ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸಲು ವಿಶೇಷ ಆಂದೋಲನ

ctd zp ceo sj somashekar-----
Published on

ಚಿತ್ರದುರ್ಗ: ಪ್ಲಾಸ್ಟಿಕ್ ಮಾಲಿನ್ಯ ಸಂಪೂರ್ಣ ತಡೆಯುವುದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಮೇ 22ರಿಂದ ಆರಂಭವಾಗಿರುವ ವಿಶೇಷ ಜಾಗೃತಿ ಆಂದೋಲನ ಜೂ.5 ರವರೆಗೆ ಎಲ್ಲ ಗ್ರಾಪಂಗಳಲ್ಲಿ ನಡೆಯಲಿದೆ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.

ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವ ಧ್ಯೇಯದೊಂದಿಗೆ ವಿಶ್ವ ಪರಿಸರ ದಿನ ಆಚರಿಸುತ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸ್ವಚ್ಛ ಭಾರತ್‌ಮಿಷನ್(ಗ್ರಾ)ಯೋಜನೆಯ ಪ್ರಮುಖ ಭಾಗವಾಗಿದೆ. ಜಾಗೃತಿ ಅಭಿಯಾನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ದುಷ್ಪಾರಿಣಾಮಗಳು ಹಾಗೂ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆಂದೋಲನದ ಸಂದರ್ಭದಲ್ಲಿ ಜಲಮೂಲಗಳ ಸುತ್ತಮುತ್ತ ಸ್ವಚ್ಛಗೊಳಿಸುವುದು. ಗ್ರಾಮಗಳಲ್ಲಿ ಕಸ ಎಸೆಯುವ ಸ್ಥಳಗಳಲ್ಲಿ ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳನ್ನು ಎಸೆಯದಂತೆ ತಿಳಿಸುವುದು. ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳು, ಥರ್ಮಕೋಲ್, ಕ್ಯಾರಿಬ್ಯಾಗ್‌ಗಳು, ಪಾಲಿಥಿನ್ ಬ್ಯಾಗ್‌ಗಳು, ಶ್ಯಾಂಪು ಬಾಟಲಿಗಳು, ಇಯರ್ ಬಡ್ಸ್, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ರೂಪದ ಗಾಜುಗಳು, ಐಸ್‌ಕ್ರೀಂ ಕಡ್ಡಿಗಳು, ಆಹ್ವಾನ ಪತ್ರಿಕೆಗಳು, ಸಿಗರೇಟ್ ಪ್ಯಾಕ್ ಇತ್ಯಾದಿಗಳು, ಪ್ಲಾಸ್ಟಿಕ್ ವಸ್ತು ಮತ್ತು ಕವರ್‌ಗಳನ್ನು ಉತ್ಪಾದಿಸುವ, ಮಾರಾಟ ಮಾಡುವ ಅಂಗ ಡಿ, ಹೋಟೆಲ್, ಬೇಕರಿ ಇತರೆ ವಾಣಿಜ್ಯ ಮಳಿಗೆಗಳನ್ನು ತಪಾಸಣೆ ಮಾಡುವುದು. ಬಳಕೆಯಾದ ಪ್ಲಾಸ್ಟಿಕ್ ವಸ್ತು ಗಳನ್ನು ಸೂಕ್ತ ವಿಲೇವಾರಿ ಮಾಡುವಂತೆ ಪ್ರೇರೆಪಿಸುವುದು. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಮಾಡಿ, ವಿಂಗಡಿಸಿ, ವೈಜ್ಞಾನಿಕ ವಿಲೇವಾರಿಗೆ ಕ್ರಮ ವಹಿಸುವುದು.

ಪ್ಲಾಸ್ಟಿಕ್ ತ್ಯಾಜ್ಯನಿರ್ವಹಣಾ ಘಟಕಗಳ ಕಡೆ ಗಮನಹರಿಸುವುದು, ಜಲಮೂಲಗಳನ್ನು ಪ್ಲಾಸ್ಟಿಕ್ ಹಾವಳಿಯಿಂದ ರಕ್ಷಣೆ ಮಾಡುವುದು, ಪ್ಲಾಸ್ಟಿಕ್ ವೈಜ್ಞಾನಿಕ ವಿಲೇವಾರಿಗೆ ಕ್ರಮವಹಿಸುವುದು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆಗೆ ಸ್ಥಳ ಗು ರುತಿಸುವುದು ವಿಶೇಷ ಆಂದೋಲನದ ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಯುವಜನರು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಸ್ವಯಂ ಸೇವಕರು, ಗ್ರಾಮದ ಮುಖಂಡರು ಅಭಿಯಾನದಲ್ಲಿ ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಸಹಕರಿಸಬೇಕು ಎಂದು ಸಿಇಒ ಮನವಿ ಮಾಡಿದ್ದಾರೆ.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net