ಕಾಗಿಣಾ ನದಿಯಲ್ಲಿ ಅಪರಿಚಿತ ದ್ವಿಚಕ್ರ ವಾಹನ ಪತ್ತೆ

1807 MLK 01
Published on

ಮಳಖೇಡ: ಸಮೀಪದ ಸಂಗಾವಿ ಎಂ. ಗ್ರಾಮದ ಬಳಿಯ ಕಾಗಿಣಾ ನದಿಯಲ್ಲಿ ಅಪರಿಚಿತ ದ್ವಿಚಕ್ರ ವಾಹನವೊಂದು ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇತ್ತೀಚೆಗೆ ಕಾಗಿಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ನೀರು ಇಳಿಮುಖವಾಗುತ್ತಿದ್ದಂತೆ ಸೇತುವೆ ಕೆಳಭಾಗದಲ್ಲಿ ಅಪರಿಚಿತ ವಾಹನವೊಂದು ಕಂಡು ಬಂದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಮಳಖೇಡ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ಕಾಯರ್ಾಚರಣೆ ನಡೆಸಿ ದ್ವಿಚಕ್ರ ವಾಹನ ಮೀನುಗಾರರ ಸಹಾಯದಿಂದ ಮೇಲೆತ್ತಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವಾಹನ ಬಜಾಜ್ ಕಂಪನಿಯ ಡಿಸ್ಕವರಿ ಇದ್ದು, ಇದರ ನಂಬರ್ ಪ್ಲೇಟ್ ಹಾಗೂ ಸೀಟ್ ಕಿತ್ತು ಹಾಕಲಾಗಿದೆ. ದ್ವಿಚಕ್ರ ವಾಹನ ಕಾಗಿಣಾ ನದಿಯಲ್ಲಿ ಹೇಗೆ ಬಿತ್ತು, ಯಾರು ತಂದು ಹಾಕಿದರು, ವಾಹನ ಯಾರದು ಎಂಬೆಲ್ಲ ಮಾಹಿತಿ ತನಿಖೆ ನಂತರವೇ ತಿಳಿಯುವುದು. ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡ ಮಳಖೇಡ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net