ಸತತ ಮಳೆ: ಮದ್ದಲೆಸರ ಗ್ರಾಮದ ರಸ್ತೆ ಕುಸಿತ

ANP RAIN WEB
Published on

ಆನಂದಪುರ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಮದ್ದಲೆಸರದಲ್ಲಿ ರಸ್ತೆ ದಿನೇ ದಿನೆ ಕುಸಿಯುತ್ತಿದ್ದು ಮುಂದುವರಿದರೆ ಸಂಪೂರ್ಣ ರಸ್ತೆ ಹಳ್ಳದ ಪಾಲಾಗಲಿದೆ. ಈ ರಸ್ತೆ ಮದ್ದಲೆಸರ ಗ್ರಾಮದಿಂದ ಅಡೂರು, ಹೆಬ್ಬೋಡಿ ಮತ್ತು ಬೀಸನಗದ್ದೆ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ವಿದ್ಯಾರ್ಥಿಗಳು ಮತ್ತು ರೈತರು ಈ ರಸ್ತೆಯಲ್ಲಿ ನಿತ್ಯ ಓಡಾಡು ಅನಿವಾರ್ಯತೆ ಇದೆ. ಈ ರಸ್ತೆ ಸಂಪೂರ್ಣ ಕುಸಿದರೆ ಈ ಗ್ರಾಮದಿಂದ ಅಡೂರು ಗ್ರಾಮ ಸಂಪರ್ಕಿಸಲು 5 ಕಿ.ಮೀ. ಸುತ್ತು ಬಳಸಿ ಓಡಾಡಬೇಕಾಗುತ್ತದೆ. ರಸ್ತೆಯ ರಕ್ಷಣೆಗೆ ತುರ್ತು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಗ್ರಾಪಂ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ರಸ್ತೆ ಕುಸಿತವಾದರೂ ಯಾವುದೇ ಅಧಿಕಾರಿಗಳಾಗಲಿ, ತಾಲೂಕಿನ ಜನ ಪ್ರತಿನಿಧಿಗಳಾಗಿ ಆಗಮಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net