ಪ್ರಣವಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ

5-RNR-01
Published on

ರಾಣೆಬೆನ್ನೂರ: ತಾಲೂಕಿನ ಅರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರ ಮಠದ ಪೀಠಾಧಿಪತಿ ಹಾಗೂ ಹಿಂದುಪರ ಹೋರಾಟಗಾರ ಪ್ರಣವಾನಂದ ಸ್ವಾಮೀಜಿ ಅವರಿಗೆ, 15 ದಿನದಲ್ಲಿ ಕೊಲೆ ಮಾಡುವುದಾಗಿ ಬೆದರಿಸುವ ಪತ್ರ ಬಂದಿದ್ದು, ಈ ಕುರಿತು ಸ್ವಾಮೀಜಿ ಗ್ರಾಮೀಣ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

‘ನೀವು ಹಾಕಿದ ಮಾಹಿತಿ ಹಕ್ಕುಗಳ ಅರ್ಜಿಯನ್ನು ವಾಪಸ್ ಪಡೆಯಬೇಕು. ಮಠದಲ್ಲಿ ಪೂಜೆ ಮಾಡಿಕೊಂಡು ಇರಬೇಕು. ಬೇರೆ ಯಾವ ಕೆಲಸಕ್ಕೆ ಬರಬಾರದು. ಇಲ್ಲವಾದರೆ ಮುಂದಿನ 15 ದಿನದಲ್ಲಿ ನಿಮ್ಮ ಸಾವು ಖಚಿತ’ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಅರೇಮಲ್ಲಾಪುರ ಗ್ರಾಪಂನಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆಗಿದೆ. ಈ ಬಗ್ಗೆ ನಾನು ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದ್ದೇವೆ. ಅಲ್ಲದೆ, ಹಿಂದುಪರ ಹೋರಾಟವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಈ ಎರಡೂ ವಿಚಾರಕ್ಕೆ ಸಂಬಂಧಪಟ್ಟವರು ನನಗೆ ಬೆದರಿಕೆ ಪತ್ರ ಹಾಕಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ನನಗೆ ಸಂಶಯ ಇರುವ 11 ಜನರ ವಿರುದ್ಧ ಈಗಾಗಲೇ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದೇನೆ. ಯಾರು ಏನೇ ಪತ್ರ ಬರೆದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅರೇಮಲ್ಲಾಪುರ ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರವನ್ನು ಬಯಲಿಗೆಳೆಯುತ್ತೇನೆ. ಅನ್ಯಾಯದ ವಿರುದ್ಧ ನನ್ನ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net