ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಲಿ

5BK2
ಬಸವಕಲ್ಯಾಣದ ಕಲ್ಯಾಣ ನಾಡು ಚಾರಿಟೇಬಲ್ ಟ್ರಸ್ಟ್​ನ ಬ್ರೈಟ್ ಫ್ಯೂಚರ್ ಅಕಾಡೆಮಿಯಿಂದ ಭಾನುವಾರ ಆಯೋಜಿಸಿದ್ದ ಕೆಎಎಸ್, ಪಿಎಸ್‌ಐ, ಪಿಡಿಒ ಎಫ್‌ಡಿಎ, ಟಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರವನ್ನು ಹುಲಸೂರು ತಹಸೀಲ್ದಾರ್ ಸಿವಾನಂದ ಮೇತ್ರೆ ಉದ್ಘಾಟಿಸಿದರು. ದಿಲೀಪಕುಮಾರ ಉತ್ತಮ, ಗೌತಮ ಶಿಂಧೆ, ನರಸಿಂಗರೆಡ್ಡಿ ಗದಲೆಗಾಂವ, ಜೋಶಿ, ರಾಣಿಮಾ ಭೆಂಡೆ, ಟ್ರಸ್ಟ್ ಅಧ್ಯಕ್ಷೆ ಸ್ವರೂಪರಾಣಿ ಮುಡಬಿಕರ ಇತರರಿದ್ದರು.
Published on

ಬಸವಕಲ್ಯಾಣ: ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ, ಕಠಿಣ ಪರಿಶ್ರಮ ಬೇಕು. ವಿದ್ಯಾರ್ಥಿಗಳು ಶ್ರಮ ವಹಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಡಾ.ಅಂಬಾದಾಸ ಕಾಂಬಳೆ ಸಲಹೆ ನೀಡಿದರು.

ನಗರದ ಕಲ್ಯಾಣ ನಾಡು ಚಾರಿಟೇಬಲ್ ಟ್ರಸ್ಟ್ನ ಬ್ರೈಟ್ ಫ್ಯೂಚರ್ ಅಕಾಡೆಮಿಯಿಂದ ಭಾನುವಾರ ಆಯೋಜಿಸಿದ್ದ ಕೆಎಎಸ್, ಪಿಎಸ್‌ಐ, ಪಿಡಿಒ ಎಫ್‌ಡಿಎ, ಟಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಮಹತ್ವದಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಗಳಿಸುವುದು ಮಹತ್ವದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹುಲಸೂರ ತಾಲೂಕು ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಶ್ರಮ ವಹಿಸಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಪಡೆಯವ ಜತೆಗೆ ಸ್ಪರ್ಧಾತ್ಮ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಅವಶ್ಯಕವಾಗಿದ್ದು, ಇದಕ್ಕಾಗಿ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿರುವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪಕುಮಾರ ಉತ್ತಮ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು. ಇದು ತಲುಪುವ ಛಲ ಹಾಗೂ ಪೂರಕ ಪ್ರಯತ್ನ ಇದ್ದರೆ ಯಶಸ್ಸು ಕಾಣಲು ಸಾಧ್ಯ ಎಂದರು.

ರಾಜ್ಯ ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ ನರಸಿಂಗರೆಡ್ಡಿ ಗದಲೇಗಾಂವ, ನಗರಸಭೆ ಪೌರಾಯುಕ್ತ ರಾಜು.ಡಿ. ಬಣಕಾರ, ಸಿಡಿಪಿಒ ಗೌತಮ ಸಿಂಧೆ, ಸಿಎಂಎಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ರಾಣಿಮಾ ಭೆಂಡೆ ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜೋಶಿ, ಟ್ರಸ್ಟ್ ಅಧ್ಯಕ್ಷೆ ಸ್ವರೂಪರಾಣಿ ಮುಡಬಿಕರ, ಪ್ರಮುಖರಾದ ದೇವೇಂದ್ರ ಮಂಠಾಳಕರ್, ಅನೀಲ ಕಾಂಬಳೆ, ಸಂಜು ಗಾಯಕವಾಡ, ಸಂಜು ಗೋಡಬೋಲೆ, ಮನೋಜ ಮುಡಬಿಕರ, ಸಂಜೀವಕುಮಾರ ನಡುಕರ, ಡಾ ಶಿವಪುತ್ರ ಹೋಳ್ಕರ್, ಗೀತಾ ಲಾಡೆ ಇದ್ದರು. ಟ್ರಸ್ಟ್ ನಿರ್ದೇಶಕ ಉಜ್ವಲ ಸೂರ್ಯವಂಶಿ ಸ್ವಾಗತಿಸಿದರು. ಡಾ ಬಸವರಾಜ ಖಂಡಾಳೆ ಹಾಗೂ ಸಂಗೀತಾ ನಿರೂಪಣೆ ಮಾಡಿದರು. ಬಾಂಬೆ ಗುತ್ತಿಗೆದಾರ ರಾಹುಲ ಕಾಂಬಳೆ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪೆನ್ನು ಮತ್ತು ಪ್ಯಾಡ್ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net