ಕುಮಟಾ ಬಾಳಿಗಾ ಕಾಲೇಜ್ ತಂಡ ಪ್ರಥಮ

29 ALN 01
Published on

ಅಳ್ನಾವರ: ನಿರಂತರ ಕ್ರೀಡಾ ಚಟುವಟಿಕೆಗಳಿಂದ ಕ್ರೀಡಾಪಟುಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹá-ದು ಎಂದು ಕಸಾಪ ತಾಲೂಕು ಅಧ್ಯಕ್ಷ ಡಾ. ಬಿ.ಬಿ. ಮೂಡಬಾಗಿಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಕಾಲೇಜ್ ಪ್ರಥಮ ಮತ್ತು ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಂಶುಪಾಲ ಡಾ. ಸಿ.ಎನ್. ಹೊಂಬಾಳೆ, ಲಿಂಗರಾಜ ಮೂಲಿಮನಿ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀಪಾಲ ಕುರಕುರೆ, ಡಾ. ಅಶ್ವಿನಿ ಸುಣಗಾರ, ಗುರುರಾಜ ಎಸ್.ಎನ್., ಮಂಜುನಾಥ ಇದ್ದರು. ಸಿದ್ಧೇಶ್ವರ ಕಣಬರ್ಗಿ, ಪಿ.ಆರ್. ನಾಗರಾಳ ನಿರ್ವಹಿಸಿದರು.

ವಿಜೇತರು: ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಜರá-ಗಿದ ಪ್ರಥಮ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಧಾರವಾಡದ ಜೆಎಸ್​ಎಸ್ ಕಾಲೇಜ್ ಪ್ರಥಮ ಸ್ಥಾನ. ಕೆ.ಜಿ. ನಾಡಿಗೇರ ದೈಹಿಕ ಶಿಕ್ಷಣ ಕಾಲೇಜ್ ದ್ವಿತೀಯ ಸ್ಥಾನ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ತೃತೀಯ ಸ್ಥಾನ ಪಡೆದಿದೆ. ಶನಿವಾರ ನಡೆದ ಅಂತರ್ ವಲಯ ಮಟ್ಟದ ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಿದ್ದವು. ಕುಮಟಾದ ಎ.ವಿ. ಬಾಳಿಗಾ ಪ್ರಥಮ ದರ್ಜೆ ಕಾಲೇಜ್ ತಂಡ ಪ್ರಥಮ ಸ್ಥಾನ ಪಡೆಯಿತು. ಧಾರವಾಡದ ಜೆಎಸ್​ಎಸ್ ಕಾಲೇಜ್ ದ್ವಿತೀಯ. ಸದಾಶಿವಗಡದ ಬಿಜಿವಿಎಸ್ ಕಾಲೇಜ್ ತಂಡ ತೃತೀಯ ಸ್ಥಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net