ಕ್ರೀಡಾಪಟುಗಳು ದುಶ್ಚಟಗಳಿಂದ ದೂರವಿರಲಿ

ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಅಭಿಮತ ಸತ್ಕಾರ ಸಮಾರಂಭ
ಚಿಮ್ಮಡ: ಕ್ರೀಡಾಪಟುಗಳು ದುಶ್ಚಟಗಳಿಂದ ದೂರವಿದ್ದು, ಸತ್ವಯುತ ಆಹಾರ ಸೇವನೆಯೊಂದಿಗೆ ನಯ, ವಿನಯ ಮತ್ತು ವಿನಮ್ರತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಹೇಳಿದರು.

ಗ್ರಾಮದ ಮಲ್ಲಭೂಮಿ ಗರಡಿಮನೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗರಡಿಮನೆ ಕೇವಲ ಮಣ್ಣಿನ ಅಖಾಡವಲ್ಲ. ಅದು ಶಿಸ್ತು, ಪರಿಶ್ರಮ, ಧೈರ್ಯ, ದೈಹಿಕ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವ ಪವಿತ್ರ ಸ್ಥಳವಾಗಿದೆ ಎಂದರು.

ನೀರಿನಿಂದ ಸ್ನಾನ ಮಾಡಿದವನು ಬಟ್ಟೆ ಬದಲಾಯಿಸುತ್ತಾನೆ, ಬೆವರಿನಿಂದ ಸ್ನಾನ ಮಾಡಿದವರು ಚರಿತ್ರೆಯನ್ನೇ ಬದಲಾಯಿಸುತ್ತಾರೆ ಎಂದು ಅವರು ಕ್ರೀಡಾಪಟುಗಳ ಪರಿಶ್ರಮವನ್ನು ಶ್ಲಾಸಿದರು.

ಮುಖಂಡ ರಾಜು ಬಗನಾಳ ಮಾತನಾಡಿ, ಸಿದ್ದು ಕೊಣ್ಣೂರ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಬ್ಬಡ್ಡಿ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದು, ಕ್ರೀಡಾಪಟುಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಗ್ರಾಮದ ಪ್ರಮುಖರಾದ ಗುರಲಿಂಗಪ್ಪ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಮಹಾಲಿಂಗ ಮಾಯಣ್ಣವರ, ಶಿವಪ್ಪ ಪಾಟೀಲ, ಅಶೋಕ ಮೋಟಗಿ, ಬಾಳಪ್ಪ ಗಡೆಪ್ಪನವರ, ಚನ್ನಪ್ಪ ತೇಲಿ, ಬಸವರಾಜ ಮಮದಾಪೂರ, ಮಾರುತಿ ಮಮದಾಪೂರ, ಸಲೀಮ ಸರಕಾವಸ, ಪ್ರಭು ದೇವಗೋಳ, ಶೌಕತ ಪಾಲಭಾವಿ ಸೇರಿ ಹಲವರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಚಿಮ್ಮಡ ಗ್ರಾಮದ ಮಲ್ಲಭೂಮಿ ಗರಡಿಮನೆಯಲ್ಲಿ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸಿದ್ದು ಕೊಣ್ಣೂರ ಸನ್ಮಾನಿಸಿದರು. ಮುಖಂಡ ರಾಜು ಬಗನಾಳ, ಗುರಲಿಂಗಪ್ಪ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಮಹಾಲಿಂಗ ಮಾಯಣ್ಣವರ, ಶಿವಪ್ಪ ಪಾಟೀಲ, ಅಶೋಕ ಮೋಟಗಿ ಇತರರಿದ್ದರು.
Published on: 

ಚಿಮ್ಮಡ: ಕ್ರೀಡಾಪಟುಗಳು ದುಶ್ಚಟಗಳಿಂದ ದೂರವಿದ್ದು, ಸತ್ವಯುತ ಆಹಾರ ಸೇವನೆಯೊಂದಿಗೆ ನಯ, ವಿನಯ ಮತ್ತು ವಿನಮ್ರತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಹೇಳಿದರು.

ಗ್ರಾಮದ ಮಲ್ಲಭೂಮಿ ಗರಡಿಮನೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗರಡಿಮನೆ ಕೇವಲ ಮಣ್ಣಿನ ಅಖಾಡವಲ್ಲ. ಅದು ಶಿಸ್ತು, ಪರಿಶ್ರಮ, ಧೈರ್ಯ, ದೈಹಿಕ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವ ಪವಿತ್ರ ಸ್ಥಳವಾಗಿದೆ ಎಂದರು.

ನೀರಿನಿಂದ ಸ್ನಾನ ಮಾಡಿದವನು ಬಟ್ಟೆ ಬದಲಾಯಿಸುತ್ತಾನೆ, ಬೆವರಿನಿಂದ ಸ್ನಾನ ಮಾಡಿದವರು ಚರಿತ್ರೆಯನ್ನೇ ಬದಲಾಯಿಸುತ್ತಾರೆ ಎಂದು ಅವರು ಕ್ರೀಡಾಪಟುಗಳ ಪರಿಶ್ರಮವನ್ನು ಶ್ಲಾಸಿದರು.

ಮುಖಂಡ ರಾಜು ಬಗನಾಳ ಮಾತನಾಡಿ, ಸಿದ್ದು ಕೊಣ್ಣೂರ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಬ್ಬಡ್ಡಿ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದು, ಕ್ರೀಡಾಪಟುಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಗ್ರಾಮದ ಪ್ರಮುಖರಾದ ಗುರಲಿಂಗಪ್ಪ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಮಹಾಲಿಂಗ ಮಾಯಣ್ಣವರ, ಶಿವಪ್ಪ ಪಾಟೀಲ, ಅಶೋಕ ಮೋಟಗಿ, ಬಾಳಪ್ಪ ಗಡೆಪ್ಪನವರ, ಚನ್ನಪ್ಪ ತೇಲಿ, ಬಸವರಾಜ ಮಮದಾಪೂರ, ಮಾರುತಿ ಮಮದಾಪೂರ, ಸಲೀಮ ಸರಕಾವಸ, ಪ್ರಭು ದೇವಗೋಳ, ಶೌಕತ ಪಾಲಭಾವಿ ಸೇರಿ ಹಲವರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net