ, ಖಿನ್ನತೆ, ಪಿಸಿಓಡಿ, ಮಂಡಿನೋವು, ಸೋಂಟನೋವು ಹಾಗೂ ನರ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ವರ್ಷ ಸಾವಿರಾರು ರೋಗಿಗಳು ಆಸ್ಪತ್ರೆಯಲ್ಲಿ ಪ್ರಾಕೃತಿಕ ಚಿಕಿತ್ಸೆ ಪಡೆದು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿ ತೆರಳುತ್ತಿದ್ದಾರೆ. ದೇಶ-ವಿದೇಶಗಳಿಂದ ಸಾವಿರಾರು ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದಿರುವುದು ಗಮನಾರ್ಹ.

    ಎಲ್ಲಿದೆ ಆಸ್ಪತ್ರೆ?

    ಎಂ. ರಾಜಶೇಖರಯ್ಯ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ (ಎಂಆರ್​ಆರ್), ಸೋಲೂರು ಗ್ರಾಮ, ರಾಷ್ಟ್ರೀಯ ಹೆದ್ದಾರಿ-48 (ಬೆಂಗಳೂರು- ಹಾಸನ ಹೆದ್ದಾರಿ), ಭಾರತ್ ಗ್ಯಾಸ್ ಗೋದಾಮಿನ ಪಕ್ಕ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ- 562 127, ದೂ: 98452 23223, 99726 39888.

    ಎಲೆಮರೆ ಕಾಯಿಯಂತೆ ಮಾಡುತ್ತಿರುವ ಸಾಧನೆಯನ್ನು ಗುರುತಿಸಿ ‘ಬೆಂಗಳೂರು ರತ್ನ’ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ‘ವಿಜಯವಾಣಿ’ ಪತ್ರಿಕೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ನ್ಯಾಚುರೋಪಥಿ ಮತ್ತು ಆಯುರ್ವೆದ ಕ್ಷೇತ್ರಗಳಲ್ಲಿ ಇನ್ನಷ್ಟು ಸೇವೆ ಮಾಡಲು ಪ್ರೇರಣೆ ಸಿಕ್ಕಿದೆ. ವೈದ್ಯಕೀಯ ಕ್ಷೇತ್ರದಿಂದ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ರಾಜಶೇಖರಯ್ಯ ಆಯುರ್ವೆದ ಕಾಲೇಜು ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಿದ್ದೇವೆ.

    | ಡಾ. ಆರ್.ಚೇತನ್​ಕುಮಾರ್, ಎಂಆರ್​ಆರ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ

    ಆರೋಗ್ಯ ಪೂರ್ಣ ಸಮಾಜಕ್ಕೆ ಒತ್ತು

    ಆಧುನಿಕ ಜಗತ್ತಿನ ವೇಗದ ಬದುಕಿನಲ್ಲಿ ಆರೋಗ್ಯದ ಸಮಸ್ಯೆಗಳು ದಿನೇದಿನೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ದೈಹಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದಕ್ಕೆ ಬದಲಾಗುತ್ತಿರುವ ಜೀವನಶೈಲಿ, ತಪು್ಪ ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡ ಪ್ರಮುಖ ಕಾರಣಗಳಾಗಿವೆ. ಅನವಶ್ಯಕವಾಗಿ ಔಷಧ ಸೇವನೆಯಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತಿದೆ. ಇದನ್ನು ಮನಗಂಡ ಎಂಆರ್​ಆರ್ ಸಮೂಹ ಸಂಸ್ಥೆ ಆರೋಗ್ಯಪೂರ್ಣ ಸಮಾಜ ನಿರ್ವಣಕ್ಕೆ ಒತ್ತು ಕೊಟ್ಟಿದೆ. ರೋಗ ಲಕ್ಷಣಗಳನ್ನು ಮಾತ್ರ ಗುಣಪಡಿಸದೆ, ಅದರ ಹಿಂದಿರುವ ಕಾರಣಗಳನ್ನು ಪತ್ತೆ ಮಾಡಿ ಸಂಪೂರ್ಣ ನಿವಾರಿಸುವ ಪ್ರಯತ್ನ ಮಾಡುತ್ತಿದೆ. ರೋಗಿಗಳಿಗೆ ಜ್ಞಾನ, ರ್ತಾಕ ಭರವಸೆ, ಸ್ಪೂರ್ತಿ ನೀಡಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವುದು. ಪ್ರತಿ ವ್ಯಕ್ತಿಯ ಆರೋಗ್ಯ ಲಕ್ಷಣಗಳು ಹಾಗೂ ಪ್ರಭಾವಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಗೆ ಒಳಪಡಿಸುವುದು, ಪ್ರತಿಯೊಬ್ಬರ ಸೌಖ್ಯ ಮತ್ತು ಆರೋಗ್ಯಕ್ಕೆ ಸಂಸ್ಥೆ ಆದ್ಯತೆ ಕೊಟ್ಟಿದೆ. ಆರೋಗ್ಯಕರ ಆಹಾರ, ಶುದ್ಧ ನೀರು, ವ್ಯಾಯಾಮ, ಉಪವಾಸ, ಸೂರ್ಯನ ಬೆಳಕು ಮತ್ತು ಒತ್ತಡ ನಿರ್ವಹಣೆ ಪ್ರಕೃತಿ ಚಿಕಿತ್ಸೆಯ ಆಧಾರವಾಗಿವೆ. ಮಾನಸಿಕ, ದೈಹಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಮುಂತಾದ ಮಾನವ ದೇಹದ ಎಲ್ಲ ಅಂಶಗಳನ್ನು ಯಶಸ್ವಿಯಾಗಿ ಪರಿಗಣಿಸುತ್ತಿದೆ.

