ವಿದ್ಯುತ್ ಪರಿವರ್ತಕ ಘಟಕದಲ್ಲಿ ದೋಷ

27-ANP-P1
ತಾಂತ್ರಿಕ ದೋಷ ಉಂಟಾಗಿರುವ ಮಲಂದೂರು ವಿದ್ಯುತ್ ಪರಿವರ್ತಕ ಘಟಕ.
Published on

ಆನಂದಪುರ: ಮಲಂದೂರಿನಲ್ಲಿರುವ ಕೆಪಿಟಿಸಿಲ್‌ನ ವಿದ್ಯುತ್ ಪರಿವರ್ತಕ ಘಟಕದಲ್ಲಿ ಭಾನುವಾರ ರಾತ್ರಿ ತಾಂತ್ರಿಕ ದೋಷ ಉಂಟಾಗಿದೆ. ಇದರಿಂದ ಹೊಸಕೊಪ್ಪ, ಖೈರಾ, ಚೆನ್ನಕೊಪ್ಪ, ತಂಗಳವಾಡಿ ಇನ್ನಿತರ ಗ್ರಾಮಗಳಲ್ಲಿ ರಾತ್ರಿಯಿಂದ ಬೆಳಗ್ಗೆವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಿತ್ತು. ಸೋಮವಾರ ಬೆಳಗ್ಗೆ ಈ ಗ್ರಾಮಗಳ ವಿದ್ಯುತ್ ಸಂಪರ್ಕಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಪರಿವರ್ತಕದ ಮೂರನೇ ಘಟಕದ ವಿದ್ಯುತ್ ಪರಿವರ್ತಕದಲ್ಲಿ ಇಂಧನ ಸೋರಿಕೆ ಉಂಟಾಗಿ ಕಾರ್ಯ ಸ್ಥಗಿತಗೊಂಡಿದೆ. ಇದಕ್ಕಾಗಿ ತಾಳಗುಪ್ಪ, ಸಾಗರ ಮತ್ತು ಶಿವಮೊಗ್ಗ ಗ್ರಾಮಾಂತರ ಪರಿವರ್ತಕ ಘಟಕದ ಹಿರಿಯ ಅಭಿಯಂತರ, ಶಿವಮೊಗ್ಗ ಘಟಕದ ಮೇಲಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ದೋಷದ ಪೂರ್ಣ ವಿವರ ಪತ್ತೆಹಚ್ಚುವ ಕಾರ್ಯ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net