ರಸ್ತೆ ಗುಂಡಿಮಯ, ಜನರ ಸ್ಥಿತಿ ಅಯೋಮಯ

13-ANP-P1 ISLAMPURA ROAD
ಆನಂದಪುರದ ಲಕ್ಕವಳ್ಳಿ ಮೂಲಕ ಬೆನವಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆಯ ದುಸ್ಥಿತಿ.
Published on

ಕೌಸ್ತುಭ ಹೆಗಡೆ ಆನಂದಪುರ

ಮುರುಘಾ ಮಠದಿಂದ ಲಕ್ಕವಳ್ಳಿ ಮೂಲಕ ಬೆನವಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆ ಅತ್ಯಂತ ದುರವಸ್ಥೆಯಿಂದ ಕೂಡಿದೆ. ರಸ್ತೆಯಲ್ಲಿ ಇಸ್ಲಾಂಪುರದವರೆಗೆ ಡಾಂಬರು ಕಿತ್ತುಹೋಗಿ, ಜಲ್ಲಿಕಲ್ಲುಗಳು ಮೇಲೆದ್ದಿವೆ. ಈಗ ಹೊಂಡ ಗುಂಡಿಗಳಿಂದ ಕೂಡಿದ ಮಣ್ಣಿನ ರಸ್ತೆ ಮಾತ್ರ ಉಳಿದುಕೊಂಡಿದೆ.

12 ವರ್ಷಗಳ ಹಿಂದೆ ಮರು ಡಾಂಬರೀಕರಣ ಕಂಡಿದ್ದ ಈ ರಸ್ತೆ, ಸಂಪೂರ್ಣ ಹಾಳಾಗಿ ಐದು ವರ್ಷಗಳಾಗಿವೆ. ಈ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು, ವಯೋವೃದ್ಧರು, ಅಶಕ್ತ ಮಹಿಳೆಯರು ಓಡಾಡುವುದೇ ದುಸ್ತರವಾಗಿದೆ. ಆನಂದಪುರ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುರುಘಾ ಮಠದ ವೃತ್ತದಿಂದ ಇಸ್ಲಾಂಪುರ, ಹೊಳ್ಳೂರು, ಲಕ್ಕವಳ್ಳಿ, ಮಾದಾಪುರ, ಕೆಂಚನಾಲ ಮೂಲಕ ಶಿವಮೊಗ್ಗ - ಹೊಸನಗರ ಮಾರ್ಗದಲ್ಲಿ ಬೆನವಳ್ಳಿ ಗ್ರಾಮ ಸಂಪರ್ಕಿಸುವ ಪ್ರಮುಖ ರಸ್ತೆ ಇದೆ.

ಈ ಮಾರ್ಗದಲ್ಲಿ ಸುಮಾರು ಏಳು ನೂರಕ್ಕೂ ಅಕ ಕುಟುಂಬಗಳಿವೆ. ಪ್ರತಿದಿನ ನೂರಾರು ಜನ ಓಡಾಡುತ್ತಾರೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು, ಕಾರು, ಜೀಪು ಮತ್ತಿತರ ವಾಹನಗಳು ಅಕ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಆದರೆ ರಸ್ತೆ ಸರಿಯಾಗಿರದ ಕಾರಣ ಜನರಿಗೆ ತೊಂದರೆಯಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಸ್ಲಾಂಪುರದಲ್ಲಿ ಸುಮಾರು 1 ಕಿ.ಮೀ. ಉದ್ದಕ್ಕೂ ಈ ರಸ್ತೆ ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದೆ. ದ್ವಿಚಕ್ರ ವಾಹನಗಳ ಸವಾರರು ಗುಂಡಿಮಯ ರಸ್ತೆಯಲ್ಲಿ ಓಡಾಡಲು ಹರಸಾಹಸ ಮಾಡಬೇಕು. ಅಲ್ಪ ಸ್ವಲ್ಪ ಮಳೆ ಬಂದರೂ ಗುಂಡಿಯಲ್ಲಿ ನೀರು ತುಂಬಿ ಕೆಸರುಮಯವಾಗುತ್ತದೆ. ಶಾಲಾ ಮಕ್ಕಳು ನಡೆದು ಸಾಗುವಾಗ ವಾಹನ ಬಂದರೆ ಕೆಸರಿನ ನೀರು ಸಿಡಿಯುತ್ತಿದೆ. ಈ ಮಾರ್ಗದ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸೇರಿಸಿದರೆ ಗುಣಮಟ್ಟದ ರಸ್ತೆ ನಿರ್ಮಾಣ ಸಾಧ್ಯವಿದೆ. ಈ ರಸ್ತೆಯ ಕೆಲ ಭಾಗದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣದ ಅಗತ್ಯವಿದೆ.

ಮುರುಘಾ ಮಠ- ಲಕ್ಕವಳ್ಳಿ ಸಂಪರ್ಕದ ರಸ್ತೆ ಇಸ್ಲಾಂಪುರದಲ್ಲಿ ಅತ್ಯಕ ಗುಂಡಿಗಳಾಗಿರುವ ಬಗ್ಗೆ ಸಾಗರ ಶಾಸಕರ ಗಮನಕ್ಕೆ ತರಲಾಗಿದೆ. ಮರು ಡಾಂಬರೀಕರಣಕ್ಕೆ ಶೀಘ್ರದಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.

ಖಲೀಮುಲ್ಲಾ. ಆಚಾಪುರ ಗ್ರಾಪಂ ಅಧ್ಯಕ್ಷ

ಇಸ್ಲಾಂಪುರ ಗ್ರಾಮದಲ್ಲಿ ಸಂಪರ್ಕ ರಸ್ತೆ ಅತ್ಯಂತ ಶಿಥಿಲವಾಗಿದೆ. ಕಳೆದ ಐದು ವರ್ಷದಿಂದ ಜನಪ್ರತಿನಿಗಳಿಗೆ ಮನವಿ ಕೊಟ್ಟರೂ ಸ್ಪಂದನೆ ದೊರೆತಿಲ್ಲ.

ಮುನೀರ್ , ಇಸ್ಲಾಂಪುರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net