    ಕಾಲೇಜಿನಲ್ಲಿರುವ ಸೌಲಭ್ಯಗಳು

    ರಾಜಶೇಖರಯ್ಯ ಆಯುರ್ವೆದ ಕಾಲೇಜಿನಲ್ಲಿ ಸುಸಜ್ಜಿತವಾದ ಪ್ರಯೋಗಾಲಯ, ಅನುವರ್ತನ ಚಿಕಿತ್ಸೆ, ಸುಂದರ ನಡಿಗೆಯ ದಾರಿ, ಜಿಮ್ ವಿಭಾಗ, ಸ್ಪಾ, ಒಳಾಂಗಣ ಆಟದಂಗಳ, ಈಜುಕೊಳ, ಬಯಲು ರಂಗಮಂದಿರ, ಭದ್ರತಾ ವ್ಯವಸ್ಥೆ, ಸೇಫ್ಟಿ ಲಾಕರ್ಸ್, ಗ್ರಂಥಾಲಯ, ಔಷಧಾಲಯ, ವೈ-ಫೈ ಸಂಪರ್ಕ, ವಾಹನಗಳ ನಿಲ್ದಾಣ ಸೌಕರ್ಯ.

    ಸಂಸ್ಥೆಯ ಹೆಗ್ಗಳಿಕೆ

    ಐಟಿ-ಬಿಟಿ ಉದ್ಯೋಗಿಗಳಿಗಾಗಿ ಪ್ರತಿ ಶನಿವಾರ ಮತ್ತು ಭಾನುವಾರ ಎಂಆರ್​ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ‘ಒತ್ತಡಮುಕ್ತ ಕಾರ್ಯಕ್ರಮ’ ಆಯೋಜಿಸಲಾಗುತ್ತಿದೆ. ಮಾನಸಿಕ ಒತ್ತಡ, ವಿಟಮಿನ್ ಸಂಬಂಧಿಸಿದ ಸಮಸ್ಯೆಗಳ ಸಲಹೆ ಕೊಡಲಾಗುತ್ತಿದೆ. ಇದರ ಪ್ರಯೋಜನವನ್ನು 2 ಸಾವಿರಕ್ಕೂ ಅಧಿಕ ಟೆಕ್ಕಿಗಳು ಪಡೆದಿರುವುದು ಗಮನಾರ್ಹ. ಅಲ್ಲದೆ, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಒತ್ತಡ ನಿರ್ವಹಣೆ, ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಸಂಸ್ಥೆ ಮಾಡಿದೆ. ಮಧುಮೇಹಮುಕ್ತ ಭಾರತವನ್ನಾಗಿಸಲು ಆಸ್ಪತ್ರೆ, ರೋಗಿಗಳಿಗೆ ಉಚಿತ ಮಾಹಿತಿ, ಜೀವನಶೈಲಿ ಸುಧಾರಣೆ ಮತ್ತು ಆಹಾರಧಲ್ಲಿ ಸಿರಿಧಾನ್ಯಗಳ ಬಳಕೆ ಬಗ್ಗೆ ಮಾಹಿತಿ ನೀಡುತ್ತಿದೆ. ಕಳಪೆ ಹಾಗೂ ಕಲಬೆರಕೆ ಆಹಾರ ಪದಾರ್ಥಗಳ ತಡೆಗಟ್ಟುವ ನಿಟ್ಟಿನಲ್ಲಿ ಎಂಆರ್​ಆರ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ‘ಇಕೋ ಫುಡ್ಸ್’ ಹೆಸರಿನಡಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುವ ರೈತರಿಂದ ನೇರವಾಗಿ ಆಹಾರ ಉತ್ಪನ್ನಗಳನ್ನು ಖರೀದಿಸುತ್ತಿದೆ. ಶುದ್ಧೀಕರಿಸಿದ ಸಿರಿಧಾನ್ಯ, ಜೇನುತುಪ್ಪ, ಸಾವಯವ ಬೆಲ್ಲ, ಗಾಣದ ಎಣ್ಣೆ ಸೇರಿ ಇತರ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿದೆ.

    ಡಾ. ಚೇತನ್ ಕುಮಾರ್ ಸಾಧನೆ:

    • ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾದ ಗೌರವ ಸದಸ್ಯ
    • ರಾಜಶೇಖರಯ್ಯ ಸಮೂಹ
    • ಸಂಸ್ಥೆಗಳ ಸಂಸ್ಥಾಪಕ
    • ಎಂಆರ್​ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸಂಸ್ಥಾಪಕ
    • ವರ್ಷದಲ್ಲಿ 5 ಸಾವಿರಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆ
    • 150 ಶಾಲಾ-ಕಾಲೇಜುಗಳಲ್ಲಿ ಯೋಗ ಜಾಗೃತಿ ಶಿಬಿರ
    • ಆಯುಷ್ ಉತ್ತೇಜಿಸಲು 15 ಜಿಲ್ಲೆಗಳಲ್ಲಿ ಶಿಬಿರ ಆಯೋಜನೆ
    • ರೋಗ ನಿವಾರಣೆಗೆ ಸಾಂಪ್ರದಾಯಿಕ ವಿಧಾನದ ಬಗ್ಗೆ ಅರಿವು, ರೋಗನಿರೋಧಕ ಶಕ್ತಿಗಾಗಿ ಉಚಿತ ಕಿಟ್ ವಿತರಣೆ
    • ಕೋವಿಡ್ ವೇಳೆ ನಿರ್ಗತಿಕರಿಗೆ
    • ಕೋವಿಡ್ ರೋಗಿಗಳಿಗೆ
    • ಉಚಿತ ಚಿಕಿತ್ಸೆ ನೀಡಿಕೆ
    • ಭಾರತವನ್ನು ಔಷಧರಹಿತ ಚಿಕಿತ್ಸಕ ರಾಷ್ಟ್ರವನ್ನಾಗಿಸಲು ಶ್ರಮ
    • ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್ ಸೌಲಭ್ಯ
    • ನಿರ್ಗತಿಕ ಮಕ್ಕಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕ ವಿತರಣೆ
    • ಅಂಧರಿಗೆ ಬ್ರೖೆಲ್ ವಾಚ್, ಅನಾಥಾಶ್ರಮ ವಿದ್ಯಾರ್ಥಿಗಳಿಗೆ ಸ್ಥಾಯಿ, ಟಿಪ್ಪಣಿ ಪುಸ್ತಕಗಳು ಮತ್ತು ಕಥೆ ಪುಸ್ತಕ ವಿತರಣೆ
    • ವ್ಯಾಪಾರ ಅಭಿವೃದ್ಧಿ, ರೋಗಿಗಳ ಆರೋಗ್ಯ ಶಿಕ್ಷಣ, ರೋಗಿಯ ಮೌಲ್ಯಮಾಪನ ನಿರ್ವಹಣೆ
    ಬೆಂಗಳೂರು ರತ್ನ: ಪ್ರಕೃತಿ ಚಿಕಿತ್ಸೆ ರೂವಾರಿ ಡಾ.ಆರ್. ಚೇತನ್​ಕುಮಾರ್| ಕೈಗೆಟುಕುವ ದರದಲ್ಲಿ ಜನರಿಗೆ ಟ್ರೀಟ್​ವೆುಂಟ್ ಲಭ್ಯ

    ಅರಸಿ ಬಂದಿರುವ ಪ್ರಶಸ್ತಿ ವಿವರ:

    1. 2018ರಲ್ಲಿ ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ

    2. ಒಡಿಶಾ ಸರ್ಕಾರದಿಂದ ಯುವ ಐಕಾನ್ ಮತ್ತು ನ್ಯಾಚುರೋಪತಿಯಲ್ಲಿ ಅತ್ಯುತ್ತಮ ವೈದ್ಯರಾಗಿ ಗೌರವ

    3. 2019ರಲ್ಲಿ ವೈದ್ಯರ ವಿಶೇಷ ಪ್ರಶಸ್ತಿ, ರಾಷ್ಟ್ರೀಯ ಹಸಿರು ಅವಾರ್ಡ್

    4. ನ್ಯಾಚುರೋಪತಿ ಕ್ಷೇತ್ರದಲ್ಲಿ ಟೈಮ್ಸ್ ಹೆಲ್ತ್ ಕೇರ್ ಅಚೀವರ್ಸ್ ಅವಾರ್ಡ್

    5. ಪ್ರಕೃತಿ ಚಿಕಿತ್ಸಾ ವಿಭಾಗದಲ್ಲಿ 2019ರ ವರ್ಷದ ಜಾಗತಿಕ ಐಕಾನ್ ಪ್ರಶಸ್ತಿ

    6. 2021ರಲ್ಲಿ ಏಷ್ಯಾ ಒನ್​ನಿಂದ ಏಷ್ಯಾದ ಶ್ರೇಷ್ಠ ನಾಯಕ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts