More

    ವೈದ್ಯರಿಲ್ಲ ಎಂಬ ದೂರು ಬಾರದಿರಲಿ

    ಹಾವೇರಿ: ಎಲ್ಲ ಹಂತದ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಮೂಕ ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು. ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ದೂರುಗಳು ಬರಬಾರದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಸೂಚಿಸಿದರು.

    ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ಪಶು ಸಂಗೋಪನೆ, ಹಜ್ ಮತ್ತು ವಕ್ಪ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪಶು ವೈದ್ಯರು ಸ್ಥಳೀಯವಾಗಿ ಲಭ್ಯವಾಗುವುದಿಲ್ಲ ಎಂಬ ದೂರುಗಳಿವೆ. ಜಾನುವಾರುಗಳು ಮರಣ ಹೊಂದಿ ನಾಲ್ಕಾರು ದಿನ ಕಳೆದರೂ ಪೋಸ್ಟ್​ಮಾರ್ಟ್ಂ ಮಾಡದಿರುವುದರಿಂದ ವಿಮೆ ಪಡೆಯಲು ಅನನುಕೂಲವಾಗುತ್ತಿದೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಇದನ್ನು ಎಲ್ಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ನಿಯಮಿತವಾಗಿ ಹಳ್ಳಿಗೆ ಭೇಟಿ ನೀಡಬೇಕು. ತಾವು ಭೇಟಿ ನೀಡಿದ ಕುರಿತಂತೆ ವಾಟ್ಸ್ ಆಪ್​ನಲ್ಲಿ ಚಿತ್ರ ಸಹಿತ ಮಾಹಿತಿಯನ್ನು ನನಗೆ ನೀಡಬೇಕು ಎಂದು ತಾಕೀತು ಮಾಡಿದರು.

    ದೇಶದಲ್ಲಿ ಗೋ ಸಂಪತ್ತು ಕೃಷಿಯ ಭಾಗವಾಗಿದೆ. ಗೋ ಸಂಪತ್ತು ಬೆಳೆಯುವ ಜತೆಗೆ ರಕ್ಷಣೆಯಾಗಬೇಕು ಎಂದರು.

    ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ರಾಜೀವ ಕೂಲೇರ ಅವರು ಇಲಾಖೆಯ ಮಾಹಿತಿ, ಸಿಬ್ಬಂದಿ ಸ್ಥಿತಿಗತಿ, ಮೇವಿನ ಲಭ್ಯತೆ, ಜಾನುವಾರುಗಳ ಲಸಿಕೆ, ಮೇವುಕಿಟ್ ವಿತರಣೆ, ಗೋಶಾಲೆಗಳ ವಿವರ ನೀಡಿದರು.

    ಜಾನುವಾರುಗಳಿಗೆ ಪೂರೈಸುವ ಔಷಧ ಪ್ರಮಾಣ ಹೆಚ್ಚಿಸಬೇಕು. ಪಶು ರೋಗ ನಿರ್ಧಾರಕ ಪ್ರಯೋಗಾಲಯ ನಿರ್ವಿುಸಬೇಕು. ಜಿಲ್ಲಾ ಪಶು ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಹುದ್ದೆ ಭರ್ತಿ ಮಾಡಬೇಕು. ಜೆರಾಕ್ಸ್ ಯಂತ್ರ ವಿತರಿಸಬೇಕು ಹಾಗೂ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.

    ನಂತರ ಹಜ್ ಮತ್ತು ವಕ್ಪ್ ಸಮಿತಿಯ ಆಸ್ತಿಗಳ ಮಾಹಿತಿ, ನೋಂದಣಿ ವಿವರ, ಸರ್ವೆ ಕಾರ್ಯದ ಪ್ರಗತಿ ಕುರಿತು ಸಚಿವರು ಮಾಹಿತಿ ಪಡೆದರು. ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ, ಜಿಲ್ಲಾ ಹಜ್ ಸಮಿತಿ ಅಧ್ಯಕ್ಷ ಜವಳಿ, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪಿ.ಎನ್. ಹುಬ್ಬಳ್ಳಿ, ಪಾಲಿಕ್ಲಿನಿಕ್​ನ ಡಾ. ಗೋಪಿನಾಥ, ಪಾಲಿಕ್ಲಿನಿಕ್ ಶಸ್ತ್ರ ಚಿಕಿತ್ಸಕ ಡಾ. ಎಚ್.ಬಿ. ಸಣ್ಣಕ್ಕಿ ಇತರರಿದ್ದರು.

    ಜಾನುವಾರುಗಳಿಗೆ ಔಷಧ, ಲಸಿಕೆ ಕೊರತೆಯಾಗಬಾರದು. ಯಾವ ವೈದ್ಯರೂ ಔಷಧ ಖರೀದಿಗೆ ಚೀಟಿ ಬರೆದುಕೊಡಬಾರದು. ಅಗತ್ಯ ಔಷಧ ದಾಸ್ತಾನಿಗೆ ಪ್ರಸ್ತಾವನೆ ಸಲ್ಲಿಸಿ. ಪಶು ಆಸ್ಪತ್ರೆಗಳ ಸ್ವಚ್ಛತೆ, ಸೌಂದಯರ್ಿಕರಣಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ಸಹಾಯಕ ನಿರ್ದೇಶಕರು ಕಾರ್ಯನಿರ್ವಹಿಸಬೇಕು. ಶುಕ್ರವಾರದಿಂದಲೇ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ತಾಲೂಕಿನ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು.
    | ಪ್ರಭು ಚವ್ಹಾಣ, ಪಶು ಸಂಗೋಪನೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts