ಅಸ್ವಸ್ಥರ ಆರೋಗ್ಯ ವಿಚಾರಿಸಿದ ಶಾಸಕ ಚಂದ್ರಪ್ಪ

MLA
Published on

ಚಿತ್ರದುರ್ಗ: ತಾಲೂಕಿನ ಭರಮಸಾಗರ ಹೋಬಳಿಯ ಕಾಲ್ಗೆರೆ ಗ್ರಾಮದಲ್ಲಿ ಶನಿವಾರ ಮದುವೆ ಊಟ ಸೇವಿಸಿ ಅಸ್ವಸ್ಥರಾಗಿ, ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದವರ ಆರೋಗ್ಯವನ್ನು ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ವಿಚಾರಿಸಿದರು.

ಮದುವೆ ಊಟ ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಯಾರಿಗೂ ತೊಂದರೆಯಾಗದಂತೆ ಚಿಕಿತ್ಸೆ ನೀಡುವಂತೆ ಶಾಸಕರು ಆಸ್ಪತ್ರೆಯ ವೈದ್ಯರಾದ ಶಿವರಾಜ್, ವೇದಮೂರ್ತಿ, ಲೋಹಿತ್ ತಂಡಕ್ಕೆ ಸೂಚಿಸಿದರು. ಶೈಲೇಶ್, ಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net