ಜವಳಗೇರಾ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

26SND-06
Published on

ಸಿಂಧನೂರು: ಜವಳಗೇರಾ ವಿವಿಧೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವರಾಜ ನಾಡಗೌಡ ಹಾಗೂ ಉಪಾಧ್ಯಕ್ಷರಾಗಿ ಆಂಜನೇಯ ಸಂಗಟಿ ಅವಿರೋಧವಾಗಿ ಗುರುವಾರ ಆಯ್ಕೆಗೊಂಡರು.

ಸಂಘ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿ ಶಿವಪ್ಪ ಆಯ್ಕೆ ಪ್ರಕಟಿಸಿದರು. ನಿರ್ದೇಶಕರಾದ ಮಲ್ಲನಗೌಡ ಸುಲ್ತಾನಪುರ, ಅಮರೇಗೌಡ ಪಾಟೀಲ್, ರಹೀಂಸಾಬ ಅಬ್ಬಾಸ್, ಹನುಮಂತಪ್ಪ ಭೋವಿ, ವಿರೂಪಾಕ್ಷಪ್ಪ, ಶ್ರೀನಿವಾಸ ಪೂಜಾರಿ, ಸಿಬ್ಬಂದಿ ಬಸನಗೌಡ, ಎಂ.ಸುರೇಶ, ಮಲ್ಲಿಕಾರ್ಜುನ ರಡ್ಡಿ, ಅಮರೇಶ, ಮಹೆಬೂಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net