ತುಂಗಭದ್ರಾ ನದಿಗೆ ಮೂರು ಸಾವಿರ ಕ್ಯೂಸೆಕ್ ನೀರು

IMG-20201120-WA0007.jpg
Published on

ಬಳ್ಳಾರಿ: ತುಂಗಭದ್ರಾ ಪುಷ್ಕರ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ ಶುಕ್ರವಾರ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ಇಂದಿನಿಂದ ಡಿ.1ರವರೆಗೆ ತುಂಗಭದ್ರಾ ನದಿ ಪುಷ್ಕರ ನಡೆಯಲಿದೆ. ಪುಷ್ಕರ ವೇಳೆ ನದಿಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ.

100.855 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 90.364 ಟಿಎಂಸಿ ಅಡಿ ನೀರು ಇದೆ. ಜಲಾಶಯಕ್ಕೆ ಸರಾಸರಿ 1153 ಕ್ಯೂಸೆಕ್ ಒಳಹರಿವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net