ಸಿದ್ಧಾರೂಢ ಮಠದಲ್ಲಿ ವಿದೇಶಿ ಮಹಿಳೆ ಪ್ರತ್ಯಕ್ಯ

H31 Maishiyan Niyang
Published on

ಹುಬ್ಬಳ್ಳಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರದಲ್ಲೇ ಬೀಡು ಬಿಟ್ಟಿರುವ ಆಸ್ಟ್ರೇಲಿಯಾ ಮೂಲದ ಮೈಶಿಯಾನ್ ನಿಯಾಂಗ್ (38) ಭಾನುವಾರ ಇಲ್ಲಿನ ಸಿದ್ಧಾರೂಢ ಮಠದಲ್ಲಿ ಪ್ರತ್ಯಕ್ಷವಾಗಿದ್ದಳು.

ದೇವಸ್ಥಾನ ಬಂದ್ ಆಗಿದ್ದರೂ ದೇವಸ್ಥಾನ ಆವರಣದಲ್ಲಿ ಜಪಮಾಲೆ ಹಿಡಿದು ‘ಓಂ ನಮಃ ಶಿವಾಯ’ ಹೇಳುತ್ತ ಕುಳಿತಿದ್ದಳು. ಕೆಲ ಸಮಯದ ಬಳಿಕ ನಡೆದುಕೊಂಡೇ ಹಳೇ ಬಸ್ ನಿಲ್ದಾಣದ ಬಳಿ ಇರುವ ವಸತಿ ಗೃಹಕ್ಕೆ ತೆರಳಿದಳು. ಆಗಾಗ ದೇವಸ್ಥಾನಕ್ಕೆ ಬಂದು ಧ್ಯಾನ ಮಾಡುತ್ತಾಳೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸಮಸ್ಯೆಯಲ್ಲಿ ಸಿಲುಕಿರುವ ಮಹಿಳೆ ತನ್ನ ದೇಶಕ್ಕೆ ತೆರಳಲು ವಿಮಾನ ಟಿಕೆಟ್ ಸೇರಿ ಮತ್ತಿತರ ವ್ಯವಸ್ಥೆ ಮಾಡಿಕೊಡುವಂತೆ ಸರ್ಕಾರವನ್ನು ಕೋರಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net