

ಬಾಗಲಕೋಟೆ: ಬ್ಯಾಂಕ್ ಅಧಿಕಾರಿಗಳು ಮುದ್ರಾ ಯೋಜನೆಯಡಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ತಿರಸ್ಕರಿಸದೇ, ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಿ, ಕೌಶಲ ಅಭಿವೃದ್ಧಿ ಹಾಗೂ ಸ್ವಾ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಗ್ರಾಣಿ ಬ್ಯಾಂಕ್ (ಲೀಡ್ ಬ್ಯಾಂಕ್) ಜಿಲ್ಲಾ ಮಟ್ಟದ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ ಸಿಗುವದಿಲ್ಲ ಎನ್ನುವಂತಾಗಬಾರದು. ಸರ್ಕಾರದ ಯೋಜನೆಗಳು ಯಶಸ್ವಿಗೊಳ್ಳಬೇಕು ಎಂದರೇ ಜನರಲ್ಲಿ ಅರಿವು ಮೂಡಿಸುವುದು ಕೂಡ ಅಗತ್ಯವಾಗಿರುತ್ತದೆ ಎಂದರು.
ಅಽಕಾರಿಗಳು ಆಸಕ್ತಿ ವಹಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಲ ಸೌಲ ಸೌಲಭ್ಯವನ್ನು ನೀಡುವ ಕಾರ್ಯ ಮಾಡಬೇಕು. ಕಳೆದ ಆರು ತಿಂಗಳುಗಳಿAದ ಕೆಲವೊಂದು ಅರ್ಜಿಗಳನ್ನು ಬಾಕಿ ಇಟ್ಟುಕೊಂಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದು, ಬಾಕಿ ಇರುವ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡತಕ್ಕದ್ದು, ಹೆಚ್ಚಿನ ಸ್ವ ಸಹಾಯ ಸಂಘಗಳಿಗೆ ಯಾವ ಚಟುವಟಿಕೆ ಕೈಗೊಂಡರೆ ಹೆಚ್ಚಿನ ಲಾಭವಾಗುತ್ತದೆ ಎಂಬ ಮಾಹಿತಿ ಇರುವದಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮ, ಕೃಷಿ ಇಲಾಖೆ ಮತ್ತು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಗಳು ಅಗತ್ಯ ತರಬೇತಿ ನೀಡುವ ಮೂಲಕ ಸ್ವ ಸಹಾಯ ಗುಂಪುಗಳು ಆರ್ಥಿಕ ಸಫಲತೆ ಕಾಣುವಂತೆ ಮಾಡಬೇಕು ಎಂದು ಹೇಳಿದರು.
ಬಾಗಲಕೋಟೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಸಿ. ಮಧುಸೂಧನ ಮಾತನಾಡಿ, ಮೂರು ತಿಂಗಳಿಗಿಂತ ಹೆಚ್ಚಿನ ಅವಽಗೆ ಬಾಕಿ ಇದ್ದಂತಹ ಸಾಲ ಸೌಲಭ್ಯಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿಗಳನ್ನೆಲ್ಲ ವಿವಿಧ ಬ್ಯಾಂಕುಗಳ ಎಲ್ಲ ಶಾಖೆಗಳಲ್ಲಿ ಇತ್ಯರ್ಥಗೊಳಿಸಲಾಗಿರುತ್ತದೆ. ಕರ್ನಾಟಕ ಬ್ಯಾಂಕ್‌ನಲ್ಲಿ ೨೮, ಐಡಿಎಫ್‌ಸಿ ಯಲ್ಲಿ ೬ ಹಾಗೂ ಐಸಿಐಸಿ ಬ್ಯಾಂಕ್‌ನಲ್ಲಿ ೪ ಅರ್ಜಿ ಇನ್ನೂ ಬಾಕಿ ಇದ್ದು ಅವನ್ನೂ ಕೂಡ ಬೇಗ ಇತ್ಯರ್ಥಪಡಿಸಲಾಗುವುದು. ಪಿ.ಎಂ. ಸ್ವಾನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗಳಿಗೆ ಮೂರು ಹಂತಗಳಲ್ಲಿ ಸಾಲ ಸೌಲಭ್ಯ ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಒ ಟಿ.ಭೂಬಾಲನ್, ಎಸ್.ಬಿ.ಐ ಹಾಗೂ ಕೆನರಾ ಬ್ಯಾಂಕ್ ರೀಜ್‌ನಲ್ ಮ್ಯಾನೇಜರ್‌ಗಳಾದ ನರಸಿಂಹ ಮೂರ್ತಿ, ಕೆ.ಆರ್.ಶೈಲಜಾ, ಆರ್‌ಬಿಐನ ಎಲ್ ಡಿ ಒ ಎಂ.ಎ.ಪಾಠಕ್ ಮತ್ತು ವಿವಿಧ ಬ್ಯಾಂಕ್, ಇಲಾಖೆಗಳ ಜಿಲ್ಲಾ ಮಟ್ಟದ ಅಽಕಾರಿ ಮತ್ತು ಸಿಬ್ಬಂದಿ ಇದ್ದರು.