More

    ವಾಸ್ತು ಪ್ರಕಾರ ಶಾಸಕಾಂಗ ಸಭೆಗೆ ಆಗಮಿಸಿದ ಡಿಕೆಶಿ!

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಗೆ ಡಿ.ಕೆ.ಶಿವಕುಮಾರ್ ವಾಸ್ತು ಪ್ರಕಾರ ಬಂದಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಶಾಸಕರು ಇಂದಿರಾಗಾಂಧಿ ಸಭಾಂಗಣದ ದ್ವಾರದಿಂದ ಬಂದಿದ್ದರೆ, ಡಿಕೆಶಿ ಮಾತ್ರ ಎಡಭಾಗದ ಪ್ರತ್ಯೇಕ ದ್ವಾರದಿಂದ ಆಗಮಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಆಗಮನ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ. ವಾಸ್ತ್ರು ಶಾಸ್ತ್ರಜ್ಞರ ಸೂಚನೆಯ ಮೇರೆಗೆ ಡಿಕೆಶಿ ಪ್ರತ್ಯೇಕ ದಾರಿಯಲ್ಲಿ ಬರಲು ನಿರ್ಧರಿಸಿದ್ದರು. ಹೀಗಾಗಿ ಸಭಾಂಗಣದ ಎಡಭಾಗದಿಂದ ಆಗಮಿಸಲೆಂದೇ ಪೊಲೀಸರು ಬ್ಯಾರಿಗೇಡ್ ಹಾಕಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು.

    ಇದನ್ನೂ ಓದಿ: ಬಸವಣ್ಣನ ತತ್ವ ಸಿದ್ಧಾಂತದ ಮೇಲೆ ಸಚಿವ ಸ್ಥಾನ ನೀಡುತ್ತೇವೆ: ಲಕ್ಷ್ಮೀ ಹೆಬ್ಬಾಳ್ಕರ್

    ಶಾಸಕಾಂಗ ನಾಯಕನ ಆಯ್ಕೆಯ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ನಿರ್ಣಯ ಮಂಡಿಸಿದರು. ಇದಕ್ಕೆ ಶಾಸಕರು ಅನುಮೋದನೆ ನೀಡಿದರು. ಬಳಿಕ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಣೆ ಮಾಡಲಾಯಿತು.

    ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡಿದ ಡಿಕೆಶಿ

    ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಹೆಸರನ್ನು ಡಿ.ಕೆ.ಶಿವಕುಮಾರ್​ ಅವರು ಪ್ರಸ್ತಾಪ ಮಾಡಿದರು. ಡಿಕೆಶಿ ಪ್ರಸ್ತಾವನೆಗೆ ಡಾ.ಜಿ.ಪರಮೇಶ್ವರ, ಎಚ್.ಕೆ. ಪಾಟೀಲ್, ಎಂ. ಬಿ ಪಾಟೀಲ್, ಆರ್.ವಿ.ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್, ತನ್ವೀರ್ ಸೇಠ್ ಹಾಗೂ ಕೆ.ಎಚ್. ಮುನಿಯಪ್ಪ ಅನುಮೋದನೆ ನೀಡಿದರು.

    ಇದನ್ನೂ ಓದಿ: ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲಿರುವ VVIPಗಳು ಯಾರು? ಆಹ್ವಾನಿತರ ಪಟ್ಟಿ ಇಂತಿದೆ…

    ಕಾಂಗ್ರೆಸ್​ ಪಕ್ಷ ಬಹುಮತ ಪಡೆದ ಬಳಿಕ ನಡೆಯುತ್ತಿರುವ ಎರಡನೇ ಶಾಸಕಾಂಗ ಸಭೆ ಇದಾಗಿದ್ದು, ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ವೀಕ್ಷಕರು ಎಐಸಿಸಿಯಲ್ಲಿ ನಡೆದ ನಿರ್ಣಯವನ್ನು ಪ್ರಸ್ತಾಪಿಸಿದರು. ಎಐಸಿಸಿ ಅಧ್ಯಕ್ಷರು ತೆಗೆದುಕೊಂಡ ಸಿಎಂ ಹಾಗೂ ಡಿಸಿಎಂ ಆಗಿ ಆಯ್ಕೆ ಮಾಡಿರುವ ವಿಚಾರವನ್ನು ಶಾಸಕರ ಮುಂದೆ ಪ್ರಸ್ತಾಪ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts