

ಚಿಕ್ಕಮಗಳೂರು: ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮಹತ್ವವಾಗಿದೆ. ಈ ಸಹಕಾರಿ ಧ್ಯೇಯವನ್ನು ಸಾಕಾರಗೊಳಿಸಲು ಕಾಯಾ, ವಾಚಾ, ಮನಸಾ ಸಹಕಾರಿಗಳು ಪ್ರಯತ್ನಿಸಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.
ನಗರದ ವಿಜಯಪುರ ಸಮೀಪದ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಕೃಷಿ ಸಹಕಾರ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಕೇಂದ್ರ ಬ್ಯಾಂಕ್ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಾಭಿವೃದ್ಧಿಗೆ ಅತ್ಯಂತ ಅಗತ್ಯವೆನಿಸಿರುವ ಸಹಕಾರ ಶಿಕ್ಷಣ, ತರಬೇತಿ, ಪ್ರಚಾರ ವ್ಯವಸ್ಥೆಯನ್ನು ಸಹಕಾರ ಮಹಾಮಂಡಳ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರವನ್ನು ಬಲಯುತವಾಗಿ ಬೆಳೆಸಲು ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಿ ಸಹಕಾರಿಗಳಿಗೆ ಬಹಳಷ್ಟು ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ಹೇಳಿದರು.
ಸಹಕಾರ ವ್ಯವಸ್ಥೆ ದೇಶದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಮಹತ್ವದ ಸಾಧನೆಯ ಗುರಿಯನ್ನು ಇರಿಸಿಕೊಂಡಿದೆ. ಸಹಕಾರಿ ವಲಯದಲ್ಲಿ ದೊಡ್ಡ ಕೆಲಸವಾಗಿದೆ. ಜನ ಜೀವನದಲ್ಲಿ ಪರಿವರ್ತನೆ ತರುವಂಥ ಹಾಗೂ ರಾಷ್ಟç ನಿರ್ಮಾಣಕ್ಕೆ ಆಸರೆೆಯಾಗುವಂಥ ಪ್ರಕ್ರಿಯೆಯಗಳು ಸಹಕಾರಿ ವಲಯದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಸಹಕಾರಿ ರಂಗದಲ್ಲಿ ಮಹಿಳೆಯರು, ಯುವಕರು ಸೇರ್ಪಡೆಗೊಂಡರೆ ಮಾತ್ರ ಸಹಕಾರಿ ಕ್ಷೇತ್ರ ಇನ್ನಷ್ಟು ವೇಗ ಪಡೆದುಕೊಂಡು ನಿಗಧಿತ ಗುರಿ ತಲುಪಲಿದೆ. ಹಲವಾರು ಯೋಜನೆಗಳು ಸಹಕಾರಿ ಕ್ಷೇತ್ರದಲ್ಲಿದ್ದು ಸಮರ್ಪಕವಾಗಿ ಬಳಸಿಕೊಂಡು ಮುನ್ನೆಡೆದರೆ ಬದುಕಿನಲ್ಲಿ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಸಹಕಾರ ಚಳವಳಿಗೆ ಕಾನೂನುನಾತ್ಮಕವಾಗಿ ಜಾರಿಗೆ ತಂದವರು ಶಿದ್ದನಗೌಡ ಪಾಟೀಲರು. ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಹಕಾರ ಪಿತಾಮಹ ಎನಿಸಿಕೊಂಡಿದ್ದಾರೆ. ಅವರು ಸ್ಥಾಪಿಸಿದ ಸಹಕಾರ ಸಂಘವು ಇಡೀ ದೇಶದ ಸಹಕಾರ ಚಳವಳಿಯ ದಿಕ್ಕು ಬದಲಿಸಿದೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರವನ್ನು ತಳಮಟ್ಟದಿಂದ ಸರ್ವತೋಮುಖ ಬೆಳವಣಿಗೆಯತ್ತ ಕೊಂಡೊಯ್ಯಲು ಜಿಲ್ಲೆ ಯಲ್ಲಿ ಎಸ್.ಎಲ್.ಧರ್ಮೇಗೌಡರ ಪಾತ್ರ ಬಹಳಷ್ಟಿದೆ. ಕೃಷಿ ಬದುಕನ್ನು ನಂಬಿರುವ ರೈತಾಪಿ ವರ್ಗಕ್ಕೆ ಸಹಕಾರಿಯಾಗುವ ಉz್ದÉÃಶದಿಂದ ಸಂಸ್ಥೆ ಸ್ಥಾಪಿಸಿ ಯಾವುದೇ ಬ್ಯಾಂಕ್‌ಗಳಲ್ಲಿ ಒದಗದ ಸಾಲಸೌಲಭ್ಯವನ್ನು ಸಹಕಾರಿ ಕ್ಷೇತ್ರ ಒದಗಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಸಹಕಾರಿ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಉಪಾಧ್ಯಕ್ಷ ಉಳವಪ್ಪ ತಿಪ್ಪಣ್ಣ ದಾಸನೂರು, ಸಹಕಾರಿ ಚಳವಳಿ ಮತ್ತು ವ್ಯವಸ್ಥೆ ಕುರಿತು ಜನಜಾಗೃತಿ ಉಂಟು ಮಾಡುವುದೇ ಸಪ್ತಾಹದ ಉz್ದÉÃಶ. ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಸಹಕಾರಾಭಿವೃದ್ದಿಗೆ ವಿಶೇಷ ಪ್ರೋತ್ಸಾಹ ನೀಡಿದ ನಿಮಿತ್ತ ಅವರ ಜನ್ಮದಿನದಂದು ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಸಹಕಾರಿಗಳಿಗೆ ಅನುಕೂಲವಾಗಲು ಅನೇಕ ಸವಲತ್ತನ್ನು ಒದಗಿಸಿ ಹೆಮ್ಮರವಾಗಿ ಬೆಳೆಸಲು ಸಹಕರಿಸುತ್ತಿದೆ. ವಿಶೇಷವಾಗಿ ರಾಜ್ಯಸರ್ಕಾರ ಸಹಕಾರಿಗಳಿಗೆ ಶೇ. ೩ರ ಬಡ್ಡಿದರದಲ್ಲಿ ಐದು ಲಕ್ಷದವರೆಗೆ ಸಾಲಸೌಲಭ್ಯವನ್ನು ಒದಗಿಸಿ ಆರ್ಥಿಕ ಅಭಿವೃದ್ಧಿಗೆ ಪ್ರೇರೇಪಿಸುತ್ತಿದೆ ಎಂದು ಹೇಳಿದರು.
ಸಹಕಾರ ಸಂಘಗಳ ಅಪರ ನಿಬಂಧಕ ಎಚ್.ಬಾಲಶೇಖರ್ ಮಾತನಾಡಿ, ಸಹಕಾರಿಗಳು ಆರ್ಥಿಕ ಪ್ರಗ ತಿ ಹೊಂದುವ ನಿಟ್ಟಿನಲ್ಲಿ ಶೈಕ್ಷಣಿಕ ಸಾಲಿನಲ್ಲಿ ೩೫ ಲಕ್ಷ ರೈತರಿಗೆ ಸುಮಾರು ೨೫ ಸಾವಿರ ಕೋಟಿ ರೂ. ಸಾಲವನ್ನು ವಿತರಿಸಿದೆ. ಅಲ್ಲದೇ ೪೧ ಲಕ್ಷ ಮಂದಿಗೆ ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳನ್ನು ನೊಂದಾಯಿಸಲಾಗಿದ್ದು, ಅನೇಕರು ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಬಿ.ಸಿ.ಗೀತಾ, ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರಾದ ಎಚ್.ಬಿ.ಶಿವಣ್ಣ, ಎಸ್.ಎನ್.ರಾಮಸ್ವಾಮಿ, ಎಸ್.ಜಿ. ರಾಮಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಂಗನಾಥ್, ನಿರ್ದೇಶಕ ಈಶ್ವರಹಳ್ಳಿ ಮಹೇಶ್ ಮತ್ತಿತರರಿದ್ದರು.