

ಚಿತ್ರದುರ್ಗ: ನೀರಿನ ಸಂರಕ್ಷಣೆ,ಪ್ರಾಮುಖ್ಯತೆ ಬಗ್ಗೆ ಬರೀ ಭಾಷಣ ಮಾಡುವ,ಆರತಿ ಎತ್ತುವ ಬದಲು,ಜಲಸಂಪನ್ಮೂಲ ಹಾಳು ಮಾಡುವವರ ವಿರು ದ್ಧ ಲಾಠಿ ಎತ್ತ ಬೇಕಿದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು. ಚಿತ್ರದುರ್ಗ ಸೈನ್ಸ್ ಫೌಂಡೇಶನ್‌ನಿಂದ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆ ಉದ್ಘಾಟಿಸಿ ಮಾತನಾಡಿ,ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕಿದೆ. ಪ್ರತಿ ಜೀವಿಗೂ ನೀ ರು ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಶಿಕ್ಷಣ ಸಂಸ್ಥೆ ಕಾರ‌್ಯದರ್ಶಿ ಡಾ.ಕೆ.ಎಂ.ವೀರೇಶ್ ಮಾತನಾಡಿ,ಜನರ ಒಳಿತಿಗಾಗಿ ಅವರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸ ಬೇಕಿದೆ ಎಂದರು. ಫೌಂಡೇಶನ್ ಕಾರ‌್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ಮಾತನಾಡಿ, ನೀರು ಇಲ್ಲದೇ ಇ ರುವ ಈ ಭೂಮಿಯನ್ನು ಊಹಿಸಲೂ ಸಾಧ್ಯವಿಲ್ಲ. ಒಂದು ವೇಳೆ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿ ಎಂದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ‌್ಯೆ ಎಂ.ಆರ್.ಜಯಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ‌್ರಿಸ್ವಾಮಿ,ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ ಇದ್ದರು.ಎಸ್.ಎಂ.ಅಮೂಲ್ಯ ಸ್ವಾಗತಿಸಿ, ಪಿ.ಕಾಂತ ರಾಜ್ ವಂದಿಸಿದರು. ಎಸ್.ವೈಷ್ಣವಿ ನಿರೂಪಿಸಿದರು.