More

    ‘ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ…’

    ಬೆಂಗಳೂರು: ಜನರಿಗೆ ಒಳ್ಳೆಯ ನೆರಳು ಸಿಗಲಿ ಅಂತ ಬೀಜ ಬಿತ್ತುತ್ತೇವೆ. ಕೆಲವರು ಏನೇನೋ ಆಗ್ತಾರೆ ಬಿಡಿ. ರಮ್ಯಾ, ತೇಜಸ್ವಿನಿಯನ್ನೂ ಚುನಾವಣೆಗೆ ನಿಲ್ಲಿಸಿದ್ವಿ. ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ…

    ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರ ಆಕ್ರೋಶಭರಿತ ನುಡಿಗಳು. ಆರ್​ ಆರ್​ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಪರ ಶುಕ್ರವಾರ ಮತಯಾಚಿಸುವಾಗ ಮಾತನಾಡಿದ ಡಿಕೆಶಿ, ನಾವು ಕಷ್ಟಪಟ್ಟು ಮುನಿರತ್ನನನ್ನು ಗೆಲ್ಲಿಸಿದ್ವಿ. ಆಶಾ ಸುರೇಶ್ ನಮ್ಮ‌ ಹೆಣ್ಣುಮಗಳೇ, ಮಮತಾ ವಾಸುದೇವ್, ಮಂಜುಳಾ ನಾರಾಯಣ್ ಸ್ವಾಮಿ ನಮ್ಮವರೇ. ಅವರು ಕಿರುಚಿದ್ದು, ಅತ್ತಿದ್ದು ಎಲ್ಲರೂ ನೋಡಿದ್ದಾರೆ. ಆಗ ಅವರನ್ನ ನಾನು ರಕ್ಷಣೆ ಮಾಡೋಕೆ ಬರಲಿಲ್ಲ. ಪರಮೇಶ್ವರ್​ಗೂ ಮುನಿರತ್ನ ಬಗ್ಗೆ ಹೇಳಿದ್ವಿ. ಪಾಪ ಆ ಮೂವರು ಹೆಣ್ಣುಮಕ್ಕಳು ನೋವು ಅನುಭವಿಸಿದ್ರು. ಈಗ ದುರ್ಗಾಪೂಜೆ ನಡೆಯುತ್ತಿದೆ. ಈಗ ಮತ್ತೊಬ್ಬ ಹೆಣ್ಣುಮಗು ಕುಸುಮಾ ಚುನಾವಣೆಗೆ ನಿಂತಿದ್ದಾಳೆ. ಸ್ತ್ರೀ ಸಮುದಾಯದಿಂದಲೇ ಈ ಕ್ಷೇತ್ರಕ್ಕೆ ಮುಕ್ತಿ ಸಿಗಬೇಕು ಎನ್ನುವ ಮೂಲಕ ಹೆಣ್ಣಿಗೆ ಅಧಿಕಾರ ಕೊಡಿ ಎಂದು ಕೋರಿದರು.

    'ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ...'ಚುನಾವಣೆಗೆ ಕಾಂಗ್ರೆಸ್​ನಿಂದ ಡಿ.ಕೆ.ರವಿ ಪತ್ನಿ ಕುಸುಮಾ ನಿಂತಿದ್ದಾಳೆ. ಆದ್ರೆ ‘ನೀನು ಗಂಡನ‌ ಹೆಸರು ಉಪಯೋಗಿಸಬೇಡ ಅಂತಾಳೆ ನಮ್ಮಕ್ಕ ಶೋಭಕ್ಕ. ನೀನೂ ಅದೇ ಸ್ಥಾನದಲ್ಲಿದ್ರೆ ಹಾಗೆ ಹೇಳ್ತಿದ್ಯಾ ಅಕ್ಕ? ರಾಜಕಾರಣಕ್ಕೆ ಸಂಪ್ರದಾಯವನ್ನೇ ತೆಗೆಯಬೇಕಾ? ಎಲ್ಲ ದಾಖಲೆಗಳಲ್ಲೂ ಕುಸುಮಾ ಡಿ.ಕೆ. ರವಿ ಅಂತಾನೇ ಇದೆ’ ಎನ್ನುವ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಮಾತಿನಲ್ಲೇ ಡಿಕೆಶಿ ಛಾಟಿ ಬೀಸಿದರು.

    ನ.17ಕ್ಕೆ ಕಾಲೇಜು ಆರಂಭ, ತರಗತಿಗೆ ಬರೋದು-ಬಿಡೋದು ವಿದ್ಯಾರ್ಥಿಗಳಿಗೆ ಬಿಟ್ಟದ್ದು!

    ಆರ್​ ಆರ್​ ನಗರ ಬೈ ಎಲೆಕ್ಷನ್​ಗೆ ಪ್ಯಾರಾ ಮಿಲಿಟರಿ ಎಂಟ್ರಿ! ಮುನಿರತ್ನನ ಕೋರಿಕೆ ಫಲಿಸಿತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts