

ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾ.ಪಂ. ವ್ಯಾಪ್ತಿಯ ಸಂಪೆಬೈಲ್ದಲ್ಲಿ ತೋಟದ ಕೆಲಸ ಮಾಡುತ್ತಿದ್ದ ವೇಳೆ ಮಣ್ಣಿನ ಧರೆ ಕುಸಿದು ಮೃತಪಟ್ಟ ಹೊಸಳ್ಳಿಯ ಕೂಲಿ ಕಾರ್ವಿುಕರ ಮನೆಗಳಿಗೆ ಭಾನುವಾರ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಭೇಟಿ ನೀಡಿದರು. ಮೃತ ಕಾರ್ವಿುಕರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೃತ ಕಾರ್ವಿುಕರ ಕುಟುಂಬದವರಿಗೆ ಸಚಿವರು ವೈಯಕ್ತಿಕವಾಗಿ ತಲಾ 25 ಸಾವಿರ ರೂಪಾಯಿ ಧನ ಸಹಾಯ ಮಾಡಿದರು. ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರ ಕೊಡುವುದಲ್ಲದೇ, ಇಲಾಖೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಕೊಡಿಸುವ ಬಗೆಗೂ ಭರವಸೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜಿ.ಎನ್. ಗಾಂವ್ಕಾರ, ಎಪಿಎಂಸಿ ಉಪಾಧ್ಯಕ್ಷ ರಾಘವೇಂದ್ರ ಗೊಂದಿ, ಸ್ಥಳೀಯ ಪ್ರಮುಖರಾದ ರೆಹಮತ್ ಅಬ್ಬಿಗೇರಿ, ದೊಂಡು ಪಾಟೀಲ್, ವಿಜಯ ಮಿರಾಶಿ, ಕಾರ್ವಿುಕ ಅಧಿಕಾರಿ ಅಕ್ಬರ್ ಮುಪಿಲ್ಲಾ ಇತರರಿದ್ದರು.