More

    ಸರ್ಕಾರಿ ಕೆಲಸ ಮಾಡಿಕೊಡಲು ಸಾರ್ವಜನಿಕರಿಗೆ ಹಣಕ್ಕೆ ಬೇಡಿಕೆ ಇಡಬೇಡಿ

    ಅಜ್ಜಂಪುರ: ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ವಿಳಂಬವಿಲ್ಲದೆ ಮಾಡಿಕೊಡಬೇಕು ಎಂದು ಲೋಕಾಯುಕ್ತ ನಿರೀಕ್ಷಕ ಅನಿಲ್ ರಾಥೋಡ್ ಹೇಳಿದರು.
    ತಾಪಂನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಕೆಲಸ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಡಬಾರದು. ಕಚೇರಿಗೆ ಅಲೆದಾಡುವಂತೆ ಮಾಡಬಾರದು. ಯಾವುದೇ ಸೇವೆಯಲ್ಲಿ ಲೋಪ ಕಂಡುಬಂದರೆ ಸಾರ್ವಜನಿಕರು ಲೋಕಾಯುಕ್ತರಿಗೆ ದೂರವಾಣಿ ಅಥವಾ ಭೇಟಿ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು.
    ಕಲ್ಲುಶೆಟ್ಟಿಹಳ್ಳಿ ಗ್ರಾಮದ ಉಮೇಶ್ ಮಾತನಾಡಿ, ನನ್ನ ಜಮೀನನ್ನು ಖಾತೆ ಮಾಡಿಕೊಟ್ಟು ಕೆಲ ದಿನಗಳ ನಂತರ ರದ್ದುಗೊಳಿಸಿದ್ದಾರೆ. ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ದೂರು ನೀಡಿದರು.
    ಗುಡ್ಡದಹಳ್ಳಿ ಮಂಜುನಾಥ್ ಮಾತನಾಡಿ, ಸರ್ವೇ ನಂ.24ರಲ್ಲಿ 30 ಎಕರೆಯಲ್ಲಿ ಸೊಲ್ಲಾಪುರ ಪರಿಶಿಷ್ಟ ಜಾತಿಯ ಹತ್ತು ಮಂದಿಗೆ 1978-79ರಲ್ಲಿ ಭೂಮಿ ಮಂಜೂರಾಗಿತ್ತು. ಅದೇ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದೇವೆ. ಆದರೆ ಈಗ ಅದೇ ಭೂಮಿಯ ಹಿಸ್ಸಾ ಸಂಖ್ಯೆಯನ್ನು (2020-21) ಎಂದು ಬದಲಾಯಿಸಿದ್ದಾರೆ. ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸರಿಪಡಿಸುತ್ತಿಲ್ಲ ಎಂದು ದೂರು ಕೊಟ್ಟರು.
    ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡರೂ 5000 ರೂಪಾಯಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ಅತ್ತಿಮೊಗ್ಗೆ ಮಹದೇವಪ್ಪ ಎಂಬುವರು ದೂರು ನೀಡಿದರು.
    ಸಭೆ ನಂತರ ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ದಾಖಲೆ ಪರಿಶೀಲಿಸಿದರು. ಔಷಧ ವಿತರಣಾ ಕೊಠಡಿಗೆ ಭೇಟಿ ನೀಡಿ ನಂತರ ದಾಸ್ತಾನು ಕೊಠಡಿಗೆ ತೆರಳಿದರು. ಇಂಡೆಂಟ್ ಮತ್ತು ಖರ್ಚಾಗಿರುವ ಔಷಧದ ಮಾಹಿತಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts