ವೈದ್ಯಕೀಯ ಕ್ಷೇತ್ರದ ಪ್ರಾವಿತ್ರ್ಯ ಕಾಪಾಡಿ

14SNK1
Published on

ಸಂಕೇಶ್ವರ: ಸಮಾಜದಲ್ಲಿ ವೈದ್ಯಕೀಯ ವೃತ್ತಿಗೆ ತನ್ನದೆ ಆದ ಗೌರವವಿದೆ. ದಾದಿಯರು ರೋಗಿಗಳಿಗೆ ಉತ್ತಮ ಸೇವೆ ನೀಡುವ ಮೂಲಕ ವೃತ್ತಿ ಪಾವಿತ್ರ‍್ಯ ಕಾಪಾಡಬೇಕು ಎಂದು ಎಸ್‌ಡಿವಿಎಸ್ ಸಂಘದ ಕಾರ್ಯದರ್ಶಿ ಜಿ.ಸಿ.ಕೋಟಗಿ ಹೇಳಿದರು.

ಪಟ್ಟಣದ ಎಸ್‌ಡಿವಿಎಸ್ ಸಂಘದ ಅನ್ನಪೂರ್ಣ ನರ್ಸಿಂಗ್ ಕಾಲೇಜ್‌ನಲ್ಲಿ ಈಚೆಗೆ ಅಂತಾರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಉದಯ ಕುಡಚಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನರ್ಸಿಂಗ್ ಶಿಕ್ಷಣದ ಅವಶ್ಯಕತೆ, ದೇಶದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಅಭಾವ ಮತ್ತು ದಾದಿಯರು ಎದುರಿಸುತ್ತಿರುವ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ನೈತಿಕ ಸವಾಲುಗಳ ಕುರಿತು ಮಾತನಾಡಿದರು.

ನರ್ಸಿಂಗ್ ಸುಪರಿಟೆಂಡೆಂಟ್ ಸ್ಮಿತಾ ಆನಂದ ಮಾತನಾಡಿ, ನರ್ಸಿಂಗ್ ಕ್ಷೇತ್ರದಲ್ಲಿನ ಉದ್ಯೋಗದ ಮಹತ್ವ ಮತ್ತು ಕಾರ್ಯತಂತ್ರದ ಹೂಡಿಕೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಎಷ್ಟು ಲಾಭದಾಯಕವೆಂಬುದನ್ನು ತಿಳಿಸಿದರು. ಆರ್.ಬಿ.ಪಾಟೀಲ ಅನುಭವ ಹಂಚಿಕೊಂಡರು.

ಆಡಳಿತಾಧಿಕಾರಿ ಡಾ.ಬಿ.ಎ.ಪೂಜಾರಿ, ಪ್ರಾಚಾರ್ಯ ಬಸವರಾಜ ಹುಕ್ಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net