

ಚಿತ್ರದುರ್ಗ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಬಲಿಯಾದವರ ಸ್ಮರಣಾರ್ಥ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಬುಧವಾರ ಮೇಣದ ಬತ್ತಿಯೊಂದಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಉಗ್ರರ ದಾಳಿಯನ್ನು ಖಂಡಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ಪದಾಧಿಕಾರಿಗಳಾದ ಸಂಪತ್‌ಕುಮಾರ್, ಎಸ್.ಎನ್.ರವಿಕುಮಾರ್, ಡಾ.ದಾದಾಪೀರ್, ವಸೀಂ, ವೈಶಾಕ್‌ಯಾದವ್, ಸಮರ್ಥರಾಯ್, ಪವನ್, ಇಂಜುಮಾಮ್, ದರ್ಶನ್, ಮಹಂತೇಶ್, ಪವನ್ ಇತರರಿದ್ದರು.