More

    ನನಗೆ ನನ್ನ ಅಪ್ಪ-ಅಮ್ಮ ಹುಟ್ಟಿದ ಊರು ಗೊತ್ತಿಲ್ಲ..ಒಂದೊಮ್ಮೆ ಬಂಧನ ಕೇಂದ್ರಕ್ಕೆ ಹೋಗುವ ಸ್ಥಿತಿ ಬಂದರೆ ನಾನೇ ಮೊದಲಿಗನಾಗಿರುತ್ತೇನೆ: ರಾಜಸ್ಥಾನ ಮುಖ್ಯಮಂತ್ರಿ

    ಜೈಪುರ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್​ ಪಡೆಯುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

    ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ) ವಿರೋಧಿಸಿ ಜೈಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅಚಾನಕ್​ ಆಗಿ ಪಾಲ್ಗೊಂಡ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಹಾಗಾಗಿ ಸಿಎಎಯನ್ನು ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡಬೇಕು. ಅದನ್ನು ಹಿಂಪಡೆಯಲು ಮುಂದಾಗಬೇಕು. ಸಿಎಎ ಹಿಂಪಡೆದರೆ ದೇಶದಲ್ಲಿ ಶಾಂತಿ, ಸಾಮರಸ್ಯ ಸ್ಥಾಪನೆಯಾಗುತ್ತದೆ ಎಂದು ಹೇಳಿದರು.

    ಇನ್ನು ಅಕ್ರಮ ವಲಸಿಗರನ್ನು, ಪೌರತ್ವಕ್ಕೆ ಸಾಕ್ಷಿ ಇಲ್ಲದವರು, ಎನ್​ಪಿಆರ್​ ಸಮಯದಲ್ಲಿ ದಾಖಲೆಗಳನ್ನು ಸೂಕ್ತವಾಗಿ ನೀಡದೆ ಇರುವವರನ್ನು ಬಂಧನಕೇಂದ್ರಕ್ಕೆ ಕಳಿಸಲಾಗುತ್ತದೆ ಎಂಬ ಬಗ್ಗೆ ಮಾತನಾಡಿದ ಅವರು, ನನ್ನ ಪೌರತ್ವದ ಬಗ್ಗೆ ನನಗೆ ಸರಿಯಾದ ವಿವರಣೆ ಕೊಡಲು ಸಾಧ್ಯವಾಗದೆ ಇದ್ದರೆ ನನ್ನನ್ನೂ ಬಂಧನ ಕೇಂದ್ರಕ್ಕೆ ಹೋಗುವಂತೆ ಸೂಚಿಸಲಾಗುತ್ತಿದೆ. ನನಗೆ ನನ್ನ ಅಪ್ಪ-ಅಮ್ಮನ ಹುಟ್ಟಿದ ಊರು ಗೊತ್ತಿಲ್ಲ. ಒಂದೊಮ್ಮೆ ಅಂತಹ ಪರಿಸ್ಥಿತಿ ಬಂದರೆ ಬಂಧನ ಕೇಂದ್ರಕ್ಕೆ ಹೋಗುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ..ಈ ಬಗ್ಗೆ ಖಚಿತವಾಗಿರಿ ಎಂದು ಅಶೋಕ್​ ಗೆಹ್ಲೋಟ್ ಹೇಳಿದರು.

    ಹೊಸ ಕಾನೂನುಗಳನ್ನು ರಚಿಸುವುದು ಸರ್ಕಾರದ ಹಕ್ಕು. ಆದರೆ ಹಾಗೆ ಕಾನೂನುಗಳನ್ನು ಜಾರಿ ಮಾಡುವಾಗ ದೇಶದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ದೆಹಲಿಯ ಶಾಹೀನ್ ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಂತೆ ದೇಶದ ಹಲವು ಕಡೆಗಳಲ್ಲಿ ಆಗುತ್ತಿದೆ. ಸಾರ್ವಜನಿಕರ ಭಾವನೆಗಳನ್ನು ಸರ್ಕಾರ ಅರ್ಥೈಸಿಕೊಳ್ಳಲಿ ಎಂದರು.
    ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಆದರೆ ದೇಶಾದ್ಯಂತ ಎನ್​ಆರ್​ಸಿ ಅನುಷ್ಠಾನದ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಅಮಿತ್​ ಷಾ ಈಗಾಗಲೇ ತಿಳಿಸಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts