ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು

Published on

ಚಿಕ್ಕನಾಯಕನಹಳ್ಳಿ:- ಬೈಕ್​ ಹಾಗೂ ಟಾಟಾ ಎಸಿ ವಾಹನ ಡಿಕ್ಕಿ ಬೈಕ್​ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದರೆ, ಬೈಕ್​ಗೆ ಲಾರಿ ಡಿಕ್ಕಿಯಾಗಿ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ತಾಲೂಕಿನ 150ಎ ರಾಷ್ಟ್ರೀಯ ಹೆದ್ದಾರಿ ಸಾಲಕಟ್ಟೆ ಕ್ರಾಸ್​ ಬಳಿ ಶುಕ್ರವಾರ ಸಂಜೆ ಚಿಕ್ಕನಾಯಕನಹಳ್ಳಿ ಕಡೆಯಿಂದ ಹುಳಿಯಾರಿನ ಕಡೆಗೆ ಹೋಗುತ್ತಿದ್ದ ಟಾಟಾ ಎಸಿ ಹಾಗೂ ಸಾಲಕಟ್ಟೆ ಕ್ರಾಸ್​ ಕಡೆಯಿಂದ ಚಿ.ನಾ. ಹಳ್ಳಿ ಕಡೆಗೆಬಂದ ಬೈಕ್​ ನಡುವೆ ಅಪಘಾತವಾಗಿದೆ. ಸಾಲಕಟ್ಟೆ ಗ್ರಾಮದ ಯುವಕ ಯಶವಂತ್​ (25) ಮೃತಪಟ್ಟಿದ್ದಾನೆ. ಶೆಟ್ಟಿಕೆರೆ ಬಳಿ ರಾತ್ರಿ ಚಿಕ್ಕನಾಯಕನಹಳ್ಳಿ ಕಡೆಯಿಂದ ಹೋಗುತ್ತಿದ್ದ ಲಾರಿ ಮತ್ತು ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಬೈಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ಶೆಟ್ಟಿಕೆರೆ ಹೋಬಳಿಯ ಅಜ್ಜನಕೆರೆ ಪಾಳ್ಯದ ಬೈಕ್​ ಸವಾರ ಎ.ಎಸ್​.ಮಂಜುನಾಥ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net