

ಕಲಬುರಗಿ: ನಗರದ ಹೊರವಲಯದ ಗೀತಾ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಅಮೃತ ಸರೋವರದಲ್ಲಿ ಜೂ.೧೫ರಂದು ಪ್ರಪ್ರಥಮವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷ ಕರ‍್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವಲಯದ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ.ವಿಜಯಾ ದೀದಿ ತಿಳಿಸಿದರು.
೧೫ರಂದು ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧ಗಂಟೆವರೆಗೆ ನಡೆಯಲಿರುವ ವಿಶೇಷ ಕರ‍್ಯಾಗಾರದಲ್ಲಿ ಮೌಂಟ್ ಅಬುವಿನ ರಾಷ್ಟ್ರೀಯ ಮಾಧ್ಯಮ ಕೋ- ರ‍್ಡಿನೇಟರ್ ಶಾಂತನು ಬಾಯ್, ವಿಲಾಸಪುರಿನ ಬಿಕೆ ಮಂಜುಳಾ ಬೆಹೇನ್, ಹೈದರಾಬಾದನ ಸರಳಾ ಬೆಹೇನ್ ಸೇರಿ ಇತರರು ಭಾಗಿಯಾಗಲಿದ್ದು, ಕರ‍್ಯಾಗಾರದ ನಂತರ ಪ್ರಸಾದದ ವ್ಯವಸ್ಥೆ ಇದೆ ಎಂದು ನಗರದ ಆರ‍್ಶ ಕಾಲನಿಯ ಬ್ರಹ್ಮಕುಮಾರಿ ಸತ್ಯತರ‍್ಥ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾತಿ, ಮತ, ಸಂಪ್ರದಾಯ ಕಟ್ಟಡಗಳಿಂದ ಹೊರಬಂದು ಶಾಂತಿ ನೆಲೆಸಲು ಆಧ್ಯಾತ್ಮಿಕ ಕ್ರಾಂತಿ ಎಲ್ಲ ಕ್ಷೇತ್ರಗಳಲ್ಲೂ ವಿಸ್ತರಿಸಲು ನಮ್ಮ ಸಂಸ್ಥೆ, ವಿಶ್ವದ ೧೪೦ ದೇಶಗಳಲ್ಲಿ ಶಾಂತಿ ಸಂದೇಶ ಸಾರುತ್ತಿದೆ. ಸಮಾಜದಲ್ಲಿನ ಅಡ್ಡಿ ಆತಂಕಗಳ ಮಧ್ಯೆ ಸತ್ಯ ಎತ್ತಿ ತೋರಿಸುತ್ತಿರುವ ಮಾಧ್ಯಮದ ಪ್ರತಿನಿಧಿಗಳಿಗೆ ಈ ವಿಶೇಷ ಕರ‍್ಯಾಗಾರ ಹಮ್ಮಿಕೊಳ್ಳಲಾಗಿದೆ. ಪರಿವಾರದ ಸಮೇತ ಬರಬೇಕು ಎಂದರು.
ವಲಯ ನರ‍್ದೇಶಕ ಬಿಕೆ ಪ್ರೇಮ್ ಭಾಯಿ ಮಾತನಾಡಿ, ವಿವಿಧ ಕ್ಷೇತ್ರದವರಿಗೆ ನಿರಂತರ ಕರ‍್ಯಾಗಾರ ಹಮ್ಮಿಕೊಳ್ಳುತ್ತಿದ್ದು, ಜೂ.೨೧ರಂದು ವಿಶ್ವ ಯೋಗ ದಿನ, ೨೮, ೨೯ರಂದು ವೈದ್ಯಕಿಯ ಪರ‍್ಣಗೊಳಿಸಿದ ವೈದ್ಯರಿಗೆ ಮೌಲ್ಯಯುತ ಶಿಕ್ಷಣ ಕುರಿತ ಕರ‍್ಯಾಗಾರ ನಡೆಯಲಿದೆ ಎಂದರು.
ಅಮೃತ ಸರೋವರದ ಸಂಚಾಲಕಿ ಬಿಕೆ ಶಿವಲೀಲಾ, ಬಿಕೆ ರಾಗಿಣಿ ಅಕ್ಕ, ಬಿಕೆ ಶರಣಬಸಪ್ಪಾ ಹೀರಾ, ಉದಯಕುಮಾರ ಜೇರ‍್ಗಿ ಇತರರಿದ್ದರು.