More

    ಯೋಧರ ತ್ಯಾಗ, ಬಲಿದಾನ ಪ್ರೇರಣೆಯಾಗಲಿ- ಡಾ. ಗಜಾನನ ಸೊಗಲನ್ನವರ

    ಹಿರೇಬಾಗೇವಾಡಿ: ಜೀವದ ಹಂಗು ತೊರೆದು ದೇಶದ ಗಡಿ ಕಾಯ್ದು ನಮ್ಮನ್ನೆಲ್ಲ ರಕ್ಷಣೆ ಮಾಡುವ ವೀರ ಯೋಧರ ಸೇವಾ ಮನೋಭಾವ, ತ್ಯಾಗ ಹಾಗೂ ಬಲಿದಾನ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಡಾ. ಗಜಾನನ ಸೊಗಲನ್ನವರ ಹೇಳಿದರು.

    ಗ್ರಾಮದ ಗೆಳೆಯರ ಬಳಗ, ಅಳಿಲು ಸೇವಾ ಸಂಸ್ಥೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇಲ್ಲಿಯ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿವೃತ್ತ ಯೋಧರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

    ಕೌಟುಂಬಿಕ ಹಿತವನ್ನು ಮರೆತು ದೇಶಕ್ಕಾಗಿ ಹಗಲಿರುಳು ಶ್ರಮಿಸಿದ ಯೋಧರನ್ನು ನಿವೃತ್ತಿಯ ನಂತರ ಸನ್ಮಾನಿಸಿ, ಗೌರವಿಸುವುದರಿಂದ ಅಲ್ಪವಾದರೂ ಅವರ ಋಣವನ್ನು ತೀರಿಸಿದಂತಾಗುತ್ತದೆ ಎಂದು ಹೇಳಿದರು.

    ನಿವೃತ್ತ ಯೋಧರಾದ ಗ್ರಾಮದ ಶಿವರಾಯಪ್ಪ ಗುರುವಣ್ಣವರ, ದೊಡಗೌಡ ಪರ್ವತಗೌಡ, ಸಮದಾನಿ ಮದರಂಗಿ, ಚಂದ್ರಶೇಖರ ದನದಮನಿ, ಪುರಖಾನ ಮುಲ್ಲಾ, ಬಸವರಾಜ ಉಣಕಲ್ ಹಾಗೂ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದ ಗಜಾನನ ಸೊಗಲನ್ನವರ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ಸಹಾಯಕ ಎಸ್.ಬಿ. ಮೆಳೇದ ಅವರು ಅಪಾಯಕಾರಿ ಕರೊನಾ ವೈರಸ್ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    52ಕ್ಕೂ ಹೆಚ್ಚು ಜನರು ಸ್ವ ಪ್ರೇರಣೆಯಿಂದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ನೀತಾ ಚವ್ಹಾಣ, ಅಳಿಲು ಸೇವಾ ಸಂಸ್ಥೆಯ ಮಂಜುನಾಥ ರೊಟ್ಟಿ, ಆಕಾಶ ಥಬಾಜ, ನವೀನ ತೋಟಗಿ ಗ್ರಾಮಸ್ಥರು ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts