More

    ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವಣ್ಣಗೆ ಡಿ.ಕೆ. ಶಿವಕುಮಾರ್ ಆಹ್ವಾನ; ನಟ ಹೇಳಿದ್ದಿಷ್ಟು

    ಬೆಂಗಳೂರು: ಮುಂದಿನ ವರ್ಷ (2024) ನಡೆಯಲಿರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್​ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿಗೆ ಸೆಡ್ಡು ಹೊಡೆಯಬೇಕೆಂಬ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿಗಳು ಆಗಿರುವ ಡಿ.ಕೆ. ಶಿವಕುಮಾರ್​ ಹ್ಯಾಟ್ರಿಕ್​ ಹೀರೋ ಶಿವಕುಮಾರ್​ ಅವರಿಗೆ ಕಾಂಗ್ರೆಸ್​ನಿಂದ ಲೋಕಸಭೆ ಟಿಕೆಟ್​ ಆಫರ್​ ನೀಡಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಈಡಿಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್​ ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿರುವಂತೆ ಶಿವಣ್ಣಗೆ ತಯಾರಿರುವಂತೆ ಹೇಳಿದ್ದೇನೆ. ಅವರು ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು ನಾವು ಟಿಕೆಟ್​ ಕೊಡಲು ಸಿದ್ದ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

    ಶಿವಣ್ಣ ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅವುಗಳ ಚಿತ್ರೀಕರಣ ಮುಗಿಯಬೇಕು ಎಂದಿದ್ದಾರೆ. ಚಿತ್ರ ಯವಾಗದರೂ ಮಾಡಬಹುದು, ಆದರೆ ಪಾರ್ಲಿಮೆಂಟ್ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದೇನೆ. ಅವರ ನಿರ್ಧಾರಕ್ಕೆ ಎದುರು ನೋಡುತ್ತಿದ್ದೇನೆ ಎಂದು ರಾಜ್ಯಮಟಟ್ಟದ ಈಡಿಗ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ ನಾಯಕರ ಮನೆ ಮೇಲೆ ನಡೆಯುವ ದಾಳಿ ಬಿಜೆಪಿಗರ ಮೇಲೆ ಏಕಿಲ್ಲ: ಸಿಎಂ ಸಿದ್ದರಾಮಯ್ಯ

    ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿ ಶಿವರಾಜ್​ಕುಮಾರ್​ ನಮ್ಮದೇನಿದ್ದರೂ ಮೇಕಪ್ ಹಾಕೋದು ಸಿನಿಮಾ ಮಾಡೋದು. ನಾನು ಎಂದಿಗೂ ರಾಜಕೀಯಕ್ಕೆ ಬರೋಲ್ಲ. ನಮ್ಮ ತಂದೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಕೇಳಿ ಕೊಟ್ಟಿದ್ದಾರೆ. ಅದೇ ಸಾಕು ನಮಗೆ. ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ರಾಜಕೀಯ ನಮಗೆ ಬೇಡ ಎಂದು ಹೇಳಿದ್ದಾರೆ.

    ಆಸಕ್ತಿ ಇದ್ದರೆ ಗೀತಾ ಲೋಕಸಭೆಗೆ ಸ್ಪರ್ಧಿಸಲಿ, ಹೆಂಡತಿ ಇಷ್ಟಪಟ್ಟರೆ ಅವರಿಗೆ ಸಪೋರ್ಟ್ ಮಾಡೋದು ಗಂಡನ ಕೆಲಸ. ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ಅವರ ಹಿಂದೆ ನಿಂತು ಬೆಂಬಲ ನೀಡುತ್ತೇನೆ ಎಂದು ಹೇಳುವ ಮೂಲಕ ನಟ ಶಿವರಾಜ್​ಕುಮಾರ್​ ರಾಜಕೀಯ ಪ್ರವೇಶದ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts