ಚದುರಂಗದಾಟದಲ್ಲಿ ಗೆದ್ದ ಡಾ.ಅಜಯಸಿಂಗ್

2007klb10
Published on

ಕಲಬುರಗಿ: ಅಂತಾರಾಷ್ಟ್ರೀಯ ಚೆಸ್ ದಿನ, ಫಿಡೆ ಶತಮಾನೋತ್ಸವ ನಿಮಿತ್ತ ವಿಧಾನ ಮಂಡಲ, ಭಾರತ್ ಚೆಸ್ ಫೆಡರೇಷನ್ ಸಹಯೋಗದಲ್ಲಿ ಶನಿವಾರ ಬೆಂಗಳೂರಿನ ವಿಧಾನಸೌಧದಲ್ಲಿ ಏರ್ಪಡಿಸಿದ್ದ ರ‍್ಯಾಪಿಡ್ ಚೆಸ್ ಟೂರ್ನಾಮೆಂಟ್ ಪಂದ್ಯಾಟದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರೌಂಡ್ ರಾಬಿನ್ ಲೀಗ್ ಮಾದರಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಬೆಳಗಾವಿಯ ಖಾನಾಪುರದ ಶಾಸಕ ವಿಠಲ್ ಹಲಗೇಕರ್ ಅವರನ್ನು ಪರಾಭವಗೊಳಿಸಿ, ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ಮೊದಲ ಬಾರಿಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಆಸಕ್ತಿಯಿಂದ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net