ಹೊಂಬುಜ ಜೈನಮಠ: ಕ್ಷೇತ್ರಪಾಲ ಸ್ವಾಮಿ ಸನ್ನಿಧಾನ ನವೀಕರಣಕ್ಕೆ ಚಾಲನೆ

RPT WEBB
Published on

ರಿಪ್ಪನ್‌ಪೇಟೆ: ಶ್ರೀ ಕ್ಷೇತ್ರ ಹೊಂಬುಜದಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರು ಹಾಗೂ ಜಗನ್ಮಾತೆ ಪದ್ಮಾವತಿ ಅಮ್ಮನವರ ಬಸದಿ ಪ್ರಾಂಗಣದಲ್ಲಿರುವ ಕ್ಷೇತ್ರ ರಕ್ಷಕ ಭೈರವ ಶ್ರೀ ಕ್ಷೇತ್ರಪಾಲಸ್ವಾಮಿ ಸನ್ನಿಧಾನದ ನವೀಕರಣದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನೆರವೇರಿತು. ಬಸದಿ ಗರ್ಭಗುಡಿಯ ದಾನಿಗಳಾದ ಬೆಂಗಳೂರಿನ ರವಿರಾಜ್ ಜೈನ್ ಹಾಗೂ ಚೂಡಾಮಣಿ ಜೈನ್ ಉಪಸ್ಥಿತರಿದ್ದರು. ಹೊಂಬುಜ ಜೈನ ಸಮಾಜದ ಜಿ.ಮಂಜಪ್ಪ, ತೀರ್ಥಹಳ್ಳಿಯ ವೈದ್ಯ ಡಾ. ಜೀವಂಧರ್ ಜೈನ್, ವಳಗೆರೆ ಪಾರ್ಶ್ವನಾಥ, ಶಿವಮೊಗ್ಗ, ಸಾಗರ, ಜೈನ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net