

ಚಿಕ್ಕಮಗಳೂರು: ನನ್ನ ತಂದೆಯನ್ನು ಕೊಲೆ ಮಾಡುವ ಉz್ದೆÃಶದಿಂದ ಮಾರಣಾಂತಿಕ ಹಲ್ಲೆ ನಡೆಸಿ, ಒಳಿಕ ಅವರನ್ನು ರಸ್ತೆ ಬದಿಗೆ ತಂದು ಹಾಕಿ ಅಪಘಾತ ಎಂದು ಬಿಂಬಿಸಲು ಅಲ್ಲಂಪುರ ಸಮೀಪದ ಹೋಂಸ್ಟೇ ಮಾಲೀಕರು ಯತ್ನಿಸಿದ್ದಾರೆ ಎಂದು ಹಲ್ಲೆಗೊಳಗಾದವರ ಪುತ್ರಿ ಪಲ್ಲವಿ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಾಯಿ ದನಲಕ್ಷ್ಮಿ ಅವರ ಹೆಸರಿನಲ್ಲಿ ಅಲ್ಲಂಪುರದಲ್ಲಿ ೩.೨೦ ಎಕರೆ ಹಿಡುವಳಿ ಭೂಮಿ ಇದೆ. ಇದಕ್ಕೆ ಹೊಂದಿಕೊAಡAತೆ ೫೦೦ ಎಕರೆ ಸರ್ಕಾರಿ ಭೂಮಿ ಇದ್ದು ಅಲ್ಲಿ ಹೋಂಸ್ಟೇ ಮಾಲೀಕರು ಅಕ್ರಮವಾಗಿ ಮಣ್ಣು ತೆಗೆದು ಅಲ್ಲಿ ಕಾಂಕ್‌ವುಡ್ ಬೇಲಿ ನಿರ್ಮಿಸಿಕೊಂಡಿದ್ದರು. ಆದರೆ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಈ ಮಣ್ಣು ಕೊಚ್ಚಿಕೊಂಡು ಬಂದು ನಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳ ಮೇಲೆ ನಿಂತ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿತ್ತು. ಈ ಬಗ್ಗೆ ನನ್ನ ತಂದೆ ಓಂಕಾರ ಮೂರ್ತಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು ಎಂದು ತಿಳಿಸಿದರು.
ನಮ್ಮ ತಂದೆ ಪೊಲೀಸರಿಗೆ ದೂರು ನೀಡಿದರೂ ಅವರು ಹೋಂಸ್ಟೇ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದಾದ ಕೆಲದಿನಗಳಲ್ಲಿಯೇ ಮೂವರು ಅಪರಿಚಿತರು ಕಾರಿನಲ್ಲಿ ಬಂದು ನಮ್ಮ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಅಲ್ಲಂಪುರ ಕೆರೆ ಏರಿಯ ತಿರುವಿನಲ್ಲಿ ಮಲಗಿಸಿ ಅವರ ಪಕ್ಕವೇ ತಂದೆಯ ಬೈಕನ್ನು ತಂದು ಬೀಳಿಸಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಹೀಗಾಗಿ ನಾವು ಮೊದಲು ಅಪಘಾತ ಪ್ರಕರಣ ಎಂದೇ ದೂರು ನೀಡಿದ್ದೆವು ಎಂದರು.
ಮAಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಮ್ಮ ತಂದೆ ಚೇತರಿಸಿಕೊಂಡ ನಂತರ ನಡೆದ ವಿಷಯವನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆಸಿರುವ ಆರೋಪಿಗಳು ಹಾಗೂ ನಮ್ಮ ತಂದೆ ದೂರು ನೀಡಿದಾಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಲಂಪುರ ಗ್ರಾಮದ ದರ್ಶನ್ ಮಾತನಾಡಿ, ನಮ್ಮ ಗ್ರಾಮದ ಓಂಕಾರ ಮೂರ್ತಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಮುಚ್ಚಿ ಹಾಕುವ ಉz್ದÉÃಶದಿಂದ ನನ್ನ ವಾಹನದ ಮೇಲೆ ಅಪಘಾತ ಪ್ರಕರಣ ದಾಖಲಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಪ್ರಕರಣ ನಡೆದ ದಿನ ಓಂಕಾರ ಮೂರ್ತಿ ಅವರ ಕುಟುಂಬಸ್ಥರನ್ನು ನಾನೇ ನನ್ನ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಘಟನೆ ನಡೆದ ದಿನ ರಾತ್ರಿ ೮ ಗಂಟೆ ಸುಮಾರಿಗೆ ನನ್ನ ವಾಹನ ಅದೇ ಮಾರ್ಗವಾಗಿ ಬಂದಿದ್ದರಿAದಾಗಿ ನಾನೇ ಅಪಘಾತ ಮಾಡಿz್ದÉÃನೆ ಎಂದು ಬಿಂಬಿಸಲು ಹೊರಟಿದ್ದಾರೆ. ಈ ಮೂಲಕ ಮಾರಣಾಂತಿಕ ಹಲ್ಲೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಓಂಕಾರ ಮೂರ್ತಿ ಅವರ ಪತ್ನಿ ಧನಲಕ್ಷ್ಮಿ, ಪ್ರಮುಖರಾದ ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಕೃಷ್ಣಮೂರ್ತಿ ಮತ್ತಿತರರಿದ್ದರು.